ಸ್ವೀಟೆನಿಯಾ ಮಹಾಗೋನಿ (ಎಲ್.) ಜಾಕ್.

ಕನ್ನಡದ ಹೆಸರು : -
ಸಾಮಾನ್ಯ ಹೆಸರು : ಸ್ಮಾಲ್ - ಲಿವ್ಡ್ ಮಹೋಗಾನಿ. ಕ್ಯೂಬನ್ ಮಹೋಗಾನಿ
ಕುಟುಂಬದ ಹೆಸರು : ಮೆಲಿಯೇಸಿ
ವೈಜ್ಞಾನಿಕ ಹೆಸರು : ಸ್ವೀಟೆನಿಯಾ ಮಹಾಗೋನಿ (ಎಲ್.) ಜಾಕ್.
ಪ್ರಭೇದದ ಪ್ರಕಾರ: ವಿದೇಶಿ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ಕಡಿಮೆ ಕಾಳಜಿ
ಹೂಬಿಡುವ ಅವಧಿ: ಮಾರ್ಚ್ - ಏಪ್ರಿಲ್
ಹಣ್ಣಾಗುವ ಅವಧಿ: ಸೆಪ್ಟೆಂಬರ್ - ನವೆಂಬರ್
ಮೂಲ: ಉತ್ತರ ಅಮೇರಿಕಾ

ಉಪಯೋಗಗಳು

ಕಾಂಡದ ತೊಗಟೆಯು ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ತಡೆಯುವ, ಸಂಕೋಚಕ (ದೇಹದ ಅಂಗಾಂಶಗಳನ್ನು ಕುಗ್ಗಿಸುವ ಅಥವಾ ಸಂಕುಚಿತಗೊಳಿಸುವ ರಾಸಾಯನಿಕ) ಮತ್ತು ಜ್ವರನಿವಾರಕ ಗುಣಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಇದನ್ನು ಅತಿಸಾರ ಮತ್ತು ಭೇದಿಗೆ ಕಷಾಯವಾಗಿ, ಜೀವಸತ್ವಗಳು ಮತ್ತು ಕಬ್ಬಿಣದ ಮೂಲವಾಗಿ ಮತ್ತು ರಕ್ತಸ್ರಾವವನ್ನು ತಡೆಯಲು ಬಾಯಿಯ ಮೂಲಕ ತೆಗೆದುಕೊಳ್ಳುವ ಔಷಧಿಯಾಗಿ ಬಳಸಲಾಗುತ್ತದೆ. ತೊಗಟೆ ಕಡಿದಾಗ ಬರುವ ಕಡು ಕೆಂಪು ದ್ರವವನ್ನು, ರಕ್ತವನ್ನು ಶುದ್ಧೀಕರಿಸಲು, ಹಸಿವನ್ನು ಹೆಚ್ಚಿಸಲು ಮತ್ತು ಕ್ಷಯರೋಗ ಇರುವ ರೋಗಿಗಳಲ್ಲಿ ಶಕ್ತಿಯನ್ನು ಮರಳಿ ತುಂಬಲು ಬಳಸಲಾಗುತ್ತದೆ. ಗುಂಡಿನ ಗಾಯಗಳಿಗೆ ಚಿಕಿತ್ಸೆ ನೀಡಲು, ತೊಗಟೆಯ ಕಷಾಯವನ್ನು ಬಳಸಲಾಗುತ್ತದೆ.

ವಿವರಣೆ

30 ಮೀ ಎತ್ತರದವರೆಗಿನ ಅರೆ-ನಿತ್ಯಹರಿದ್ವರ್ಣ ಮರವಾಗಿದೆ, ಮರವನ್ನು ಬೆಂಬಲಿಸುವ ಕಾಂಡದ ಪ್ಲೇಟ್‌ನಂತಹ ವಿಸ್ತರಣೆಯಾಗಿ ನೆಲದ ಮೇಲೆ ಬೆಳೆಯುವ ಮರದ ಬೇರನ್ನು ಹೊಂದಿರುತ್ತದೆ; ಇವುಗಳ ತೊಗಟೆ ಸಮತಟ್ಟಾಗಿರುತ್ತದೆ ಹಾಗೂ ಸ್ವಲ್ಪ ಕೆಂಪಾಗಿರುತ್ತದೆ. ಇವು ಬೂದು ಬಣ್ಣದ ವಿಸ್ತರಿಸದ ನಯವಾದ ರೆಂಬೆಗಳನ್ನು ಹೊಂದಿರುತ್ತದೆ. ಎಳೆಗಳು (ಸಂಯೋಜಿತ ಎಲೆಯ) ಕಾಂಡದ ಎರಡೂ ಬದಿಗಳಲ್ಲಿ ಚಿಗುರೆಲೆಗಳನ್ನು ಹೊಂದಿರುತ್ತದೆ, ಸಾಮಾನ್ಯವಾಗಿ ಪರಸ್ಪರ ವಿರುದ್ಧವಾಗಿ ಕೂಡಿರುತ್ತವೆ. ಚಿಗುರೆಲೆಗಳು 5 ಎಲೆಗಳ ಜೋಡಿಯಾಗಿದೆ,ಇವು ಅಂಡಾಕಾರದಿಂದ ಈಟಿಯ ತಲೆಯ ಆಕಾರವನ್ನು ಹೊಂದಿದೆ, ಗಡುಸಾದ, ರೋಮರಹಿತವಾದ ಅಥವಾ ವಿರಳವಾದ ರೋಮಗಳುಳ್ಳ, ತಿಳಿ ಹಸಿರಿನಿಂದ ಕಾಡು ಹಸಿರು ಬಣ್ಣದ ಎಲೆಯ ಕೆಳಗಿನ ಮೇಲ್ಮೈ, ಬಾಗಿದ ತಳವನ್ನು ಹೊಂದಿರುತ್ತದೆ, ಹಾಗೂ ಉದ್ದವಾಗಿ ಕೊನೆಗೊಳ್ಳುವ ಎಲೆಯ ತುದಿಯು, ಸಂಪೂರ್ಣ ಅಂಚು ಇಲ್ಲವೇ ದಂತುರೀಕೃತ ಅಂಚನ್ನು ಹೊಂದಿರುತ್ತದೆ. ಕಾಂಡದ ತುದಿಯಲ್ಲಿ ಹುಟ್ಟುವ ಕವಲೊಡೆದ ಹೂಗೊಂಚಲು ಹೊಂದಿದೆ. ಹೂವುಗಳು ಚಿಕ್ಕದಾಗಿರುತ್ತವೆ, ಇವು ದ್ವಿಲಿಂಗಿ ಆಗಿವೆ, ಮತ್ತು ಕೆನೆ-ಹಳದಿ ಬಣ್ನವನ್ನು ಹೊಂದಿದ್ದು, ರೋಮರಹಿತವಾಗಿರುತ್ತವೆ. ಇವು ಅಂಡಾಕಾರದ,ಕಂಡು ಬಣ್ಣದ, ಕ್ಯಾಪ್ಸುಲ್ (ಸರಳ, ಒಣ, ತಿರುಳಿರುವ, ಬೀಜವನ್ನು ಹೊರಹಾಕಲು ಬಾಯಿ ಬಿರಿಯುವ ಹಣ್ಣು) ಹಣ್ಣುಗಳನ್ನು ಹೊಂದಿರುತ್ತದೆ ಮತ್ತು ಇದರ ಬೀಜದ ತುದಿಯಲ್ಲಿ ರೆಕ್ಕೆಗಳಿರುತ್ತವೆ.