ಸಮಾನೇಯಾ ಸಮನ್ (ಜಾಕ್.) ಮೆರ್ರ್.

ಕನ್ನಡದ ಹೆಸರು : -
ಸಾಮಾನ್ಯ ಹೆಸರು : ರೇನ್ ಟ್ರೀ
ಕುಟುಂಬದ ಹೆಸರು : ಫ್ಯಾಬೇಸಿ
ವೈಜ್ಞಾನಿಕ ಹೆಸರು : ಸಮಾನೇಯಾ ಸಮನ್ (ಜಾಕ್.) ಮೆರ್ರ್.
ಪ್ರಭೇದದ ಪ್ರಕಾರ: ವಿದೇಶಿ
ಪ್ರಕೃತಿ ಶಾಸ್ತ್ರ : ಪತನಶೀಲ
ಸಂರಕ್ಷಣೆಯ ಸ್ಥಿತಿ : ಕಡಿಮೆ ಕಾಳಜಿ
ಹೂಬಿಡುವ ಅವಧಿ: ಮಾರ್ಚ್ - ಮೇ
ಹಣ್ಣಾಗುವ ಅವಧಿ: ಮಾರ್ಚ್ - ಮೇ
ಮೂಲ: ದಕ್ಷಿಣ ಅಮೇರಿಕ

ಉಪಯೋಗಗಳು

ಅತಿಸಾರವನ್ನು ಒಳ ತೊಗಟೆ ಮತ್ತು ತಾಜಾ ಎಲೆಗಳ ಕಷಾಯದಿಂದ ಚಿಕಿತ್ಸೆ ನೀಡಲಾಗುತ್ತದೆ. ಹೊಟ್ಟೆ ನೋವನ್ನು ನಿವಾರಿಸಲು, ತೊಗಟೆಯ ಸಣ್ಣ ಭಾಗಗಳಿಂದ ಮಾಡಿದ ಪಾನೀಯವನ್ನು (ನೆನೆಸಿ, ಕುದಿಸಿ ಮತ್ತು ಹುದುಗಿಸುವ ಮೂಲಕ ತಯಾರಿಸುವ ಪಾನೀಯ) ಕುಡಿಯಲಾಗುತ್ತದೆ. ಎಲೆಗಳ ಕಚ್ಚಾ ಜಲೀಯ ಅಥವಾ ಆಲ್ಕೊಹಾಲ್ಯುಕ್ತ ಸಾರವು ಮೈಕೋಬ್ಯಾಕ್ಟೀರಿಯಂ ಕ್ಷಯರೋಗವನ್ನು ನಿಗ್ರಹಿಸುತ್ತದೆ ಎಂದು ಕಂಡುಬಂದಿದೆ. ಎಲೆಗಳಿಂದ ವಿರೇಚಕ ಕಷಾಯವನ್ನು ತಯಾರಿಸಲಾಗುತ್ತದೆ. ಹಣ್ಣಿನ ಕಷಾಯವನ್ನು CNS-sedative (ಮೆದುಳಿನ ಚಟುವಟಿಕೆಯನ್ನು ನಿಧಾನಗೊಳಿಸುವ ಔಷಧ) ಮಾಡಲು ಬಳಸಲಾಗುತ್ತದೆ. ಗಂಟಲು ನೋವನ್ನು ನಿವಾರಿಸಲು ಬೀಜಗಳನ್ನು ತಿನ್ನಲಾಗುತ್ತದೆ.

ವಿವರಣೆ

ವಿಶಾಲವಾದ ವಿಶಾಲವಾದ ಮರದ ಮೇಲಿನ ಭಾಗವನ್ನು ಹೊಂದಿರುವ 20 ಮೀ ಎತ್ತರದವರೆಗೆ ಬೆಳೆಯುವ ನಿತ್ಯಹರಿದ್ವರ್ಣ ಅಥವಾ ಪತನಶೀಲ ಮರವಾಗಿವೆ; ತೊಗಟೆಯು ಒರಟಾಗಿದ್ದು, ಬೂದುಬಣ್ಣದಲ್ಲಿರುತ್ತವೆ. ಎಲೆಗಳು ಎರಡು ಬಾರಿ ವಿಂಗಡಿಸಲಾದ ಸಂಯುಕ್ತವಾಗಿ, ಪರ್ಯಾಯವಾಗಿರುತ್ತವೆ, ಮಧ್ಯ ಭಾಗದಲ್ಲಿ 2 ರಿಂದ 6 ಎಲೆಗಳು ಜೋಡಿಯಾಗಿರುತ್ತವೆ; 6 ರಿಂದ 16 ಚಿಗುರೆಲೆಗಳ ಜೋಡಿಗಳು, ಸಮಾನಾಂತರ ಚತುರ್ಭುಜದಿಂದ-ಅಂಡಾಕಾರದ ಆಕಾರದಲ್ಲಿರುತ್ತವೆ. ಒಂದೇ ರೀತಿಯಾಗಿರದ ಇವು , ಸಂಯುಕ್ತ ಎಲೆಯ ಪ್ರಾಥಮಿಕ ಚಿಗುರೆಲೆಗಳ ಮೇಲ್ಭಾಗದ (ಪಿನ್ನಾ) ಕಡೆಗೆ ಗಾತ್ರದಲ್ಲಿ ಹೆಚ್ಚಾಗುತ್ತವೆ, ಮೇಲೆ ರೋಮರಹಿತವಾಗಿರುತ್ತವೆ, ಕೆಳಗೆ ಮೃದುತುಪ್ಪಳದಿಂದ ಕೂಡಿರುತ್ತವೆ, ಬುಡ ಚೂಪಾದ, ತುದಿ ಮೊಂಡಾದ ಅಥವಾ ದುಂಡಾಗಿದ್ದು, ಸಂಪೂರ್ಣ ಅಂಚುನ್ನು ಹೊಂದಿರುತ್ತವೆ. ಪುಷ್ಪಮಂಜರಿ ಒಂದು ಸಾಮಾನ್ಯ ಬಿಂದುವಿನಿಂದ ಹರಡುವ ಹಲವಾರು ಸಣ್ಣ ಹೂವಿನ ಕಾಂಡಗಳನ್ನು ಒಳಗೊಂಡಿರುತ್ತದೆ, ಸ್ವಲ್ಪಮಟ್ಟಿಗೆ ಛತ್ರಿಯ ತಲೆಯಂತೆ ಕಾಣುತ್ತದೆ. ಹೂವುಗಳು ದ್ವಿಲಿಂಗಿಯಾಗಿದ್ದು, ಹಸಿರು ಹಾಲೆಗಳೊಂದಿಗೆ ಗುಲಾಬಿ ಬಣ್ಣದಲ್ಲಿರುತ್ತವೆ. ಬೀಜವನ್ನು ಬಿಡುಗಡೆ ಮಾಡಲು ಬಿರಿಯದ (ಪಾಡ್) ಹಣ್ಣನ್ನು ಹೊಂದಿದ್ದು, ಕಂಡು ಅಥವಾ ಕಪ್ಪು ಬಣ್ಣವನ್ನು ಹೊಂದಿರುತ್ತವೆ ಹಾಗೂ ಉದ್ದವಾಗಿ ಹಣ್ಣುಗಳ ಬದಿಯಲ್ಲಿ ಸ್ವಲ್ಪ ತಿರುಳನ್ನು ಹೊಂದಿರುತ್ತವೆ.