ಸಪಿಂಡಸ್ ಲಾರಿಫೋಲಿಯಸ್ ವಾಹ್ಲ್.

ಕನ್ನಡದ ಹೆಸರು : Antuvaala ಅಂಟುವಾಳ
ಸಾಮಾನ್ಯ ಹೆಸರು : ಸೌತ್ ಇಂಡಿಯನ್ ಸೋಪ್ನಟ್
ಕುಟುಂಬದ ಹೆಸರು : ಸಪಿಂಡೇಸಿ
ವೈಜ್ಞಾನಿಕ ಹೆಸರು : ಸಪಿಂಡಸ್ ಲಾರಿಫೋಲಿಯಸ್ ವಾಹ್ಲ್.
ಪ್ರಭೇದದ ಪ್ರಕಾರ: ಸ್ವದೇಶಿ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ: ನವೆಂಬರ್ - ಜನವರಿ
ಹಣ್ಣಾಗುವ ಅವಧಿ:
ಮೂಲ: ಭಾರತ

ಉಪಯೋಗಗಳು

ಸೋಪ್‌ಬೆರಿ ಬೀಜದ ತಿರುಳಿನ ಸಾರಗಳು ಲಾರ್ವಾ ಮತ್ತು ಪ್ಯೂಪೆಗಳ ಕಿಣ್ವಗಳ ಚಟುವಟಿಕೆಯನ್ನು ತಡೆಯುತ್ತದೆ ಮತ್ತು ವೇಗವಾಗಿ ಹರಡುವ ರೋಗಗಳ ಪ್ರಮುಖ ವಾಹಕವಾದ ಈಡಿಸ್ ಈಜಿಪ್ಟಿ ಸೊಳ್ಳೆಯ ಬೆಳವಣಿಗೆಯನ್ನು ತಡೆಯುತ್ತದೆ.

ವಿವರಣೆ

25 ಮೀ ಎತ್ತರದವರೆಗೆ ಬೆಳೆಯುವ, ದೊಡ್ಡ ಮರವಾಗಿದ್ದು, ಕಿರುಕೊಂಬೆಗಳು ನೇರಳೆ ಕಂದು ಬಣ್ಣವನ್ನು ಹೊಂದಿರುತ್ತದೆ, ಹಾಗೂ ಲೆಂಟಿಸೆಲ್‌ (ವಾತಾವರಣ ಮತ್ತು ಆಂತರಿಕ ಅಂಗಾಂಶಗಳ ನಡುವೆ ಗಾಳಿಯ ವಿನಿಮಯವನ್ನು ಅನುಮತಿಸುವ ಮರದ ಸಸ್ಯದ ಕಾಂಡದಲ್ಲಿ ಇರುವ ಅನೇಕ ಎತ್ತರದ ರಂಧ್ರಗಳಲ್ಲಿ ಒಂದು) ನಿಂದ ಕೂಡಿರುತ್ತದೆ. ಎಲೆಗಳು ಸಂಯುಕ್ತವಾಗಿ ಒಂದಕ್ಕೊಂದು ಜೋಡಿಯಾಗಿರುತ್ತವೆ. 1 ರಿಂದ 4 ಚಿಗುರೆಲೆಗಳು ಜೋಡಿಯಾಗಿದ್ದು, ಎಲೆಗಳು ವಿರುದ್ದವಾಗಿರುವಂತೆ ಕಾಣುತ್ತವೆ ಆದರೆ ಎಳೆ ಹುಟ್ಟುವ ಜಾಗದಲ್ಲಿ ನಿಖರವಾಗಿ ವಿರುದ್ಧವಾಗಿರುವುದಿಲ್ಲ. ಇವು ಅಂಡಾಕಾರದಿಂದ ಆಯತಾಕಾರ, ಅಂಡಾಕಾರದಿಂದ ಈಟಿಯ ತಲೆಯ ಆಕಾರ ಅಥವಾ ಕಿರಿದಾದ ಅಂಡಾಕಾರದಲ್ಲಿದ್ದು, ರೋಮರಹಿತವಾಗಿರುತ್ತವೆ. ಎಲೆಯ ಮಧ್ಯನಾಳವು ಮೃದುತುಪ್ಪಳದಿಂದ ಕೂಡಿರುತ್ತವೆ. ಚೂಪಾಗಿ ಮೊಟಕುಗೊಳಿಸಿದ ಅಥವಾ ದುಂಡಾದ ತಳ, ಹಾಗೂ ರೆಕ್ಕೆಗಳ ಅಂಚಿನಿಂದ ಕಿರಿದಾಗಿ ಮೊನಚಾಗಿರುವ ತುದಿಯನ್ನು ಹೊಂದಿರುತ್ತದೆ. ಪುಷ್ಪಮಂಜರಿಯು ಕಾಂಡದ ತುದಿಯಲ್ಲಿ ಹೆಚ್ಚು ಕವಲೊಡೆದ ಹೂವುಗಳ ಸಮೂಹವನ್ನು ಹೊಂದಿರುತ್ತದೆ. ಹೂಗಳು ದ್ವಿಲಿಂಗಿಯಾಗಿದ್ದು , ಹಸಿರು ಮಿಶ್ರಿತ ಬಿಳಿ ಬಣ್ಣದಲ್ಲಿರುತ್ತವೆ. ಹಣ್ಣುಗಳು 2 ರಿಂದ 3 ಹಾಲೆಗಳನ್ನು ಹೊಂದಿದ್ದು, ಎಳೆಯದಿದ್ದಾಗ ತುಂಬಾನಯವಾಗಿರುತ್ತದೆ, ಬಲಿತಾಗ ನಯವಾಗಿ ಮತ್ತು ಗಟ್ಟಿಯಾಗಿರುತ್ತದೆ . ಹಣ್ಣಿನ ಕೋಶವು 6 ರಿಂದ 9 ಮಿಮೀ ಉದ್ದದ ಕಪ್ಪು, ದುಂಡಗಿನ ಬೀಜವನ್ನು ಹೊಂದಿರುತ್ತದೆ, ಇದು ಸಾಂಪ್ರದಾಯಿಕ ತೊಳೆಯುವ ಸೋಪ್ ಆಗಿ ಜನಪ್ರಿಯವಾಗಿದೆ.