ಸ್ಟಿರಿಯೊಸ್ಪೆರ್ಮಮ್ ಟೆಟ್ರಾಗೋನಮ್ ಡಿಸಿ.

ಕನ್ನಡದ ಹೆಸರು : Kalladri, Kalludure ಕಲಾದ್ರಿ , ಕಲ್ಲುಕುದುರೆ
ಸಾಮಾನ್ಯ ಹೆಸರು : ಯಲ್ಲೋ ಸ್ನೇಕ್ ಟ್ರೀ
ಕುಟುಂಬದ ಹೆಸರು : ಬಿಗ್ನೋನಿಯೇಸಿ
ವೈಜ್ಞಾನಿಕ ಹೆಸರು : ಸ್ಟಿರಿಯೊಸ್ಪೆರ್ಮಮ್ ಟೆಟ್ರಾಗೋನಮ್ ಡಿಸಿ.
ಪ್ರಭೇದದ ಪ್ರಕಾರ: ಸ್ವದೇಶಿ
ಪ್ರಕೃತಿ ಶಾಸ್ತ್ರ : ಪತನಶೀಲ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ:
ಹಣ್ಣಾಗುವ ಅವಧಿ:
ಮೂಲ: ಭಾರತ, ಶ್ರೀಲಂಕಾ

ಉಪಯೋಗಗಳು

ಪರಿಮಳಯುಕ್ತ ಹೂವುಗಳು ಮತ್ತು ರುಚಿಯಾದ ಬೇರಿನ ಕಷಾಯದಿಂದ ತಂಪಾಗಿಸುವ ಪಾನೀಯವನ್ನು ತಯಾರಿಸಲಾಗುತ್ತದೆ ಮತ್ತು ಇದನ್ನು ಜ್ವರವನ್ನು ಗುಣಪಡಿಸಲು ಬಳಸಲಾಗುತ್ತದೆ. ತೊಗಟೆಯ ರಸವನ್ನು ಅಜೀರ್ಣಕ್ಕೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.

ವಿವರಣೆ

15 ರಿಂದ 20 ಮೀ ಎತ್ತರದ ಪತನಶೀಲ ಮರವಾಗಿದೆ. ಇವು (ಸಂಯೋಜಿತ ಎಲೆಯ) ಕಾಂಡದ ಎರಡೂ ಬದಿಗಳಲ್ಲಿ ಚಿಗುರೆಲೆಗಳನ್ನು ಹೊಂದಿದ್ದು, ಪರಸ್ಪರ ವಿರುದ್ಧವಾಗಿ ಕೂಡಿದ್ದು 3 ರಿಂದ 6 ಜೋಡಿಯ ಚಿಗುರೆಲೆಗಳನ್ನು ಹೊಂದಿರುತ್ತದೆ; ಚಿಗುರೆಲೆಗಳು ವಿರುದ್ಧ ರೀತಿಯಲ್ಲಿದ್ದು, ಅಂಡಾಕಾರವಾಗಿದೆ, ಇವು ಸಣ್ಣ ಮೃದು ಕೂದಲು ಅಥವಾ ರೋಮರಹಿತವಾದ, ಬಾಗಿದ ಅಥವಾ ಬೆಣೆಯಾಕಾರದ ತಳದಿಂದ ಕೂಡಿದ್ದು, ಎಲೆಯ ಚೂಪಾದ ತುದಿ ಅಥವಾ ತುದಿಯು ಉದ್ದವಾದ ಬಿಂದುವಿನಲ್ಲಿ ಕೊನೆಗೊಳ್ಳುತ್ತದೆ. ಇವು ಕಾಂಡದ ತುದಿಯಲ್ಲಿ ಕವಲೊಡೆದ ಪುಷ್ಪಮಂಜರಿಯನ್ನು ಹೊಂದಿರುತ್ತದೆ. ಹೂಗಳು ಉಭಯಲಿಂಗಿ, ತಿಳಿ ಹಳದಿ ಬಣ್ಣದ, ಸಿಲಿಂಡರಾಕಾರದ ಅಥವಾ ಸ್ವಲ್ಪ ಮೊನಚಾದ, ಮತ್ತು ಗಣನೀಯವಾದ ಉಬ್ಬುಗಳು ಅಥವಾ ರೇಖೆಗಳಿಲ್ಲದ ಕೊಳವೆಯನ್ನು ಹೊಂದಿದೆ, ಹಾಗೂ ಹೂವಿನ ಬಾಯಲ್ಲಿ ದಟ್ಟವಾದ ಉಣ್ಣೆ ರೀತಿಯ ಕೂದಲಿನಿಂದ ಮುಚ್ಚಲ್ಪಟ್ಟಿದೆ. ಇವು ಸರಳ, ಒಣ, ತಿರುಳಿರುವ, ಬೀಜವನ್ನು ಹೊರಹಾಕಲು ಬಾಯಿ ಬಿರಿಯುವ ಹಣ್ಣನ್ನು ಹೊಂದಿರುತ್ತದೆ , ಹಾಗೂ ಇದು ಉದ್ದ ಮತ್ತು ಮೊನಚಾದ, 4 ಕೋನಗಳನ್ನು ಹೊಂದಿರುತ್ತದೆ. ಬೀಜಗಳು ಅಂಡಾಕಾರದಲ್ಲಿರುತ್ತವೆ, ಬೀಜದ ತುದಿಯಲ್ಲಿ ಬಿಳಿ ಪೊರೆಯುಳ್ಳ ರೆಕ್ಕೆಗಳನ್ನು ಹೊಂದಿರುತ್ತದೆ.