ಸರಕಾ ಅಸೋಕಾ (ರಾಕ್ಸ್‌ಬಿ.) ಡಬ್ಲ್ಯೂ.ಜೆ.ಡಿ ವೈಲ್ಡ್

ಕನ್ನಡದ ಹೆಸರು : Achange, Ashoka, Eliyaala ಅಚಂಗೆ, ಅಶೋಕ, ಎಲಿಯಾಲ
ಸಾಮಾನ್ಯ ಹೆಸರು : ಅಶೋಕ ಟ್ರೀ
ಕುಟುಂಬದ ಹೆಸರು : ಫ್ಯಾಬೇಸಿ
ವೈಜ್ಞಾನಿಕ ಹೆಸರು : ಸರಕಾ ಅಸೋಕಾ (ರಾಕ್ಸ್‌ಬಿ.) ಡಬ್ಲ್ಯೂ.ಜೆ.ಡಿ ವೈಲ್ಡ್
ಪ್ರಭೇದದ ಪ್ರಕಾರ: ಸ್ವದೇಶಿ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ: ಫೆಬ್ರವರಿ - ಮಾರ್ಚ್
ಹಣ್ಣಾಗುವ ಅವಧಿ: ಜುಲೈ - ಅಕ್ಟೋಬರ್
ಮೂಲ: ಭಾರತೀಯ ಉಪಖಂಡ

ಉಪಯೋಗಗಳು

ತೊಗಟೆಯನ್ನು ಡಿಸ್ಪೆಪ್ಸಿಯಾ (ಅಜೀರ್ಣಕ್ಕೆ ಇನ್ನೊಂದು ಪದ) , ಜ್ವರ ಮತ್ತು ಸುಡುವ ಸಂವೇದನೆಗೆ ಚಿಕಿತ್ಸೆ ನೀಡಲು ಸಹ ಬಳಸಬಹುದು. ಮೆನೋರ್ಹೇಜಿಯಾ (ಮುಟ್ಟಿನ ಸಮಯದಲ್ಲಿ ಅಸಹಜವಾಗಿ ಭಾರೀ ರಕ್ತಸ್ರಾವ), ಲ್ಯುಕೋರೋಹಿಯಾ(ಹೆಣ್ಣಿನ ಯೋನಿಯಿಂದ ಬಿಳಿ, ಹಳದಿ ಅಥವಾ ಹಸಿರು ಬಣ್ಣದ ಸ್ರವಿಸುವಿಕೆ), ಆಂತರಿಕ ರಕ್ತಸ್ರಾವ, ಮೂಲವ್ಯಾಧಿ ಮತ್ತು ರಕ್ತಸ್ರಾವದ ಭೇದಿಗೆ ಸಹ ಚಿಕಿತ್ಸೆ ನೀಡಲಾಗುತ್ತದೆ.

ವಿವರಣೆ

7 ರಿಂದ 10 ಮೀ ಎತ್ತರ ಬೆಳೆಯುವ ಚಿಕ್ಕ ನಿತ್ಯಹರಿದ್ವರ್ಣ ಮರವಾಗಿದೆ; ಕಾಂಡವು ಹೆಚ್ಚಾಗಿ ಟ್ಯೂಬರ್ಕ್ಲಿಂಗ್ (ಸಣ್ಣ ದುಂಡಾದ ಪ್ರೊಜೆಕ್ಷನ್ ಅಥವಾ ಉಬ್ಬು) ಹೊಂದಿರುತ್ತವೆ; ಇವುಗಳ ಗಾಢ ಬಣ್ಣದ, ತೊಗಟೆಯು, ಲೆಂಟಿಸೆಲ್‌ಗಳನ್ನು (ವಾತಾವರಣ ಮತ್ತು ಆಂತರಿಕ ಅಂಗಾಂಶಗಳ ನಡುವೆ ಗಾಳಿಯ ವಿನಿಮಯವನ್ನು ಅನುಮತಿಸುವ ಮರದ ಸಸ್ಯದ ಕಾಂಡದಲ್ಲಿ ಇರುವ ಅನೇಕ ಎತ್ತರದ ರಂಧ್ರಗಳಲ್ಲಿ ಒಂದು) ಹೊಂದಿದ್ದು ಆಳವಿಲ್ಲದ ಬಿರುಕನ್ನು ಹೊಂದಿರುತ್ತವೆ; ಕಾಂಡದ ಮೇಲಿನ ಗುರುತುಗಳು ಕೆನ್ನೇರಳೆ ಬಣ್ನವನ್ನು ಹೊಂದಿವೆ. ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತವಾಗಿರುತ್ತವೆ. ಎಲೆಗಳು ಕೇಂದ್ರ ಕಾಂಡದ ಎರಡೂ ಬದಿಯಲ್ಲಿ ಸಮಾನ ಸಂಖ್ಯೆಯ ಚಿಗುರೆಲೆಗಳನ್ನು ಹೊಂದಿದ್ದು, ಪರ್ಯಾಯವಾಗಿರುತ್ತವೆ; ಚಿಗುರೆಲೆಗಳು 4 ರಿಂದ 6 ಜೋಡಿಗಳು, ಕಿರಿದಾದ ಅಂಡವೃತ್ತ-ಆಯತಾಕಾರ ಅಥವಾ ಈಟಿಯ ತಲೆಯಾಕಾರವನ್ನು ಹೊಂದಿರುತ್ತದೆ, ಸ್ವಲ್ಪ ಚರ್ಮದ ರೀತಿಯಲ್ಲಿದ್ದು, ರೋಮರಹಿತವಾಗಿರುತ್ತವೆ. ಚೂಪಾಗಿ ದುಂಡಾದ ಅಥವಾ ಹೃದಯದ ಆಕಾರದ ಬುಡವನ್ನು ಹೊಂದಿದೆ, ತುದಿಯು ಚೂಪಾಗಿ ಉದ್ದವಾಗಿ ಕಿರಿದಾಗಿರುತ್ತದೆ, ಅಂಚು ಅಲೆಯಾಗಿರುತ್ತದೆ, ಎಳೆಯ ಎಲೆಗಳು ಕೆಂಪು ಬಣ್ಣದಲ್ಲಿರುತ್ತವೆ. ಎಲೆಯ ಅಂಚು ಏರಿಳಿತದಿಂದ ಕೂಡಿದ್ದು ಎಳೆ ಎಲೆಯು ಕೆಂಪು ಬಣ್ಣದಲ್ಲಿರುತ್ತದೆ. ಪುಷ್ಪಮಂಜರಿ ದಟ್ಟವಾದ ಬೆಳೆದ ಕೋರಿಂಬ್ಸ್ (ಹೂವಿನ ಗೊಂಚಲ ಕೆಳಗಿನ ಕಾಂಡಗಳು ಪ್ರಮಾಣಾನುಗುಣವಾಗಿ ಉದ್ದವಾಗಿರುತ್ತವೆ ಆದ್ದರಿಂದ ಹೂವುಗಳು ಸಮತಟ್ಟಾದ ಅಥವಾ ಸ್ವಲ್ಪ ಪೀನದ ತಲೆಯನ್ನು ಹೊಂದಿರುತ್ತವೆ) ಆಗಿದೆ. ಹೂವುಗಳು ದ್ವಿಲಿಂಗಿ ಆಗಿವೆ, ಇವು ಕಿತ್ತಳೆ ಮತ್ತು ಕೆಲವೊಮ್ಮೆ ಬಿಳಿ ಬಣ್ಣವನ್ನು ಹೊಂದಿರುತ್ತವೆ ಮತ್ತು ಪರಿಮಳಯುಕ್ತವಾಗಿವೆ; ಬೀಜಗಳನ್ನು ಬಿಡುಗಡೆ ಮಾಡಲು ಸಾಮಾನ್ಯವಾಗಿ ಎರಡು ಸ್ತರಗಳ ಉದ್ದಕ್ಕೂ ವಿಭಜಿಸುವ, ಚಪ್ಪಟೆಯಾಗಿ ,ಉದ್ದವಾಗಿರುವ, (ಪಾಡ್) ಹಣ್ಣುನ್ನು ಹೊಂದಿದ್ದು ಇದರ ತುದಿ ಚೂಪಾಗಿ ಕೊಕ್ಕಿನಂತಿರುತ್ತದೆ. ಬೀಜಗಳು ಅಂಡಾಕಾರದಿಂದ ಕಕ್ಷೀಯ ಆಕಾರವನ್ನು ಹೊಂದಿರುತ್ತವೆ.