ಷೆಫ್ಲೆರಾ ಆಕ್ಟಿನೊಫಿಲ್ಲಾ (ಎಂಡ್ಲ್.) ಹಾರ್ಮ್ಸ್

ಕನ್ನಡದ ಹೆಸರು : -
ಸಾಮಾನ್ಯ ಹೆಸರು : ಆಸ್ಟ್ರೇಲಿಯನ್ ಅಂಬ್ರೆಲಾ ಟ್ರೀ
ಕುಟುಂಬದ ಹೆಸರು : ಅರಾಲಿಯೇಸಿ
ವೈಜ್ಞಾನಿಕ ಹೆಸರು : ಷೆಫ್ಲೆರಾ ಆಕ್ಟಿನೊಫಿಲ್ಲಾ (ಎಂಡ್ಲ್.) ಹಾರ್ಮ್ಸ್
ಪ್ರಭೇದದ ಪ್ರಕಾರ: ವಿದೇಶಿ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ಕಡಿಮೆ ಕಾಳಜಿ
ಹೂಬಿಡುವ ಅವಧಿ: ಜುಲೈ - ಸೆಪ್ಟೆಂಬರ್
ಹಣ್ಣಾಗುವ ಅವಧಿ:
ಮೂಲ: ಆಸ್ಟ್ರೇಲಿಯಾ

ಉಪಯೋಗಗಳು

ವಿವಿಧ ಪಕ್ಷಿಗಳನ್ನು ಆಕರ್ಷಿಸುವುದರಿಂದ ಇದನ್ನು ಅಲಂಕಾರಿಕ ಮರವಾಗಿ ನೆಡಲಾಗುತ್ತದೆ.

ವಿವರಣೆ

ಇದು ನಿತ್ಯಹರಿದ್ವರ್ಣ ಮರವಾಗಿದ್ದು 12 ಮೀಟರ್ ಎತ್ತರದವರೆಗೆ ಬೆಳೆಯುತ್ತವೆ. ಇದರ ತೊಗಟೆಯು ಹಸಿರು ಬಣ್ಣದಲ್ಲಿರುತ್ತವೆ. ಎಲೆಗಳು ಪರ್ಯಾಯವಾಗಿರುತ್ತವೆ; ಇವು 7 ರಿಂದ 16 ಚಿಗುರೆಲೆಗಳನ್ನು ಹೊಂದಿದ್ದು , ಅವು ಈಟಿಯ ತಲೆಯಾಕಾರದ, ರೋಮರಹಿತ, ಮತ್ತು ಹೊಳಪನ್ನು ಹೊಂದಿರುತ್ತವೆ. ಇವು ತುದಿ ಚೂಪಾಗಿ, ಅಂಚು ಸಂಪೂರ್ಣ ಅಥವಾ ಎಲೆ ಎಳೆಯದಾಗಿದ್ದರೆ ಹಲ್ಲಿನಂತಹ ಅಂಚನ್ನು ಹೊಂದಿರುತ್ತವೆ. ಹೂಗೊಂಚಲು ಕವಲೊಡೆದ, ಅನಿರ್ದಿಷ್ಟ ರೀತಿಯಲ್ಲಿದ್ದು, ಹೂವುಗಳನ್ನು ಹೊಂದಿರುವ ಚಿಗುರುಗಳ ಉದ್ದಕ್ಕೂ ಸಣ್ಣ ಹೂವಿನ ಕಾಂಡಗಳನ್ನು ಹೊಂದಿರುತ್ತದೆ. ಹೂವುಗಳು ದ್ವಿಲಿಂಗಿಯಾಗಿದ್ದು, ಕೆಂಪು ಬಣ್ಣದಲ್ಲಿರುತ್ತವೆ. ಇವು ತೆಳುವಾದ ಚರ್ಮ, ತಿರುಳು, ಮದ್ಯದಲ್ಲಿ ಬೀಜವನ್ನು ಹೊಂದಿರುವ (ಡ್ರೂಪ್) ಹಣ್ಣನ್ನು ಹೊಂದಿರುತ್ತವೆ, ಇವು ಹಣ್ಣಾದಾಗ ನೇರಳೆ ಮಿಶ್ರಿತ ಕಪ್ಪು ಬಣ್ಣದಲ್ಲಿರುತ್ತವೆ, ಮತ್ತು 7 ಮಿಮೀ ವ್ಯಾಸವನ್ನು ಹೊಂದಿರುತ್ತದೆ.