ಅರೌಕೇರಿಯಾ ಕೊಲಂನರಿಸ್ (ಜೀ.ಫಾಸ್ಟ್.) ಹುಕ್.

ಕನ್ನಡದ ಹೆಸರು : -
ಸಾಮಾನ್ಯ ಹೆಸರು : ಕ್ರಿಸ್ಮಸ್ ಮರ
ಕುಟುಂಬದ ಹೆಸರು : ಅರೌಕಾರಿಯೇಸಿ
ವೈಜ್ಞಾನಿಕ ಹೆಸರು : ಅರೌಕೇರಿಯಾ ಕೊಲಂನರಿಸ್ (ಜೀ.ಫಾಸ್ಟ್.) ಹುಕ್.
ಪ್ರಭೇದದ ಪ್ರಕಾರ: ವಿದೇಶೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ಕನಿಷ್ಠ ಕಾಳಜಿ
ಹೂಬಿಡುವ ಅವಧಿ: -
ಹಣ್ಣಾಗುವ ಅವಧಿ: -
ಮೂಲ: ನ್ಯೂ ಕ್ಯಾಲೆಡೋನಿಯಾ

ಉಪಯೋಗಗಳು

ಇದನ್ನು ಒಂದು ಅಲಂಕಾರಿಕ ಮರವಾಗಿ ಬಳಸಲಾಗುತ್ತದೆ.

ವಿವರಣೆ

60 ಮೀ ವರೆಗೆ ಎತ್ತರ ಇರುವ ನಿತ್ಯಹರಿದ್ವರ್ಣ, ಕಿರಿದಾದ ಶಂಕುವಿನಾಕಾರದ ಮರ. ಕಾಗದದಂತಹ ತೊಗಟೆಯುಳ್ಳ,ಹೋಲಿಕೆಯಲ್ಲಿ ಚಿಕ್ಕದಾದ ಮರ. ಸಮತಲವಾಗಿರುವ ಅದರ ಕೊಂಬೆಗಳು, ನೆಟ್ಟಗೆ ಸ್ವಲ್ಪ ವಾಲಿರುವ ತೆಳ್ಳನೆಯ ಕಾಂಡದ ಸುತ್ತಲೂ ಸುರುಳಿಯಾಕಾರದಲ್ಲಿರುತ್ತವೆ. ಕೊಂಬೆಗಳು ಬಳ್ಳಿಯಂತಹ, ಸಮತಲವಾದ ಕಿರುಕೊಂಬೆಗಳೊಂದಿಗೆ ಜೋಡಿಸಲ್ಪಟ್ಟಿರುತ್ತವೆ. ಕಿರುಕೊಂಬೆಗಳು ಚಿಕ್ಕದಾದ, ಹಸಿರು ಬಣ್ಣದ,ಒಳಗೆ ಬಾಗಿದ, ಬಿಂದು-ತುದಿಯ, ಸುರುಳಿಯಾಕಾರದಲ್ಲಿ ಜೋಡಿಸಲಾದ, ಓವರ್ ಲ್ಯಾಪಿಂಗ್ ಎಲೆಗಳಿಂದ ಮುಚ್ಚಲ್ಪಟ್ಟಿರುತ್ತವೆ, ಚಿಗುರೆಲೆಗಳು ಸೂಜಿಯಂತೆ ಇರುತ್ತವೆ. ಗಂಡು ಕೋನ್ ಒಬ್ಲಾಂಗ್ – ಸಿಲಿಂಡ್ರಿಕಲ್, ಸೊಗಸಾದ ಹಲ್ಲುಗಳೊಂದಿಗೆ ,5-10 ಸೆಂ.ಮೀ ಉದ್ದವಿರುತ್ತದೆ, .ಸಣ್ಣ ತೊಟ್ಟೆಲೆಗಳಿರುವ ಹೆಣ್ಣು ಕೋನ್ . 10-15 ಸೆಂ.ಮೀ ಉದ್ದವಿರುತ್ತದೆ. ಬೀಜಗಳು 3-3.5 ಸೆಂ.ಮೀ ಉದ್ದವಿರುತ್ತವೆ ಮತ್ತು ರೆಕ್ಕೆಗಳನ್ನು ಹೊಂದಿರುತ್ತವೆ.