ಸ್ಪಾಥೋಡಿಯಾ ಕ್ಯಾಂಪನುಲಟಾ ಪಿ.ಬ್ಯೂವ್.

ಕನ್ನಡದ ಹೆಸರು : Jeerkolavi kaayi, Neeru kaayi ಜೀರ್ಕೊಳವಿಕಾಯಿ , ನೀರು ಕಾಯಿ
ಸಾಮಾನ್ಯ ಹೆಸರು : ಆಫ್ರಿಕನ್ ಟುಲಿಪ್ ಟ್ರೀ
ಕುಟುಂಬದ ಹೆಸರು : ಬಿಗ್ನೋನಿಯೇಸಿ
ವೈಜ್ಞಾನಿಕ ಹೆಸರು : ಸ್ಪಾಥೋಡಿಯಾ ಕ್ಯಾಂಪನುಲಟಾ ಪಿ.ಬ್ಯೂವ್.
ಪ್ರಭೇದದ ಪ್ರಕಾರ: ವಿದೇಶಿ
ಪ್ರಕೃತಿ ಶಾಸ್ತ್ರ : ಪತನಶೀಲ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ: ಮಾರ್ಚ್ - ಏಪ್ರಿಲ್
ಹಣ್ಣಾಗುವ ಅವಧಿ: ಜೂನ್ - ಆಗಸ್ಟ್
ಮೂಲ: ಆಫ್ರಿಕಾ

ಉಪಯೋಗಗಳು

ತೊಗಟೆಯು ವಿರೇಚಕ ಮತ್ತು ನಂಜುನಿರೋಧಕ ಗುಣಲಕ್ಷಣಗಳನ್ನು ಹೊಂದಿದೆ. ತೊಗಟೆಯನ್ನು ಅಗಿಯಲಾಗುತ್ತದೆ ಮತ್ತು ಊದಿಕೊಂಡ ಕೆನ್ನೆಗಳ ಮೇಲೆ ಹಚ್ಚಲಾಗುತ್ತದೆ. ದೇಹದ ದದ್ದುಗಳನ್ನು ಗುಣಪಡಿಸಲು ನವಜಾತ ಶಿಶುಗಳಿಗೆ ಸ್ನಾನ ಮಾಡಲು ಬಳಸುವ ನೀರಿನಲ್ಲಿ ತೊಗಟೆಯನ್ನು ಕುದಿಸಬಹುದು. ತೊಗಟೆ, ಎಲೆಗಳು ಮತ್ತು ಹೂವುಗಳ ಸಾರಗಳನ್ನು ಮಲೇರಿಯಾ, ಎಚ್ಐವಿ (ಏಡ್ಸ್ ), ಮಧುಮೇಹ, ಎಡಿಮಾ (ದೇಹದ ಕುಳಿಗಳು ಅಥವಾ ಅಂಗಾಂಶಗಳಲ್ಲಿ ಸಂಗ್ರಹವಾಗುವ ನೀರಿನಂಶದ ದ್ರವ ಹೆಚ್ಚಾಗುವ ಸ್ಥಿತಿ) , ಭೇದಿ, ಮಲಬದ್ಧತೆ, ಜೀರ್ಣಾಂಗವ್ಯೂಹದ ಕಾಯಿಲೆ, ಹುಣ್ಣುಗಳು, ಚರ್ಮ ರೋಗಗಳು, ಗಾಯಗಳು, ಜ್ವರ, ಮೂತ್ರನಾಳದ ಉರಿಯೂತ, ಯಕೃತ್ತಿನ ಸಮಸ್ಯೆಗಳು ಮತ್ತು ವಿಷಕ್ಕೆ ಪ್ರತಿವಿಷವಾಗಿ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.

ವಿವರಣೆ

25 ಮೀ ಎತ್ತರದವರೆಗೆ ಬೆಳೆಯುವ, ದೊಡ್ಡದಾದ, ನಿತ್ಯಹರಿದ್ವರ್ಣ ಅಥವಾ ಅರೆ-ಪತನಶೀಲ ಮರವಾಗಿದೆ. ಕೆಲವೊಮ್ಮೆ ಮರವನ್ನು ಬೆಂಬಲಿಸುವ ಕಾಂಡದ ಪ್ಲೇಟ್‌ನಂತಹ ಬೆಳವಣಿಗೆಯಾಗಿ ನೆಲದ ಮೇಲೆ ವಿಸ್ತರಿಸಿರುವ ಮರದ ಕಾಂಡ, ಮತ್ತು ಲೆಂಟಿಸೆಲ್‌ (ವಾತಾವರಣ ಮತ್ತು ಆಂತರಿಕ ಅಂಗಾಂಶಗಳ ನಡುವೆ ಗಾಳಿಯ ಪ್ರವೇಶ ಬರದೇ ಇರುವ ಮರದ ಕಾಂಡದಲ್ಲಿ ಅನೇಕ ಎತ್ತರದ ರಂಧ್ರ) ತೊಗಟೆಯನ್ನು ಹೊಂದಿರುತ್ತದೆ. ಇವುಗಳ ಚಿಗುರೆಲೆಗಳು ಜೋಡಿಯಾಗದ, ಸಾಮಾನ್ಯವಾಗಿ 9 ರಿಂದ 15 ಎಲೆಗಳನ್ನು ಹೊಂದಿರುತ್ತವೆ, ಹಾಗೂ ಹೆಚ್ಚು ಅಥವಾ ಕಡಿಮೆ ಅಂಡಾಕಾರದಲ್ಲಿರುತ್ತವೆ, ಮತ್ತು ಮುಖ್ಯ ನಾಳದ ಉದ್ದಕ್ಕೂ ಸ್ವಲ್ಪ ಮೃದುವಾಗಿರುತ್ತದೆ. ಇವು ಅಸಮಪಾರ್ಶ್ವವಾಗಿ ಬಹುತೇಕ ಆದರೆ ಸಾಕಷ್ಟು ಮೊಟಕುಗೊಂಡಿರದ ಅಥವಾ ವ್ಯಾಪಕವಾಗಿ ಬೆಣೆಯಾಕಾರದ ತಳವನ್ನು ಹೊಂದಿವೆ. ಎಲೆಯ ತುದಿಯು ಚೂಪಾದ ತುದಿಯಿಂದ ತೆಳುವಾದ ಬಿಂದುವಿಗೆ ಕಿರಿದಾಗುತ್ತದೆ. ಪುಷ್ಪಮಂಜರಿ (ರೇಸಿಮ್) ಕಾಂಡದ ತುದಿಯಲ್ಲಿ ಸಮಾನ ಮಧ್ಯಂತರಗಳಲ್ಲಿ ಸಣ್ಣ ಸಮಾನ ಕಾಂಡಗಳಲ್ಲಿ ಜೋಡಿಸಲಾದ ಪ್ರತ್ಯೇಕ ಹೂವುಗಳನ್ನು ಒಳಗೊಂಡಿರುತ್ತದೆ. ಹೂವುಗಳು ದ್ವಿಲಿಂಗಿ, ಪ್ರಕಾಶಮಾನವಾದ ಕೆಂಪು ವರ್ಣದ್ರವ್ಯ ಅಥವಾ ಕಡುಗೆಂಪು ಬಣ್ಣದಿಂದ ಕೂಡಿದ್ದು, ಹಳದಿ-ಕಿತ್ತಳೆ ಬಣ್ಣದ ಅಂಚುಗಳನ್ನು ಹೊಂದಿರುತ್ತವೆ. ಇವು ಸರಳ,ಒಣ, ಮತ್ತು ಬೀಜವನ್ನು ಬಿಡುಗಡೆ ಮಾಡಲು ಬಿರಿಯುವ ಹಣ್ಣನ್ನು ಹೊಂದಿದ್ದು, ನೆಟ್ಟಗೆ, ಸ್ವಲ್ಪ ಮರದಂತಹ, ಎರದೂ ಕಡೆ ಮೊನಚಾದ, ಸಂಕುಚಿತ, ಕೋನೀಯ (ಹಣ್ಣು ಒಡೆದಾಗ ಸಪಾಟವಾದ-ತಳದ ದೋಣಿಯಂತೆ) ಆಕಾರದಲ್ಲಿರುತ್ತವೆ, ಇವು ಲೆಂಟಿಸೆಲ್‌ ಗಳನ್ನು ಹೊಂದಿದ್ದು, ಹಣ್ಣು ಎಳೆಯದಾಗಿದ್ದಾಗ ರೋಮರಹಿತ ಅಥವಾ ದಟ್ಟವಾದ ಉಣ್ಣೆಯ ರೀತಿಯ ಕೂದಲಿನಿಂದ ಮುಚ್ಚಿರುತ್ತದೆ, ಬೆಳೆದಾಗ ರೋಮರಹಿತವಾಗಿರುತ್ತದೆ. ಬೀಜಗಳನ್ನು ಸಂಕುಚಿತಗೊಳಿಸಲಾದ, ಗಾಜಿನಂತಹ ರೆಕ್ಕೆಗಳನ್ನು ಹೊಂದಿರುತ್ತವೆ .