ಸ್ಟರ್ಕ್ಯುಲಿಯಾ ಬಾಲಂಗಸ್ ಎಲ್.

ಕನ್ನಡದ ಹೆಸರು : -
ಸಾಮಾನ್ಯ ಹೆಸರು : Nawa
ಕುಟುಂಬದ ಹೆಸರು : ಮಾಲ್ವೇಸೀ
ವೈಜ್ಞಾನಿಕ ಹೆಸರು : ಸ್ಟರ್ಕ್ಯುಲಿಯಾ ಬಾಲಂಗಸ್ ಎಲ್.
ಪ್ರಭೇದದ ಪ್ರಕಾರ: ದೇಶಿಯ
ಪ್ರಕೃತಿ ಶಾಸ್ತ್ರ : ಪತನಶೀಲ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ:
ಹಣ್ಣಾಗುವ ಅವಧಿ:
ಮೂಲ: ಭಾರತ, ಶ್ರೀಲಂಕಾ

ಉಪಯೋಗಗಳು

ತೊಗಟೆಯ ನಾರನ್ನು ಬಳಸಿ ಕುಟೀರಗಳನ್ನು ನಿರ್ಮಿಸಲಾಗುತ್ತದೆ.

ವಿವರಣೆ

18 ಮೀ ಎತ್ತರದವರೆಗೆ, ಬೆಳೆಯುವ ಪತನಶೀಲ ಮರವಾಗಿದ್ದು, ಮರವನ್ನು ಬೆಂಬಲಿಸುವ ಕಾಂಡದ ಪ್ಲೇಟ್‌ನಂತಹ ಬೆಳವಣಿಗೆಯಾಗಿ ನೆಲದ ಮೇಲೆ ವಿಸ್ತರಿಸಿರುವ ಮರದ ಬುಡವನ್ನು ಹೊಂದಿರುತ್ತವೆ. ತೊಗಟೆ ಬೂದು ಬಣ್ಣ, ನಯವಾದ ಮೇಲ್ಮೈ ಹೊಂದಿದ್ದು ತೆಳುವಾದ ಸುತ್ತಿನ ಚಕ್ಕೆಗಳಲ್ಲಿ ಸ್ವಾಭಾವಿಕವಾಗಿ ಕಾಂಡದಿಂದ ಸಿಪ್ಪೆ ಸುಲಿಯುತ್ತದೆ. ಕಿರುಕೊಂಬೆಗಳು ದಟ್ಟವಾದ ಉಣ್ಣೆಯ ಕೂದಲಿನಿಂದ ಮುಚ್ಚಿರುತ್ತವೆ. ಎಲೆಗಳು ಸರಳ, ಪರ್ಯಾಯವಾಗಿದ್ದು, ಪಲ್ವಿನೇಟ್ (ಫ್ಯಾಬೇಸಿ ಕುಟುಂಬದಲ್ಲಿ ದ್ವಿದಳ ಧಾನ್ಯದ ಸಸ್ಯಗಳಲ್ಲಿ ಕಂಡುಬರುವ ಒಂದು ಅಂಗ) ತಳಭಾಗವನ್ನು ಹೊಂದಿರುತ್ತವೆ. ಇವು ದೀರ್ಘವೃತ್ತಾಕಾರ, ಅಂಡಾಕಾರ, ಉದ್ದವಾದ, ದೀರ್ಘವೃತ್ತೀಯ-ಅಂಡಾಕಾರ ಅಥವಾ ಉದ್ದವಾದ-ಅಂಡಾಕಾರದಲ್ಲಿರುತ್ತವೆ. ಎಲೆಯ ತಳವು ನಕ್ಷತ್ರಾಕಾರದ ಕೂದಲುಗಳಿಂದ ತುಂಬಾನಯವಾದ, ಸರಿಸುಮಾರು ಹೃದಯದ ಆಕಾರ ಅಥವಾ ವೃತ್ತಾಕಾರದಲ್ಲಿರುತ್ತವೆ. ಎಲೆಯ ತುದಿಯು ಮೊನಚಾದ ಬಿಂದುವನ್ನು ಹೊಂದಿದ್ದು, ಸಂಪೂರ್ಣ ಅಂಚನ್ನು ಹೊಂದಿರುತ್ತದೆ. ಇವು ರೆಂಬೆಗಳ ತುದಿಯಲ್ಲಿ ಅಥವಾ ಅಕ್ಷಾಕಂಕುಳಿನಲ್ಲಿ ಕವಲೊಡೆದ ಪುಷ್ಪಮಂಜರಿಯನ್ನು ಹೊಂದಿರುತ್ತದೆ. ಹೂವುಗಳು ಏಕಲಿಂಗಿ ಅಥವಾ ಒಂದೇ ಮರದಲ್ಲಿ ದ್ವಿಲಿಂಗಿ ಮತ್ತು ಏಕಲಿಂಗಿ ಹೂವುಗಳನ್ನು ಹೊಂದಿದ್ದು, ಹಳದಿ ಅಥವಾ ಹಸಿರು ಮಿಶ್ರಿತ ನೇರಳೆ ಬಣ್ಣದಲ್ಲಿರುತ್ತವೆ. ಇವು ಅಡ್ಡಲಾದ ದಿಕ್ಕಿನಲ್ಲಿ ಹರಡಿಕೊಂಡಿರುವ, ಮರದ ರೀತಿಯ ಒಣ ಹಣ್ಣನ್ನು ಹೊಂದಿದ್ದು ಮತ್ತು ಅದರ ಬೀಜಗಳನ್ನು ಬಿಡುಗಡೆ ಮಾಡಲು ಒಂದು ಬದಿಯಲ್ಲಿ ಒಡೆಯುತ್ತದೆ. ಹಣ್ಣುಗಳು ಉದ್ದವಾಗಿದ್ದು, ಕಿತ್ತಳೆಯಿಂದ ಕೆಂಪು ಬಣ್ಣವನ್ನು ಹೊಂದಿರುತ್ತವೆ ಹಾಗೂ ಹೊರಗಡೆ ತುಕ್ಕು ಹಿಡಿದಂತೆ ಕಾಣುವ ಉಣ್ಣೆಯ ಕೂದಲಿಂದ ಮುಚ್ಚಿರುತ್ತವೆ; ಇವು ಹೊಳೆಯುವ, ಉದ್ದವಾದ, ಕಪ್ಪು ಬಣ್ಣದ ಬೀಜವನ್ನು ಹೊಂದಿರುತ್ತವೆ.