ಕನ್ನಡದ ಹೆಸರು : | |
ಸಾಮಾನ್ಯ ಹೆಸರು : | ಗೋಲ್ಡನ್ ವಂಡರ್ ಟ್ರೀ |
ಕುಟುಂಬದ ಹೆಸರು : | ಫ್ಯಾಬೇಸಿ |
ವೈಜ್ಞಾನಿಕ ಹೆಸರು : | ಸೆನ್ನಾ ಸ್ಪೆಕ್ಟಾಬಿಲಿಸ್ (ಡಿಸಿ.) ಎಚ್.ಎಸ್.ಇರ್ವಿನ್ ಮತ್ತು ಬಾರ್ನೆಬಿ |
ಪ್ರಭೇದದ ಪ್ರಕಾರ: | ವಿದೇಶಿ |
ಪ್ರಕೃತಿ ಶಾಸ್ತ್ರ : | ಪತನಶೀಲ |
ಸಂರಕ್ಷಣೆಯ ಸ್ಥಿತಿ : | ಕಡಿಮೆ ಕಾಳಜಿ |
ಹೂಬಿಡುವ ಅವಧಿ: | ಜೂನ್ - ಆಗಸ್ಟ್ |
ಹಣ್ಣಾಗುವ ಅವಧಿ: | ಡಿಸೆಂಬರ್ - ಫೆಬ್ರವರಿ |
ಮೂಲ: | ದಕ್ಷಿಣ ಮತ್ತು ಮಧ್ಯ ಅಮೇರಿಕಾ |
ರಿಂಗ್ವರ್ಮ್ (ಶಿಲೀಂಧ್ರಗಳ ಸೋಂಕು) ಸೇರಿದಂತೆ ಚರ್ಮದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಮೂಲಿಕೆಯನ್ನು ಬಳಸಲಾಗುತ್ತದೆ. ಮಧ್ಯಸಾರದಲ್ಲಿರುವ ಎಲೆಗಳ ಸಾರದಲ್ಲಿ ಗಮನಾರ್ಹವಾದ ಶಿಲೀಂಧ್ರ ನಾಶಕ ಲಕ್ಷಣಗಳು ವರದಿಯಾಗಿದೆ ಮತ್ತು ಕ್ಯಾಂಡಿಡಾ ಅಲ್ಬಿಕಾನ್ಸ್‌ನಿಂದ (ರೋಗಕಾರಕ ಯೀಸ್ಟ್) ಉಂಟಾಗುವ ಸೋಂಕುಗಳಲ್ಲಿ ಸಂಭಾವ್ಯ ಬಳಕೆಯನ್ನು ಸೂಚಿಸುತ್ತದೆ.
ಇವು 5 ರಿಂದ 10 ಮೀ ಎತ್ತರ ಬೆಳೆಯುವ, ಚಿಕ್ಕ ನಿತ್ಯಹರಿದ್ವರ್ಣ ಮರಗಳಾಗಿವೆ, ಹಾಗೂ ಉದ್ದವಾಗಿ ಹರಡಿದ ಕೊಂಬೆಗಳನ್ನು ಹೊಂದಿರುತ್ತವೆ. ತೊಗಟೆಯು ಬೂದು ಮಿಶ್ರಿತ ಕಂದು, ನಯವಾದ ಮತ್ತು ಬಿರುಕುಗಳಿಂದ ಕೂಡಿರುತ್ತದೆ. ಎಳೆಯ ರೆಂಬೆಗಳು, ತೊಟ್ಟುಗಳು ಮತ್ತು ಎಲೆಗಳ ಮುಖ್ಯ ಅಕ್ಷವು ದಟ್ಟವಾದ ಹಳದಿ ಮಿಶ್ರಿತ ಕಂದು ಬಣ್ಣದ ಮೃದುವಾದ, ತುಂಬಾ ನಯವಾದ ಮೇಲ್ಮೈಯನ್ನು ಹೊಂದಿರುತ್ತದೆ. ಎಲೆಗಳು (ಪಿನೇಟ್) ಕಾಂಡದ ಎರಡೂ ಬದಿಗಳಲ್ಲಿ ಚಿಗುರೆಲೆಗಳನ್ನು ಹೊಂದಿರುತ್ತದೆ, ಸಾಮಾನ್ಯವಾಗಿ ಚಿಗುರೆಲೆಗಳ ಜೋಡಣೆಯು , ಪರ್ಯಾಯವಾಗಿರುತ್ತವೆ; ಇವು 8 - 19 ಚಿಗುರೆಲೆಗಳ ಜೋಡಿಯನ್ನು ಹೊಂದಿದ್ದು, ಅಂಡಾಕಾರ ಅಥವಾ ಆಯತಾಕಾರದಿಂದ - ಈಟಿಯ ತಲೆಯ ಆಕಾರದಲ್ಲಿರುತ್ತವೆ. ಎಲೆಯ ಹಿಂಭಾಗವು ದಟ್ಟವಾದ ಹಳದಿ ಮಿಶ್ರಿತ ಕಂದು ಬಣ್ಣದ ಮೆತ್ತಗಿನ ರೇಷ್ಮೆ ರೀತಿಯ ಕೂದಲು, ಮತ್ತು ಮೇಲ್ಭಾಗವು ರೋಮರಹಿತ ಅಥವಾ ಸಣ್ಣದಾದ ಹಾಗೂ ಮೃದುವಾದ ಕೂದಲಿನಿಂದ ಮುಚ್ಚಿರುತ್ತವೆ. ಬುಡದಲ್ಲಿ ಭಾಗಶಃ ದುಂಡಾಗಿದ್ದು ಮತ್ತು ಸ್ವಲ್ಪ ಬಾಗಿದ್ದು, ತುದಿ ಚೂಪಾದ, ಬಿಂದುವಿಗೆ ಕೊನೆಗೊಳ್ಳುತ್ತದೆ. ಹೂಗಳು ಕಾಂಡದ ತುದಿಯಲ್ಲಿ ಹೆಚ್ಚು ಕವಲೊಡೆದ ಅಥವಾ ಅಕ್ಷಾಕಂಕುಳಿನಲ್ಲಿ ಹೂವುಗಳನ್ನು ಹೊಂದಿರುವ ಚಿಗುರುಗಳ ಉದ್ದಕ್ಕೂ ಸಣ್ಣ ಹೂವಿನ ಕಾಂಡಗಳನ್ನು ಹೊಂದಿರುತ್ತದೆ. ಹೂವುಗಳು ದ್ವಿಲಿಂಗಿಯಾಗಿದ್ದು, ಹಳದಿ ಬಣ್ಣದಲ್ಲಿರುತ್ತವೆ. ಹಣ್ಣು ಒಂದು ರೋಮರಹಿತವಾದ, ಕಪ್ಪು ಬಣ್ಣದ, ಪಾಡ್ (ಹಣ್ಣಾದಾಗ ಅದರ ಬೀಜಗಳನ್ನು ಬಿಡುಗಡೆ ಮಾಡಲು ಸಾಮಾನ್ಯವಾಗಿ ಎರಡು ಸ್ತರಗಳ ಉದ್ದಕ್ಕೂ ವಿಭಜಿಸುತ್ತದೆ) ಆಗಿದ್ದು, ಕಿರಿದಾದ ಸಿಲೆಂಡರ್ ಆಕರವಾಗಿ, ಸ್ವಲ್ಪ ಸಂಕುಚಿತವಾಗಿದ್ದು, ಬೀಜಗಳ ನಡುವೆ ಸ್ವಲ್ಪ ಗಾತ್ರದಲ್ಲಿ ಕಡಿಮೆಯಾಗಿದ್ದು, ಉಂಗುರಾಕಾರದ-ಸೆಪ್ಟಮ್ (ಒಂದು ಗೋಡೆಯಾಗಿದ್ದು, ಕುಹರ ಅಥವಾ ರಚನೆಯನ್ನು ಚಿಕ್ಕದಾಗಿ ವಿಭಜಿಸುತ್ತದೆ) ಹೊಂದಿರುತ್ತವೆ. ಸರಿಸುಮಾರು ವೃತ್ತಾಕಾರದ 50 ರಿಂದ 70 ಬೀಜಗಳನ್ನು ಹೊಂದಿರುತ್ತವೆ.