ಕನ್ನಡದ ಹೆಸರು : | ಅಗರು, ಕಾರಗಿಲು |
ಸಾಮಾನ್ಯ ಹೆಸರು : | ಅಗರ್ ವುಡ್ , ಮಲಯನ್ ಈಗಲ್ ವುಡ್ |
ಕುಟುಂಬದ ಹೆಸರು : | ಥೈಮೆಲೇಸೀ |
ವೈಜ್ಞಾನಿಕ ಹೆಸರು : | ಅಕ್ವಿಲೇರಿಯಾ ಮಲಾಸೆನ್ಸಿಸ್ ಲ್ಯಾಮ್. |
ಪ್ರಭೇದದ ಪ್ರಕಾರ: | ಸ್ಥಳೀಯ |
ಪ್ರಕೃತಿ ಶಾಸ್ತ್ರ : | ನಿತ್ಯಹರಿದ್ವರ್ಣ |
ಸಂರಕ್ಷಣೆಯ ಸ್ಥಿತಿ : | ತೀವ್ರ ಅಪಾಯದಲ್ಲಿದೆ |
ಹೂಬಿಡುವ ಅವಧಿ: | ಏಪ್ರಿಲ್ - ಜೂನ್ |
ಹಣ್ಣಾಗುವ ಅವಧಿ: | ಏಪ್ರಿಲ್ - ಸೆಪ್ಟೆಂಬರ್ |
ಮೂಲ: | ಭಾರತೀಯ ಉಪಖಂಡ, ಸಿಂಗಾಪುರ, ಥೈಲ್ಯಾಂಡ್ |
.ಇದು ಅಗರ್ ಮರದ ರೆಸಿನ್ ನ (ರಾಳದ) ಪ್ರಮುಖ ಮೂಲವಾಗಿದೆ, ಇದನ್ನು ಸುಗಂಧ ದ್ರವ್ಯ ಮತ್ತು ಧೂಪದ್ರವ್ಯಕ್ಕಾಗಿ ಬಳಸಲಾಗುತ್ತದೆ. ಫಿಯೋಕ್ರೆಮೋನಿಯಮ್ ಪ್ಯಾರಾಸಿಟಿಕಾ ಎನ್ನುವ ಪರಾವಲಂಬಿ ಶಿಲೀಂಧ್ರದ ಸೋಂಕಿಗೆ ಮರ ಒಳಗಾದಾಗ ರಾಳವು ಉತ್ಪತ್ತಿಯಾಗುತ್ತದೆ. ಪಾಶ್ಚಾತ್ಯ, ಚೀನಾ ಮತ್ತು ಭಾರತೀಯ ವೈದ್ಯಪದ್ಧತಿಯಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಇದರ ಧೂಪದ್ರವ್ಯವನ್ನು ಬಳಸಲಾಗುತ್ತದೆ.
40 ಮೀ ವರೆಗೆ ಎತ್ತರ ಇರುವ ನಿತ್ಯಹರಿದ್ವರ್ಣ ಮರ. ತಲೆಯ ಭಾಗ ಒಂದೇ ಸಮನಾಗಿರುವುದಿಲ್ಲ. ಹೊರ ತೊಗಟೆ ಗಾಢ ಬೂದು - ತೆಳು ಬೂದು ಬಣ್ಣದ್ದಾಗಿದ್ದು ,ಸುಲಿಯುತ್ತದೆ. ಒಳ ತೊಗಟೆಯ ಬಣ್ಣ ಕೆನೆ-ಬಿಳಿ. ಎಲೆಗಳು ಸರಳ,ಆಲ್ಟರ್ನೇಟ್, ಓವಲ್ –ಒಬ್ಲಾಂಗ್, ಒಬ್ಲಾಂಗ್- ಲ್ಯಾನ್ಸಿಯೊಲೇಟ್, ತೆಳ್ಳಗೆ ಮತ್ತು ತೊಗಲಿನಂತಿದ್ದು, ಮೊನಚಾಗಿರುತ್ತವೆ. ಪುಷ್ಪಮಂಜರಿಯಲ್ಲಿ 10 ಗೊಂಚಲುಗಳಲ್ಲಿರುತ್ತದೆ.ಕೊಳಕು ಹಳದಿ ಬಣ್ಣದ ಈ ಹೂವು, 5-6 ಮಿಮೀ ಉದ್ದವಿರುತ್ತದೆ. ಹಣ್ಣಿನ ಬಣ್ಣ ಹಸಿರು ಮತ್ತು ಚಪ್ಪಟೆಯಾಗಿರುತ್ತದೆ, ಮಾಗಿದಾಗ ಅದು (ವುಡಿ)ಮರದಂತಾಗುತ್ತದೆ. ಪಿಯರ್ ಆಕಾರದ ಬೀಜಗಳು ಕಿತ್ತಳೆ-ಕಂದು ಕೂದಲಿನಿಂದ ಮುಚ್ಚಲ್ಪಟ್ಟಿರುತ್ತವೆ, ಒಂದು ತಿರುಚಿದ ಭಾಗದೊಂದಿಗೆ ಹಣ್ಣಿನೊಂದಿಗೆ ಜೋಡಿಸಲ್ಪಟ್ಟಿರುತ್ತವೆ.