ರಾಯ್ಸ್ಟೋನಿಯಾ ರೆಜಿಯಾ (ಕುಂತ್.) ಒ.ಎಫ್.ಕುಕ್

ಕನ್ನಡದ ಹೆಸರು : -
ಸಾಮಾನ್ಯ ಹೆಸರು : ರಾಯಲ್ ಪಾಮ್
ಕುಟುಂಬದ ಹೆಸರು : ಅರೆಕೇಸಿಯೇ
ವೈಜ್ಞಾನಿಕ ಹೆಸರು : ರಾಯ್ಸ್ಟೋನಿಯಾ ರೆಜಿಯಾ (ಕುಂತ್.) ಒ.ಎಫ್.ಕುಕ್
ಪ್ರಭೇದದ ಪ್ರಕಾರ: ವಿದೇಶಿ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ಕಡಿಮೆ ಕಾಳಜಿ
ಹೂಬಿಡುವ ಅವಧಿ: ಮಾರ್ಚ್ - ಏಪ್ರಿಲ್
ಹಣ್ಣಾಗುವ ಅವಧಿ: ಮಾರ್ಚ್ - ಏಪ್ರಿಲ್
ಮೂಲ: ಮೆಕ್ಸಿಕೋ, ಮಧ್ಯ ಅಮೇರಿಕಾ, ಕೆರಿಬಿಯನ್

ಉಪಯೋಗಗಳು

ಎಲೆಗಳನ್ನು ಹುಲ್ಲಿಗೆ ಬಳಸಲಾಗುತ್ತದೆ, ಮತ್ತು ಮರವನ್ನು ಕಟ್ಟಡಕ್ಕೆ ಬಳಸಲಾಗುತ್ತದೆ. ಬೇರುಗಳು ಮೂತ್ರವರ್ಧಕ ಗುಣಲಕ್ಷಣಗಳನ್ನು ಹೊಂದಿವೆ. ಅವುಗಳನ್ನು ಮಧುಮೇಹ ಚಿಕಿತ್ಸೆಯಾಗಿಯೂ ಬಳಸಲಾಗುತ್ತದೆ.

ವಿವರಣೆ

40 ಮೀ ಎತ್ತರದವರೆಗೆ ಬೆಳೆಯುವ ದೊಡ್ಡ ತಾಳೆ ಜಾತಿಯ ಮರವಾಗಿದೆ. ಸಾಮಾನ್ಯವಾಗಿ ಮರದ ಮಧ್ಯ ದಪ್ಪವಾಗಿರುವಂತೆ ಕಾಣುತ್ತದೆ ಹಾಗೂ ಇವು ಬೂದು ಮಿಶ್ರಿತ ಬಿಳಿ ಬಣ್ಣವನ್ನು ಹೊಂದಿದ್ದು, ನಯವಾದ ಮೇಲ್ಮೈ ಹೊಂದಿರುತ್ತವೆ. ಮರದ ಮೇಲಿನ ಭಾಗವು ದುಂಡಾಗಿರುತ್ತದೆ. (ಸಂಯೋಜಿತ ಎಲೆ) ಕಾಂಡದ ಎರಡೂ ಬದಿಗಳಲ್ಲಿ ಚಿಗುರೆಲೆಗಳು ಜೋಡಿಕೊಂಡಿದ್ದು, ಸಾಮಾನ್ಯವಾಗಿ ಪರಸ್ಪರ ವಿರುದ್ಧವಾಗಿ ಜೋಡಿಯಾಗಿರುತ್ತವೆ. ಎಲೆಗಳು ಕೆಳಕ್ಕೆ ಜೋತುಬಿದ್ದ ರೀತಿಯಲ್ಲಿದ್ದು, ಹಲವಾರು ಚಿಗುರೆಲೆಗಳಾಗಿ ವಿಂಗಡಿಸಿದ, ಕಾಂಡದ ಎರಡೂ ಬದಿಗಳಲ್ಲಿಇಲ್ಲವೇ ಎರಡು ಸಾಲುಗಳಲ್ಲಿ ರೆಕ್ಕಗಳನ್ನು ಹೊಂದಿದ್ದು, ನೇರವಾಗಿ, ತುದಿಯು ಕಿರಿದಾಗಿ ಚೂಪಾಗಿರುತ್ತದೆ. ತೊಟ್ಟುಗಳು ರೋಮರಹಿತವಾಗಿರುತ್ತವೆ, ಮುಳ್ಳನ್ನು ಹೊಂದಿರುವುದಿಲ್ಲ, ನಯವಾಗಿರುತ್ತವೆ, ಕಾಂಡದ ತುದಿಯಲ್ಲಿ ಎಲೆಯ ಪೊರೆಯು ಉದ್ದವಾಗಿದ್ದು ಹೊಳೆಯುವ ಹಸಿರು ಬಣ್ಣದ ಮೇಲ್ಮೈ ಅನ್ನು ರೂಪಿಸುತ್ತದೆ, ಇದು 120 ಸೆಂ.ಮೀ ವರೆಗೆ ಉದ್ದವಿರುತ್ತದೆ; ಎಲೆಗಳ ಕೆಳಗೆ (ಸ್ಪ್ಯಾಡಿಕ್ಸ್) ತಿರುಳಿರುವ ಕಾಂಡದ ಮೇಲೆ ಸಣ್ಣ ಪುಷ್ಪಮಂಜರಿಯನ್ನು ಹೊಂದಿರುತ್ತದೆ. ಹೂವುಗಳು ಏಕಲಿಂಗಿ ಆಗಿದ್ದು, ಬಿಳಿ ಬಣ್ಣದಲ್ಲಿರುತ್ತವೆ, ಮತ್ತು ಪರಾಗಗಳು ಗುಲಾಬಿ ಬಣ್ಣದ್ದಾಗಿರುತ್ತವೆ. ಇದು ತೆಳುವಾದ ಚರ್ಮವನ್ನು ಹೊಂದಿರುವ ತಿರುಳಿರುವ (ಡ್ರೂಪ್) ಹಣ್ಣನ್ನು ಹೊಂದಿದ್ದು, ಗೋಳಾಕಾರದಿಂದ ಅಂಡಾಕಾರವಾಗಿರುತ್ತದೆ ಹಾಗೂ ಹಣ್ಣು ಮರದಿಂದ ಬಿದ್ದ ನಂತರ ಹಣ್ಣಿನ ಬುಡದ ಬಳಿ ಗುರುತನ್ನು ಹೊಂದಿರುತ್ತವೆ.