ಕನ್ನಡದ ಹೆಸರು : | - |
ಸಾಮಾನ್ಯ ಹೆಸರು : | ಪ್ಯಾರಡೈಸ್ ಟ್ರೀ |
ಕುಟುಂಬದ ಹೆಸರು : | ಸಿಮರೂಬೇಸಿ |
ವೈಜ್ಞಾನಿಕ ಹೆಸರು : | ಸಿಮರೂಬಾ ಗ್ಲಾಕಾ ಡಿಸಿ. |
ಪ್ರಭೇದದ ಪ್ರಕಾರ: | ವಿದೇಶಿ |
ಪ್ರಕೃತಿ ಶಾಸ್ತ್ರ : | ನಿತ್ಯಹರಿದ್ವರ್ಣ |
ಸಂರಕ್ಷಣೆಯ ಸ್ಥಿತಿ : | ಕಡಿಮೆ ಕಾಳಜಿ |
ಹೂಬಿಡುವ ಅವಧಿ: | |
ಹಣ್ಣಾಗುವ ಅವಧಿ: | |
ಮೂಲ: | ಫ್ಲೋರಿಡಾ, ದಕ್ಷಿಣ ಅಮೇರಿಕಾ, ಕೆರಿಬಿಯನ್ |
ತೊಗಟೆಯನ್ನು ಜ್ವರ ಮತ್ತು ಅತಿಸಾರಕ್ಕೆ ಚಿಕಿತ್ಸೆ ನೀಡಲು ಕಷಾಯ ಅಥವಾ ಚಹಾವಾಗಿ ಬಳಸಲಾಗುತ್ತದೆ. ಎಲೆಗಳನ್ನು ಸಂಧಿವಾತಕ್ಕೆ ಬಳಸಲಾಗುತ್ತದೆ ಹಾಗೂ ದೇಹದ ನೋವು, ಜಜ್ಜಿದ ಗಾಯ (ರಕ್ತ ಹೆಪ್ಪುಗಟ್ಟಿದ ಸ್ಥಿತಿ ) ಅಥವಾ ಚರ್ಮದ ತುರಿಕೆಗೆ ಲೋಷನ್ (ದ್ವವೌಷಧ) ರೂಪದಲ್ಲಿ ಹಚ್ಚಲಾಗುತ್ತದೆ.
ಗಂಡು ಮತ್ತು ಹೆಣ್ಣು ಹೂವುಗಳನ್ನು ಪ್ರತ್ಯೇಕ ಮರದಲ್ಲಿ ಹೊಂದಿರುವ, 15 ಮೀ ಎತ್ತರದವರೆಗೆ ಬೆಳೆಯುವ, ಸಣ್ಣ ಗಾತ್ರದಿಂದ ಮಧ್ಯಮ ಗಾತ್ರದ, ನಿತ್ಯಹರಿದ್ವರ್ಣ ಮರವಾಗಿದೆ. ನೇರವಾದ, ಸಿಲೆಂಡರ್ ಆಕಾರದ ಕಾಂಡ ಹಾಗು ಕಂದು ಬಣ್ಣದ ತೊಗಟೆಯನ್ನು ಹೊಂದಿದ್ದು, ಯಾವುದೇ ನಿರ್ದಿಷ್ಟ ರೀತಿಯ ಕ್ರಮವಿಲ್ಲದ ಮೇಲ್ಮೈ ಬಿರುಕನ್ನು ಹೊಂದಿರುತ್ತದೆ. ಇವು ಜೋಡಿಯಾಗದ ಚಿಗುರೆಲೆಯನ್ನು ಹೊಂದಿದ್ದು ಎಲೆಗಳು ಪರ್ಯಾಯವಾಗಿರುತ್ತದೆ; 5 ರಿಂದ 15 ಚಿಗುರೆಲೆಗಳಿಂದ ಕೂಡಿದ್ದು, ಆಯತಾಕಾರದಿಂದ, ದುಂಡಾದ ಆಕಾರವನ್ನು ಹೊಂದಿರುತ್ತದೆ. ಎಲೆಯ ಹಿಂಭಾಗವು ಕವಚವನ್ನು ಹೋಲುವ ಪೊರೆ ಮತ್ತು ಸೂಕ್ಷ್ಮವಾಗಿ ಮೃದುವಾದ ಕೂದಲಿನಿಂದ ಮುಚ್ಚಿರುತ್ತದೆ. ಎಲೆಯ ತುದಿಯು ಸಾಮಾನ್ಯವಾಗಿ ಒರಟಾಗಿರುತ್ತದೆ ಇಲ್ಲವೇ ನಣುಪಾಗಿರುತ್ತದೆ. ಇವು ರೆಂಬೆಗಳ ತುದಿಯಲ್ಲಿ ಅಥವಾ ಅಕ್ಷಾಕಂಕುಳಿನಲ್ಲಿ ಹೆಚ್ಚು ಕವಲೊಡೆದ ಹೂಗೊಂಚಲನ್ನು ಹೊಂದಿರುತ್ತವೆ. ಹೂವುಗಳು ಏಕಲಿಂಗಿ ಆಗಿವೆ, ಸಾಂದರ್ಭಿಕವಾಗಿ ಅಕ್ಷಾಕಂಕುಳಿನಲ್ಲಿ ದ್ವಿಲಿಂಗಿ ಹೂವುಗಳನ್ನು ಹೊಂದಿರುತ್ತವೆ. ಹೂವುಗಳು ಹಳದಿ ಮಿಶ್ರಿತ ಬಿಳಿ ಬಣ್ಣದಲ್ಲಿರುತ್ತವೆ. ಇವು 1.5 ಸೆಂ.ಮೀ ಉದ್ದದ ತೆಳುವಾದ ಚರ್ಮ, ತಿರುಳು, ಮದ್ಯದಲ್ಲಿ ಬೀಜವನ್ನು ಹೊಂದಿರುವ (ಡ್ರೂಪ್) ಹಣ್ಣನ್ನು ಹೊಂದಿದ್ದು ಹಣ್ಣು ಪಕ್ವವಾದಾಗ ನೇರಳೆ ಅಥವಾ ಕಪ್ಪು ಬಣ್ಣದಲ್ಲಿರುತ್ತವೆ.