ಕನ್ನಡದ ಹೆಸರು : | Chandana, Srigandha ಚಂದನ, ಶ್ರೀಗಂಧ |
ಸಾಮಾನ್ಯ ಹೆಸರು : | ಇಂಡಿಯನ್ ಸ್ಯಾಂಡಲ್ ವುಡ್ ಟ್ರೀ |
ಕುಟುಂಬದ ಹೆಸರು : | ಸಂತಾಲೇಸಿ |
ವೈಜ್ಞಾನಿಕ ಹೆಸರು : | ಸ್ಯಾಂಟಲಮ್ ಆಲ್ಬಮ್ ಎಲ್. |
ಪ್ರಭೇದದ ಪ್ರಕಾರ: | ಸ್ವದೇಶಿ |
ಪ್ರಕೃತಿ ಶಾಸ್ತ್ರ : | ನಿತ್ಯಹರಿದ್ವರ್ಣ |
ಸಂರಕ್ಷಣೆಯ ಸ್ಥಿತಿ : | ದುರ್ಬಲವಾಗಿರುವ ಮರಗಳು (ಅಳಿವಿನ ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುವ) |
ಹೂಬಿಡುವ ಅವಧಿ: | ಮಾರ್ಚ್ - ಏಪ್ರಿಲ್ |
ಹಣ್ಣಾಗುವ ಅವಧಿ: | ಜೂನ್ - ಸೆಪ್ಟೆಂಬರ್ |
ಮೂಲ: | ಭಾರತ, ಆಗ್ನೇಯ ಏಷ್ಯಾ |
ಮರದ ಕಟ್ಟಿಗೆ ಅಥವಾ ಸಾರಭೂತ ತೈಲವನ್ನು ಜೆನಿಟೋ(ಜನನಾಂಗ) -ಮೂತ್ರದ ಕಾಯಿಲೆಗಳು, ಜ್ವರ, ಸೂರ್ಯನಿಗೆ ಅತಿಯಾದ ಒಡ್ಡಿಕೊಳ್ಳುವಿಕೆಯಿಂದ ಉಂಟಾಗುವ ಶಾಖದ ಹೊಡೆತ, ಜೀರ್ಣಕಾರಿ ತೊಂದರೆಗಳು ಮತ್ತು ಕಿಬ್ಬೊಟ್ಟೆಯ ನೋವಿನ ಚಿಕಿತ್ಸೆಯಲ್ಲಿ ಬಾಯಿಯ ಮೂಲಕ ತೆಗೆದುಕೊಳ್ಳಲಾಗುತ್ತದೆ. ಬಾಹ್ಯವಾಗಿ, ಮರದಿಂದ ಮಾಡಿದ ಪೇಸ್ಟ್ ಅನ್ನು ಚರ್ಮದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಹಚ್ಚಲಾಗುತ್ತದೆ.
4 ರಿಂದ10 ಮೀ ಎತ್ತರಕ್ಕೆ ಬೆಳೆಯುವ ನಿತ್ಯಹರಿದ್ವರ್ಣ ಮರವಾಗಿದ್ದು, ಸಾಂದರ್ಭಿಕವಾಗಿ 20 ಮೀ ಎತ್ತರಕ್ಕೂ ಬೆಳೆಯುತ್ತದೆ. ತೊಗಟೆ ಮೇಲ್ಮೈ ಗಾಢ ಬೂದು ಬಣ್ಣದಿಂದ ಸುಮಾರು ಕಪ್ಪು ಬಣ್ಣವನ್ನು ಹೊಂದಿದ್ದು, ಸಣ್ಣ ಲಂಬವಾದ ಬಿರುಕುಗಳೊಂದಿಗೆ ಒರಟಾಗಿರುತ್ತದೆ. ಎಲೆಗಳು ಸರಳ, ವಿರುದ್ಧವಾಗಿ ಕೂಡಿಕೊಂಡಿದ್ದು, ಅಂಡಾಕಾರದಿಂದ ಈಟಿಯ ತಲೆ ಆಕಾರದಿಂದ ಅಂಡಾಕಾರವಾಗಿರುತ್ತದೆ ಹಾಗೂ ರೋಮರಹಿತವಾಗಿರುತ್ತದೆ. ಎಲೆಯ ತಳವು ಚೂಪಾಗಿ ಅಥವಾ ದುಂಡಾಗಿರುತ್ತವೆ, ತುದಿ ಮೊಂಡಾಗಿ ಅಥವಾ ಚೂಪಾಗಿದ್ದು, ಸಂಪೂರ್ಣ ಅಂಚನ್ನು ಹೊಂದಿರುತ್ತವೆ. ಇವು ಅಕ್ಷಾಕಂಕುಳಿನಲ್ಲಿ ಮತ್ತು ಕಾಂಡದ ತುದಿಯಲ್ಲಿ ಸಪಾಟಾದ ತಲೆಯನ್ನು ಹೊಂದಿರುವ ಮಧ್ಯದಲ್ಲಿರುವುವ ಹೂವುಗಳು ಮೊದಲು ತೆರೆದುಕೊಳ್ಳುವ, ನಂತರ ಈರುಳ್ಳಿಯಲ್ಲಿರುವಂತೆ ಬಾಹ್ಯ ಹೂವುಗಳು ತೆರೆದುಕೊಳ್ಳುವ ಕವಲೊಡೆದ ಹೂಗೊಂಚಲನ್ನು ಹೊಂದಿವೆ. ಹೂವುಗಳು ದ್ವಿಲಿಂಗಿಯಾಗಿದ್ದು, ಕೆಂಪು ಮಿಶ್ರಿತ ನೇರಳೆ ಬಣ್ಣದಲ್ಲಿರುತ್ತವೆ. ಇವು ತೆಳುವಾದ ಚರ್ಮ, ತಿರುಳು, ಮದ್ಯದಲ್ಲಿ ಬೀಜವನ್ನು ಹೊಂದಿರುವ (ಡ್ರೂಪ್) ಹಣ್ಣನ್ನು ಹೊಂದಿದ್ದು, ಗೋಳಾಕಾರವಾಗಿ, 8 ರಿಂದ 12 ಮಿಮೀ ದೊಡ್ಡದಾಗಿರುತ್ತದೆ. ಇವು ಕಪ್ಪು ಮಿಶ್ರಿತ ನೇರಳೆ ಬಣ್ಣವನ್ನು ಹೊಂದಿದ್ದು, ಹಣ್ಣಿನ ಮೇಲೆ ಆನುಲಸ್ ಇರುವುತ್ತವೆ ಹಾಗೂ ತಳದ ಭಾಗವು ಚುಂಚನ್ನು ಹೊಂದಿರುತ್ತವೆ; ಇವು ಕೇವಲ ಒಂದು ಬೀಜವನ್ನು ಹೊಂದಿರುತ್ತವೆ.