ಸೆನ್ನಾ ಮೊಂಟಾನಾ (ಬಿ. ಹೇಯ್ನೆ ಎಕ್ಸ್ ರೋತ್) ವಿ.ಸಿಂಗ್

ಕನ್ನಡದ ಹೆಸರು : -
ಸಾಮಾನ್ಯ ಹೆಸರು : ಮೌಂಟೇನ್ ಕ್ಯಾಸಿಯಾ
ಕುಟುಂಬದ ಹೆಸರು : ಫ್ಯಾಬೇಸಿ
ವೈಜ್ಞಾನಿಕ ಹೆಸರು : ಸೆನ್ನಾ ಮೊಂಟಾನಾ (ಬಿ. ಹೇಯ್ನೆ ಎಕ್ಸ್ ರೋತ್) ವಿ.ಸಿಂಗ್
ಪ್ರಭೇದದ ಪ್ರಕಾರ: ಸ್ವದೇಶಿ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ: ನವೆಂಬರ್ - ಜನವರಿ
ಹಣ್ಣಾಗುವ ಅವಧಿ: ನವೆಂಬರ್ - ಜನವರಿ
ಮೂಲ: ಭಾರತ

ವಿವರಣೆ

ದೊಡ್ಡ ಪೊದೆ ಅಥವಾ ಸಣ್ಣ ಮರ, 4 ಮೀ ಎತ್ತರದವರೆಗೆ ಬೆಳೆಯುತ್ತದೆ. ಇದರ ಎಳೆಯ ಚಿಗುರುಗಳು ಹಳದಿ ಬಣ್ಣದ ಸೂಕ್ಷ್ಮ ಕೂದಲಿನಿಂದ ಆವೃತವಾಗಿರುತ್ತವೆ. ಎಲೆಗಳು ಕೇಂದ್ರ ಕಾಂಡದ ಎರಡೂ ಬದಿಯಲ್ಲಿ ಸಮಾನ ಸಂಖ್ಯೆಯ ಚಿಗುರೆಲೆಗಳನ್ನು ಹೊಂದ್ದಿದ್ದು, ಪರ್ಯಾಯವಾಗಿರುತ್ತವೆ; ಚಿಗುರೆಲೆಗಳು ಆಯತಾಕಾರದ ಅಥವಾ ಅಂಡಾಕಾರದಲ್ಲಿರುತ್ತದೆ. ಬುಡವು ದುಂಡಾಗಿದ್ದು, ಮೊಂಡಾದ ತುದಿಯಿಂದ ಚೂಪಾದ ಬಿಂದುವಿನಲ್ಲಿ ಕೊನೆಗೊಳ್ಳುತ್ತದೆ, ಹಾಗೂ ಸಂಪೂರ್ಣ ಅಂಚನ್ನು ಹೊಂದಿರುತ್ತದೆ. ಪುಷ್ಪಮಂಜರಿ ಒಂದು ಅಕ್ಷಾಕಂಕುಳಿನ ಅಥವಾ ಕಾಂಡದ ತುದಿಯಲ್ಲಿ (ಕೋರಿಂಬೋಸ್ ಪ್ಯಾನಿಕ್ಲ್) ಕವಲೊಡೆಯುವ ರಚನೆಯನ್ನು ಹೊಂದಿರುತ್ತದೆ, ಕೆಳಭಾಗದ ಹೂವುಗಳು ಮೇಲ್ಭಾಗಕ್ಕಿಂತ ಉದ್ದವಾದ ತೊಟ್ಟುಗಳನ್ನು ಹೊಂದಿರುತ್ತವೆ, ಹೀಗೆ ಸಮತಟ್ಟಾದ ಮೇಲ್ಭಾಗವು ಮೇಲ್ನೋಟಕ್ಕೆ ಛತ್ರಿಯನ್ನು ಹೋಲುತ್ತದೆ. ಹೂವುಗಳು ದ್ವಿಲಿಂಗಿ ಮತ್ತು ಹಳದಿ ಬಣ್ಣದಲ್ಲಿರುತ್ತವೆ. ಇವು ಕೊಕ್ಕಿನ ರೀತಿ ಕಾಣುವ, ಸಂಕುಚಿತವಾದ, ಅಂಡಾಕಾರವಾಗಿ ಉದ್ದವಾದ ಹಣ್ಣನ್ನು ಹೊಂದಿರುತ್ತವೆ.