ಕನ್ನಡದ ಹೆಸರು : | - |
ಸಾಮಾನ್ಯ ಹೆಸರು : | ಬಾಸ್ಟರ್ಡ್ ಪೂನ್ ಟ್ರೀ, ಜಾವಾ ಆಲಿವ್ ಟ್ರೀ |
ಕುಟುಂಬದ ಹೆಸರು : | ಮಾಲ್ವೇಸೀ |
ವೈಜ್ಞಾನಿಕ ಹೆಸರು : | ಸ್ಟರ್ಕ್ಯುಲಿಯಾ ಫೋಟಿಡಾ ಎಲ್. |
ಪ್ರಭೇದದ ಪ್ರಕಾರ: | ವಿದೇಶಿ |
ಪ್ರಕೃತಿ ಶಾಸ್ತ್ರ : | ಪತನಶೀಲ |
ಸಂರಕ್ಷಣೆಯ ಸ್ಥಿತಿ : | ತಿಳಿದಿಲ್ಲ |
ಹೂಬಿಡುವ ಅವಧಿ: | ಫೆಬ್ರವರಿ - ಆಗಸ್ಟ್ |
ಹಣ್ಣಾಗುವ ಅವಧಿ: | ಫೆಬ್ರವರಿ - ಆಗಸ್ಟ್ |
ಮೂಲ: | ದಕ್ಷಿಣ ಆಫ್ರಿಕಾ |
ಇದರ ತೊಗಟೆ ಅಪೆರಿಯಂಟ್ (ಸ್ವೇದಕಾರಿ- ಬೆವರುವಿಕೆಯನ್ನು ಪ್ರಚೋದಿಸುವ ಬಳಸಲಾಗುತ್ತದೆ), ಡಯಾಫೊರೆಟಿಕ್ (ಮಲಬದ್ಧತೆಯನ್ನು ನಿವಾರಿಸಲು ಬಳಸಲಾಗುತ್ತದೆ) ಮತ್ತು ಮೂತ್ರವರ್ಧಕವಾಗಿದೆ. ಇದನ್ನು ಡ್ರಾಪ್ಸಿ (ಚರ್ಮದ ಅಡಿಯಲ್ಲಿ ಊತ) ಮತ್ತು ಸಂಧಿವಾತದ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಇದರ ಎಲೆಯನ್ನು ಮುಖ್ಯವಾಗಿ ಮಲಬದ್ಧತೆಯನ್ನು ನಿವಾರಿಸಲು ಬಳಸಲಾಗುತ್ತದೆ. ಹಣ್ಣುಗಳು ಅಸ್ಟ್ರಿಂಜೆಂಟ್ (ದೇಹದ ಅಂಗಾಂಶಗಳನ್ನು ಕುಗ್ಗಿಸುವ ಅಥವಾ ಸಂಕುಚಿತಗೊಳಿಸುವ ರಾಸಾಯನಿಕ) ಮತ್ತು ಮ್ಯೂಸಿಲೇಜಿನಸ್ (ಲೋಳೆ) ಆಗಿದೆ. ಇದನ್ನು ಗೊನೊರಿಯಾ (ಲೈಂಗಿಕವಾಗಿ ಹರಡುವ ಬ್ಯಾಕ್ಟೀರಿಯಾದಿಂದ ಉಂಟಾಗುವ ಸೋಂಕು) ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.
25 ಮೀ ಎತ್ತರದವರೆಗಿನ ಪತನಶೀಲ ಮರವಾಗಿದೆ, ಮರವನ್ನು ಬೆಂಬಲಿಸುವ ಕಾಂಡದ ಪ್ಲೇಟ್‌ನಂತಹ ವಿಸ್ತರಣೆಯಾಗಿ ನೆಲದ ಮೇಲೆ ಬೆಳೆಯುವ ಮರದ ಬೇರನ್ನು ಹೊಂದಿದೆ; ಇವು ನಯವಾದ, ಬೂದುಬಣ್ಣದ ತೊಗಟೆಯನ್ನು ಹೊಂದಿರುತ್ತದೆ. ಹಾಗೂ ಈ ತೊಗಟೆಯ ಮೇಲ್ಮೈ ಪದರವು ನಿರ್ದಿಷ್ಟ ಕ್ರಮವಿಲ್ಲದ ರೀತಿಯಲ್ಲಿ ಉದುರಿಹೋಗುತ್ತದೆ. ತೊಗಟೆಯ ಗುರುತುಗಳು (ಬ್ಲೇಜ್) ಕೆಂಪು ಮಿಶ್ರಿತ-ಹಳದಿ ಬಣ್ಣದಲ್ಲಿರುತ್ತದೆ; ಮರದ ಟೊಂಗೆಗಳು ಅಡ್ಡಲಾಗಿ ಸುರುಳಿಯಾಗಿವೆ. ಎಲೆಗಳು ಹಸ್ತದ ಆಕಾರದಲ್ಲಿ ಒಂದಕ್ಕೊಂದು ಕೂಡಿಕೊಂಡು, ಪರ್ಯಾಯವಾಗಿರುತ್ತವೆ ಮತ್ತು ಕಿರುಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ; ಇವು 3 ರಿಂದ 9 ಚಿಗುರೆಲೆಗಳು, ಅಂಡಾಕಾರ, ಅಂಡಾಕಾರ-ಈಟಿ ತಲೆಯ ಆಕಾರ ಅಥವಾ ಅಂಡಾಕಾರದಿಂದ ಮೊನಚಾದ ಆಕಾರ, ಚರ್ಮವನ್ನು ಹೋಲುವ ಮೇಲ್ಮೈ , ಬೆಣೆಯಾಕಾರದ ತಳ, ಮೊನಚಾದ ತುದಿ, ಸಂಪೂರ್ಣ ಅಂಚನ್ನು ಹೊಂದಿರುತ್ತದೆ. ಇವು ಕಾಂಡದ ತುದಿಯಲ್ಲಿ ಅಥವಾ ಅಕ್ಷಾಕಂಕುಳಿನ ಮಧ್ಯ ಕಾಂಡದ ಉದ್ದಕ್ಕೂ ಸಮಾನ ಅಂತರದಲ್ಲಿ ಸಣ್ಣ ಸಮಾನ ಕಾಂಡಗಳಿಂದ ಜೋಡಿಸಲಾದ ಪ್ರತ್ಯೇಕ ಹೂವುಗಳನ್ನು ಹೊಂದಿರುವ ಪುಷ್ಪಮಂಜರಿಯನ್ನು ಹೊಂದಿರುತ್ತದೆ. ಹೂವುಗಳು ಏಕಲಿಂಗಿ ಅಥವಾ ಕೆಲವು ಹೂವುಗಳನ್ನು ಕೇಸರಗಳೊಂದಿಗೆ ಮಾತ್ರ, ಕೆಲವು ಪಿಸ್ತೂಲ್‌ಗಳೊಂದಿಗೆ ಮಾತ್ರ, ಮತ್ತು ಕೆಲವು ಎರಡನ್ನೂ ಒಂದೇ ಅಥವಾ ವಿಭಿನ್ನ ಸಸ್ಯಗಳಲ್ಲಿದ್ದು, ಇವು ಮಂದ-ಕಿತ್ತಳೆ ಬಣ್ಣದಿಂದ ಕೆಂಪು ಬಣ್ಣ, ಹಾಗೂ ಅಹಿತಕರವಾದ ವಾಸನೆಯನ್ನು ಹೊಂದಿರುತ್ತದೆ. 1 ರಿಂದ 5 ಬೀಜಗಳನ್ನು ಹೊಂದಿರುವ ಒಂದು ಕಾರ್ಪೆಲ್‌ನಿಂದ (ಹೂವಿನ ಒಳಗಿನ ಸುರುಳಿಯನ್ನು ರೂಪಿಸುವ ಎಲೆಗಳಂತಹ, ಬೀಜ-ಹೊಂದಿರುವ ರಚನೆ) ರೂಪುಗೊಂಡ ಒಣ ಏಕಮುಖ ಹಣ್ಣುಗಳನ್ನು ಹೊಂದಿರುತ್ತದೆ. ಇವು ಕಡುಗೆಂಪು ಬಣ್ಣ, ದೋಣಿಯ ಆಕಾರದ, 5 ಹಾಲೆಗಳೊಂದಿಗೆ ಮರದ ರೀತಿಯ ಹೊರಪದರವನ್ನು ಹೊಂದಿದ್ದು ರೋಮರಹಿತವಾಗಿರುತ್ತದೆ. ಇವುಗಳು ಹಲವಾರು ಅಂಡಾಕಾರದ, ನಯವಾದ, ಸಣ್ಣ ಹಳದಿ ಬಣ್ಣದ ಹೆಚ್ಚುವರಿ ಬೀಜದ ಹೊದಿಕೆಯನ್ನು ಹೊಂದಿರುವ ಬೀಜಗಳನ್ನು ಹೊಂದಿರುತ್ತದೆ.