ಸ್ಟೆನೋಕಾರ್ಪಸ್ ಸೈನಾಟಸ್ (ಲಿಂಡ್ಲ್.) ಎಂಡ್ಲ್.

ಕನ್ನಡದ ಹೆಸರು : -
ಸಾಮಾನ್ಯ ಹೆಸರು : ಫೈರ್‌ವೀಲ್ ಟ್ರೀ
ಕುಟುಂಬದ ಹೆಸರು : ಪ್ರೋಟಿಯೇಸಿ
ವೈಜ್ಞಾನಿಕ ಹೆಸರು : ಸ್ಟೆನೋಕಾರ್ಪಸ್ ಸೈನಾಟಸ್ (ಲಿಂಡ್ಲ್.) ಎಂಡ್ಲ್.
ಪ್ರಭೇದದ ಪ್ರಕಾರ: ವಿದೇಶಿ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ: ಫೆಬ್ರವರಿ - ಮಾರ್ಚ್
ಹಣ್ಣಾಗುವ ಅವಧಿ: ಜನವರಿ - ಜುಲೈ
ಮೂಲ: ಆಸ್ಟ್ರೇಲಿಯಾ

ಉಪಯೋಗಗಳು

ಇದನ್ನು ಅಲಂಕಾರಿಕ ಮರವಾಗಿ ಬಳಸಲಾಗುತ್ತದೆ.

ವಿವರಣೆ

ಇದು ಮಧ್ಯಮ ಗಾತ್ರದಿಂದ ದೊಡ್ಡ ಗಾತ್ರದ ಮರವಾಗಿದ್ದು 35 ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ತೊಗಟೆಯು ಅಸಮವಾಗಿರುತ್ತದೆ, ನಯವಾಗಿರುವುದಿಲ್ಲ, ಮತ್ತು ಗಾಢ ಬೂದು ಮಿಶ್ರಿತ ಕಂದು ಬಣ್ಣವನ್ನು ಹೊಂದಿರುತ್ತದೆ. ಎಲೆಗಳು ಸರಳ ಅಥವಾ ಗರಿಗಳ ರೀತಿಯಲ್ಲಿದ್ದು, ಮುಖ್ಯ ಭಾಗದಿಂದ ಹೊರಗುಳಿಯುವ ದುಂಡಾದ ಅಥವಾ ಮೊನಚಾದ ಭಾಗಗಳನ್ನು ಹೊಂದಿರುವ ಕಿರಿದಾದ ಸೀಳುಗಳು ಅಕ್ಷಕ್ಕೆ ಅರ್ಧಕ್ಕಿಂತ ಹೆಚ್ಚು ವಿಸ್ತರಿಸಿರುತ್ತವೆ, ಇವು ಪರ್ಯಾಯ , ಉದ್ದವಾಗಿ- ಈಟಿಯ ತಲೆಯ ಆಕಾರವನ್ನು ಹೊಂದಿದ್ದು, ಯಾವುದೇ ಕ್ರಮವಿಲ್ಲದ ರೀತಿಯ ಸಂಪೂರ್ಣ ಎಲೆಯ ಮುಖ್ಯ ಭಾಗದಿಂದ ಹೊರಗಿರುವ ಭಾಗಗಳು, ಚರ್ಮವನ್ನು ಹೋಲುವ ವಿನ್ಯಾಸ, ರೋಮರಹಿತ, ಸ್ವಲ್ಪ ಮೊಂಡಾದ ತುದಿಯನ್ನು ಹೊಂದಿರುತ್ತವೆ. ಇವು ಛತ್ರಿ ಆಕಾರದ (ಒಂದು ಸಾಮಾನ್ಯ ಬಿಂದುವಿನಿಂದ ಹರಡುವ ಹಲವಾರು ಸಣ್ಣ ಹೂವಿನ ಕಾಂಡಗಳನ್ನು ಒಳಗೊಂಡಿರುತ್ತದೆ) ಹೂಗೊಂಚಲನ್ನು ಹೊಂದಿರುತ್ತದೆ. ಹೂವುಗಳು ದ್ವಿಲಿಂಗಿ, ಪ್ರಕಾಶಮಾನವಾದ ಕೆಂಪು ಬಣ್ಣದಲ್ಲಿರುತ್ತದೆ. ಇವು ಒಂದು ಕಾರ್ಪೆಲ್‌ನಿಂದ ( ಹೂವಿನ ಸ್ತ್ರೀ ಸಂತಾನೋತ್ಪತ್ತಿ ಭಾಗ) ರೂಪುಗೊಂಡ ಒಣ ಏಕಮುಖ ಹಣ್ಣನ್ನು ಹೊಂದಿದ್ದು ಬೀಜಗಳನ್ನು ಬಿಡುಗಡೆ ಮಾಡಲು ಒಂದು ಬದಿಯಲ್ಲಿ ಬಾಯಿ ಬಿರಿಯುತ್ತದೆ; ಇವು ರೆಕ್ಕೆಗಳಿಂದ ಕೂಡಿದ, 4 ಬೀಜಗಳನ್ನು ಹೊಂದಿರುತ್ತವೆ.