| ಕನ್ನಡದ ಹೆಸರು : | - |
| ಸಾಮಾನ್ಯ ಹೆಸರು : | ವೈಟ್ ಥೋರ್ನ್ ಟ್ರೀ |
| ಕುಟುಂಬದ ಹೆಸರು : | ಫ್ಯಾಬೇಸಿ |
| ವೈಜ್ಞಾನಿಕ ಹೆಸರು : | ಸೆನೆಗಾಲಿಯಾ ಪಾಲಿಕಾಂತಾ (ವಿಲ್ಡ್.) ಸೀಗ್ಲರ್ ಮತ್ತು ಎಬಿಂಗರ್ |
| ಪ್ರಭೇದದ ಪ್ರಕಾರ: | ಸ್ವದೇಶಿ |
| ಪ್ರಕೃತಿ ಶಾಸ್ತ್ರ : | ಪತನಶೀಲ |
| ಸಂರಕ್ಷಣೆಯ ಸ್ಥಿತಿ : | ತಿಳಿದಿಲ್ಲ |
| ಹೂಬಿಡುವ ಅವಧಿ: | ಜೂನ್ - ಸೆಪ್ಟೆಂಬರ್ |
| ಹಣ್ಣಾಗುವ ಅವಧಿ: | ಜೂನ್ - ಸೆಪ್ಟೆಂಬರ್ |
| ಮೂಲ: | ಆಫ್ರಿಕಾ, ಭಾರತ, ಏಷ್ಯಾ |
ಬೇರುಗಳು ಟಾನಿಕ್ (ಬಲವರ್ಧಕ) ಮತ್ತು ಹಾವು ಕಡಿತಕ್ಕೆ ಪ್ರತಿವಿಷವಾಗಿಯೂ ಬಳಸಲಾಗುತ್ತದೆ. ಲೈಂಗಿಕವಾಗಿ ಹರಡುವ ರೋಗಗಳ ಚಿಕಿತ್ಸೆಯಲ್ಲಿಯೂ ಅವುಗಳನ್ನು ಬಳಸಲಾಗುತ್ತದೆ. ಭೇದಿ ಮತ್ತು ಜಠರಗರುಳಿನ ಸಮಸ್ಯೆಗಳನ್ನು ತೊಗಟೆಯ ಕಷಾಯದಿಂದ ಚಿಕಿತ್ಸೆ ನೀಡಲಾಗುತ್ತದೆ.
21 ಮೀಟರ್ ವರೆಗೆ ಬೆಳೆಯುವ ಪತನಶೀಲ ಮರವಾಗಿದೆ; ಅವು ಬಿರುಕು ಬಿಟ್ಟ ತೊಗಟೆ ಮತ್ತು ಮುಳ್ಳುಗಳನ್ನು ಹೊಂದಿರುವ ಕಾಂಡವನ್ನು ಹೊಂದಿರುತ್ತವೆ, ಅದು ಸ್ವಲ್ಪ ಸಮಯದ ನಂತರ ಉದುರಿಹೋಗುತ್ತದೆ. ಬೂದು ಬಣ್ಣದಿಂದ ಕಂದು ಬಣ್ಣದಲ್ಲಿರುವ, ಎಳೆಯ ಕಿರುಕೊಂಬೆಗಳು ನುಣ್ಣಗೆ ಅಥವಾ ಸಣ್ಣ ಮೃದು ಕೂದಲಿನೊಂದಿಗೆ ಮುಚ್ಚಿರುತ್ತವೆ, ಮತ್ತು ಅಪರೂಪವಾಗಿ ಸಂಪೂರ್ಣವಾಗಿ ರೋಮರಹಿತವಾಗಿರುತ್ತದೆ. ಪ್ರತಿಯೊಂದು ಕಾಂಡ, ರೆಂಬೆ ಅಥವಾ ಎಲೆಯಯನ್ನು ಜೋಡಿಸುವ ಕೆಳಗೆ ಮುಳ್ಳುಗಳು ಜೋಡಿಯಾಗಿ, ಒಣಹುಲ್ಲಿನ ಬಣ್ಣದಿಂದ ಕಂದು ಅಥವಾ ಕಪ್ಪು ಬಣ್ಣದಿಂದ ಕೂಡಿರುತ್ತವೆ. ಎಲೆಗಳು ಕೇಂದ್ರ ಕಾಂಡದ ಎರಡೂ ಬದಿಯಲ್ಲಿ ಸಮಾನ ಸಂಖ್ಯೆಯ ಚಿಗುರೆಲೆಗಳು, ಪರ್ಯಾಯವಾಗಿದ್ದು, ಎಲೆಯ ಪ್ರಾರಂಭದ ವಿಭಾಗವು 15 ರಿಂದ 25 ಎಲೆಗಳಿಂದ ಕೂಡಿರುತ್ತವೆ; 30 ರಿಂದ 50 ಚಿಗುರೆಲೆಗಳಿಂದ ಕೂಡಿದ್ದು, ವಿರುದ್ಧ, ಮತ್ತು ಅಂಡಾಕಾರದಲ್ಲಿರುತ್ತವೆ, ಇವು ದಟ್ಟವಾದ ಸಣ್ಣ ಮೃದು ಕೂದಲಿನೊಂದಿಗೆ, ಕಾಗದದಂತಹ ಮೇಲ್ಮೈ , ಮತ್ತು ಮೊಟಕುಗೊಂಡ ಬುಡ, ಭಾಗಶಃ ಮೊಂಡಾದ ಅಥವಾ ಮೊಂಡಾದ ತುದಿ, ಕೂದಲಿನಂತಹ ಪ್ರಕ್ಷೇಪಗಳ ಅಂಚನ್ನು ಹೊಂದಿರುತ್ತವೆ. ಪುಷ್ಪಮಂಜರಿಯು (ಸ್ಪೈಕ್) ಅಕ್ಷಾಕಂಕುಳಿನಲ್ಲಿ ಕವಲೊಡೆದು, ಕಾಂಡವಿಲ್ಲದೆ ನೇರವಾಗಿ ಜೋಡಿಸಲ್ಪಟ್ಟಿರುತ್ತವೆ, ಹಾಗೂ ಇವು ಒಂಟಿಯಾಗಿರುತ್ತವೆ ಇಲ್ಲವೇ ಜೋಡಿಯಾಗಿರುತ್ತವೆ. ಹೂವುಗಳು ದ್ವಿಲಿಂಗಿಯಾಗಿದ್ದು, ಕೆನೆ ಅಥವಾ ಬಿಳಿ ಬಣ್ಣದಲ್ಲಿರುತ್ತವೆ. ಇವು ಬೀಜಗಳನ್ನು ಬಿಡುಗಡೆ ಮಾಡಲು ಸಾಮಾನ್ಯವಾಗಿ ಎರಡು ಸ್ತರಗಳ ಉದ್ದಕ್ಕೂ ವಿಭಜಿಸುವ (ಪಾಡ್) ಹಣ್ಣನ್ನು ಹೊಂದಿದ್ದು, ಇವು ಬಹುತೇಕ ಸಂಪೂರ್ಣವಾಗಿ ರೋಮರಹಿತವಾಗಿರುತ್ತದೆ. ಮತ್ತು ಇವು ಉದ್ದವಾದ,ಆಯತಾಕಾರದಲ್ಲಿದ್ದು, ನಾಳಗಳಿಂದ ಅಥವಾ ಅಂತಹುದೇ ರೇಖೆಗಳಿಂದ ಮುಚ್ಚಲ್ಪಟ್ಟಿದೆ. ಬೀಜಗಳು ಸುಮಾರು ವೃತ್ತಾಕಾರದಿಂದ, ಅಂಡಾಕಾರವಾಗಿ-ಎರಡೂ ಬದಿಯಲ್ಲಿ ಉಬ್ಬಿರುತ್ತದೆ.