ಕನ್ನಡದ ಹೆಸರು : | Nerale Hannina Mara ನೇರಳೆ ಹಣ್ಣಿನ ಮರ |
ಸಾಮಾನ್ಯ ಹೆಸರು : | ಜಾವಾ ಪ್ಲಮ್ |
ಕುಟುಂಬದ ಹೆಸರು : | ಮಿರ್ಟೇಸಿ |
ವೈಜ್ಞಾನಿಕ ಹೆಸರು : | ಸಿಜಿಜಿಯಮ್ ಕ್ಯುಮಿನಿ (ಎಲ್.) ಸ್ಕೀಲ್ಸ್ |
ಪ್ರಭೇದದ ಪ್ರಕಾರ: | ವಿದೇಶಿ |
ಪ್ರಕೃತಿ ಶಾಸ್ತ್ರ : | ನಿತ್ಯಹರಿದ್ವರ್ಣ |
ಸಂರಕ್ಷಣೆಯ ಸ್ಥಿತಿ : | ತಿಳಿದಿಲ್ಲ |
ಹೂಬಿಡುವ ಅವಧಿ: | ಮಾರ್ಚ್ - ಏಪ್ರಿಲ್ |
ಹಣ್ಣಾಗುವ ಅವಧಿ: | ಮೇ-ಜೂನ್ |
ಮೂಲ: | ಭಾರತೀಯ ಉಪಖಂಡ, ಆಗ್ನೇಯ ಏಷ್ಯಾ |
ಹಣ್ಣನ್ನು ಅಸ್ಟ್ರಿಂಜೆಂಟ್ (ಸಂಕೋಚಕ -ದೇಹದ ಅಂಗಾಂಶಗಳನ್ನು ಕುಗ್ಗಿಸುವ ಅಥವಾ ಸಂಕುಚಿತಗೊಳಿಸುವ ರಾಸಾಯನಿಕ) , ಜಠರೌಷಧ, ಕಾರ್ಮಿನೇಟಿವ್ ( ವಾಯುವನ್ನು ನಿವಾರಿಸುವ ಔಷಧ), ಆಂಟಿಸ್ಕೋರ್ಬ್ಯುಟಿಕ್ (ಸ್ಕರ್ವಿಯನ್ನು ಗುಣಪಡಿಸುವ ಅಥವಾ ತಡೆಗಟ್ಟುವ ಔಷಧ) , ಮೂತ್ರವರ್ಧಕವಾಗಿ ಔಷಧೀಯ ರೂಪದಲ್ಲಿ ಬಳಸಲಾಗುತ್ತದೆ. ಮತ್ತು ಮಧುಮೇಹ ಬರದಂತೆ ತಡೆಗಟ್ಟುವ ಗುಣಲಕ್ಷಣಗಳನ್ನು ಹೊಂದಿದೆ ಎಂದು ವರದಿಯಾಗಿದೆ.
ನಿತ್ಯಹರಿದ್ವರ್ಣ ಮರವಾಗಿದ್ದು 6 ರಿಂದ 20 ಮೀ ಎತ್ತರವಿರುತ್ತದೆ. ಕೊಂಬೆಗಳು ದುಂಡಾಗಿರುತ್ತವೆ ಮತ್ತು ಒಣಗಿದಾಗ ಬೂದು ಮಿಶ್ರಿತ ಬಿಳಿ ಬಣ್ಣ ಹೊಂದಿರುತ್ತವೆ. ಎಲೆಗಳು ಸರಳ, ವಿರುದ್ಧವಾಗಿ ಅಗಲವಾದ ಅಂಡಾಕಾರದಿಂದ ಕಿರಿದಾದ ಅಂಡಾಕಾರವನ್ನು ಹೊಂದಿರುತ್ತದೆ, ಇವು ಗಡುಸಾದ, ಸಣ್ಣ ಗ್ರಂಥಿಗಳೊಂದಿಗೆ ಎರಡೂ ಮೇಲ್ಮೈ ಹೊಂದಿದ್ದು, ರೋಮರಹಿತ, ತಳವು ಬೆಣೆಯಾಕಾರದಿಂದ ಮೊಂಡಾಗಿರುತ್ತದೆ, ಮತ್ತು ತುದಿ ಚೂಪಾದ ಬಿಂದುವಿಗೆ ಕೊನೆಗೊಳ್ಳುತ್ತದೆ ಹಾಗೂ ಸಂಪೂರ್ಣ ಅಂಚನ್ನು ಹೊಂದಿರುತ್ತದೆ. ಹೂಗೊಂಚಲುಗಳು ಅಕ್ಷಾಕಂಕುಳಿನಲ್ಲಿ ಹೂಬಿಡುವ ರೆಂಬೆಗಳ ಮೇಲೆ ಅಥವಾ ಸಾಂದರ್ಭಿಕವಾಗಿ ಕಾಂಡದ ತುದಿಯಲ್ಲಿ, ಸೈಮ್ಸ್ (ಕಾಂಡದ ಪ್ರತಿ ಬೆಳವಣಿಗೆಯ ಬಿಂದುವಿನ ಅಂತ್ಯವು ಹೂವನ್ನು ಬಿಡುತ್ತದೆ, ಆದ್ದರಿಂದ ಹೊಸ ಬೆಳವಣಿಗೆಯು ಪಕ್ಕದ ಚಿಗುರುಗಳಿಂದ ಬರುತ್ತದೆ ಮತ್ತು ಹಳೆಯ ಹೂವುಗಳು ಮೇಲ್ಭಾಗದಲ್ಲಿರುತ್ತವೆ) ಹೂವಿನ ಗುಂಪನ್ನು ಹೊಂದಿರುತ್ತದೆ. ಹೂವುಗಳು ದ್ವಿಲಿಂಗಿ, ಹಸಿರು-ಬಿಳಿ ಬಣ್ಣ, ಅನೇಕ ಕೇಸರಗಳನ್ನು ಹೊಂದಿರುತ್ತದೆ. ಹಣ್ಣು ಒಂದು ಬೆರ್ರಿ (ಸಣ್ಣ ಹಾಗೂ ತಿರುಳಿರುವ ಹಣ್ಣು) ಆಗಿದ್ದು, ಕೆಂಪು ಬಣ್ಣದಿಂದ ಕಪ್ಪು ಬಣ್ಣದಲ್ಲಿರುತ್ತದೆ, ಇವು ಅಂಡಾಕಾರದಿಂದ ಆಯತಾಕಾರವನ್ನು ಹೊಂದಿರುತ್ತದೆ, ಹಣ್ಣು ರಸಭರಿತವಾಗಿದ್ದು ಒಂದು ಬೀಜವನ್ನು ಹೊಂದಿರುತ್ತದೆ.