ಸ್ವೀಟೆನಿಯಾ ಮ್ಯಾಕ್ರೋಫಿಲ್ಲಾ ಕಿಂಗ್

ಕನ್ನಡದ ಹೆಸರು : Davala, Hebbaevu, Mahaagani. ದವಲ, ಹೆಬ್ಬೇವು, ಮಹಾಗಾನಿ.
ಸಾಮಾನ್ಯ ಹೆಸರು : ಹೊಂಡುರಾನ್ ಮಹೋಗಾನಿ
ಕುಟುಂಬದ ಹೆಸರು : ಮೆಲಿಯೇಸಿ
ವೈಜ್ಞಾನಿಕ ಹೆಸರು : ಸ್ವೀಟೆನಿಯಾ ಮ್ಯಾಕ್ರೋಫಿಲ್ಲಾ ಕಿಂಗ್
ಪ್ರಭೇದದ ಪ್ರಕಾರ: ವಿದೇಶಿ
ಪ್ರಕೃತಿ ಶಾಸ್ತ್ರ : ಪತನಶೀಲ
ಸಂರಕ್ಷಣೆಯ ಸ್ಥಿತಿ : ಕಡಿಮೆ ಕಾಳಜಿ
ಹೂಬಿಡುವ ಅವಧಿ: ಮಾರ್ಚ್ - ಏಪ್ರಿಲ್
ಹಣ್ಣಾಗುವ ಅವಧಿ: ಸೆಪ್ಟೆಂಬರ್ - ಡಿಸೆಂಬರ್
ಮೂಲ: ಮಧ್ಯ ಅಮೇರಿಕಾ

ಉಪಯೋಗಗಳು

ತೊಗಟೆಯು ಅಸ್ಟ್ರಿಂಜೆಂಟ್ (ಸಂಕೋಚಕ - ದೇಹದ ಅಂಗಾಂಶಗಳನ್ನು ಕುಗ್ಗಿಸುವ ಅಥವಾ ಸಂಕುಚಿತಗೊಳಿಸುವ ರಾಸಾಯನಿಕ) , ಕಹಿ ಮತ್ತು ಜ್ವರನಿವಾರಕವಾಗಿದೆ. ಅತಿಸಾರ ಮತ್ತು ಜ್ವರಗಳಿಗೆ ಚಿಕಿತ್ಸೆ ನೀಡಲು ಇದರ ಕಷಾಯವನ್ನು ಬಳಸಲಾಗುತ್ತದೆ. ತೊಗಟೆಯನ್ನು ಬಣ್ಣ ಹಾಕಲು ಮತ್ತು ಚರ್ಮ ಸಂಸ್ಕರಣ ಮಾಡಲು ಬಳಸಲಾಗುತ್ತದೆ.

ವಿವರಣೆ

30 ಮೀ ಎತ್ತರವಿರುವ ಪತನಶೀಲ ಮರವಾಗಿದೆ, ತೊಗಟೆ ಕಂಡು ಬಣ್ಣದಿಂದ ಕೂಡಿದೆ. ಕೇಂದ್ರ ಕಾಂಡದ ಎರಡೂ ಬದಿಯಲ್ಲಿರುವ ಸಮಾನ ಸಂಖ್ಯೆಯ ಎಲೆಗಳು ಪರ್ಯಾಯ ಮತ್ತು ರೋಮರಹಿತವಾಗಿರುತ್ತವೆ; 4 ರಿಂದ 10 ಚಿಗುರೆಲೆಗಳನ್ನು ಹೊಂದಿರುತ್ತವೆ, ಇವು ವಿರುದ್ದ ದಿಕ್ಕಿನಲ್ಲಿದ್ದು, ಓರೆಯಾಗಿ ಅಂಡಾಕಾರದಿಂದ-ಈಟಿಯ ತಲೆಯ ಆಕಾರಯನ್ನು ಹೊಂದಿರುತ್ತವೆ, ಹಾಗೂ ರೋಮರಹಿತ, ಹೊಳೆಯುವ ಮೇಲ್ಮೈ, ಮಂದವಾದ ತಳ, ಚರ್ಮವನ್ನು ಹೋಲುವ, ಬಾಗಿದ ತಳ, ಮೊನಚಾದ ಅಥವಾ ತುದಿಯಲ್ಲಿ ಉದ್ದವಾಗಿ ಮೊನಚಾದ, ಸಂಪೂರ್ಣ ಅಂಚನ್ನು ಹೊಂದಿರುತ್ತವೆ. ಇವು ಅಕ್ಷಾಕಂಕುಳಿನಲ್ಲಿ ಕವಲೊಡೆದ ಪುಷ್ಪಮಂಜರಿಯನ್ನು ಹೊಂದಿರುತ್ತದೆ. ಹೂವುಗಳು ದ್ವಿಲಿಂಗಿಯಾಗಿದೆ ಮತ್ತು ತಿಳಿ ಹಳದಿ ಬಣ್ಣವನ್ನು ಹೊಂದಿರುತ್ತದೆ. ಇವು ಸರಳ, ಒಣ, ತಿರುಳಿರುವ ಹಾಗೂ ಬೀಜವನ್ನು ಹೊರಹಾಕಲು ಬಾಯಿ ಬಿರಿಯುವ ಹಣ್ಣುಗಳನ್ನು ಹೊಂದಿರುತ್ತದೆ, ಇವು ಆಯತಾಕಾರದಿಂದ-ಗೋಳಾಕಾರವನ್ನು ಹೊಂದಿದ್ದು, ಮರದ ರೀತಿಯ, ಬೂಷ್ಟು ಹಿಡಿದ ಹೊರ ಮೇಲ್ಮೈ ಹೊಂದಿರುತ್ತದೆ. ಅನೇಕ ಬೀಜಗಳು ಹೊಂದಿದ್ದು, ರೆಕ್ಕೆಗಳಿರುತ್ತವೆ.