ತಬೆಬುಯಾ ಔರಿಯಾ (ಸಿಲ್ವಾ ಮಾನ್ಸೊ) ಬೆಂತ್. & ಹುಕ್.ಎಫ್. ಎಕ್ಸ್ ಎಸ್.ಮೂರ್

ಕನ್ನಡದ ಹೆಸರು : -
ಸಾಮಾನ್ಯ ಹೆಸರು : ಸಿಲ್ವರ್ ಟ್ರಂಪೆಟ್ ಟ್ರೀ
ಕುಟುಂಬದ ಹೆಸರು : ಬಿಗ್ನೋನಿಯೇಸಿ
ವೈಜ್ಞಾನಿಕ ಹೆಸರು : ತಬೆಬುಯಾ ಔರಿಯಾ (ಸಿಲ್ವಾ ಮಾನ್ಸೊ) ಬೆಂತ್. & ಹುಕ್.ಎಫ್. ಎಕ್ಸ್ ಎಸ್.ಮೂರ್
ಪ್ರಭೇದದ ಪ್ರಕಾರ: ವಿದೇಶಿ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ: ಫೆಬ್ರವರಿ - ಏಪ್ರಿಲ್
ಹಣ್ಣಾಗುವ ಅವಧಿ:
ಮೂಲ: ಉಷ್ಣವಲಯದ ಅಮೇರಿಕಾ

ಉಪಯೋಗಗಳು

ಮರವನ್ನು ಉಪಕರಣದ ಹಿಡಿಕೆಗಳು, ಡೊಂಕಾಗಿರಬೇಕಾದ ವಸ್ತುಗಳು, ಹೇಗೆ ಬೇಕಾದರೂ ಬಾಗುವ ಪಟ್ಟಿಗಳು, ಪೀಠೋಪಕರಣಗಳು, ಚೌಕಟ್ಟುಗಳು, ಕಟ್ಟಡ ನಿರ್ಮಾಣಕ್ಕಾಗಿ ಬಳಸಲಾಗುತ್ತದೆ.

ವಿವರಣೆ

16 ಮೀ ಎತ್ತರದವರೆಗಿನ ಅರೆ-ಪತನಶೀಲ ಮರವಾಗಿದೆ, ಎಳೆಯ ಟೊಂಗೆಗಳು ಸಾಮಾನ್ಯವಾಗಿ ದಪ್ಪ ಮತ್ತು ಕಾರ್ಕಿ (ಮರದ ಹೊರ ರಕ್ಷಣಾತ್ಮಕ ಪದರ), ಸುಮಾರು ಸುರುಳಿಯಾಕಾರ, ಲೆಪಿಡೋಟ್ ( ಸ್ಕರ್ಫಿ ಹೊರಪದರ) ದಿಂದ ಕೂಡಿರುತ್ತದೆ. 5 ರಿಂದ 7 ಚಿಗುರೆಲೆಗಳ ಹಸ್ತಾಕಾರದ ಎಲೆಗಳನ್ನು ಹೊಂದಿದೆ; ಚಿಗುರೆಲೆಗಳು ಆಯತಾಕಾರದ-ಅಂಡವೃತ್ತದಿಂದ ಕಿರಿದಾದ ಆಯತಾಕಾರದ-ಈಟಿಯ ತಲೆಯ ಆಕಾರವನ್ನು ಹೊಂದಿರುತ್ತದೆ, ಇವು ಚರ್ಮದ ವಿನ್ಯಾಸವನ್ನು ಹೋಲುವ ಮೇಲ್ಮೈ, ಒಣಗಿದಾಗ ತಿಳಿ ಬೂದು ಹಸಿರು ಬಣ್ಣದ ಎಲೆ, ಹಾಗೂ ಎಲೆಯ ಮೇಲ್ಮೈ ಲೆಪಿಡೋಟ್ ( ಸ್ಕರ್ಫಿ ಹೊರಪದರ) ಅಥವಾ ರೋಮರಹಿತವಾಗಿರುತ್ತವೆ. ಇವು ಕಾಂಡದ ತುದಿಯಲ್ಲಿ ಕವಲೊಡೆದ ಆಕರ್ಷಕವಾದ ಹೂಗೊಂಚಲು ಹೊಂದಿದೆ. ಇದರ ಕೊಂಬೆಗಳು ಒತ್ತಾಗಿದ್ದು ಲೆಪಿಡೋಟ್ ( ಸ್ಕರ್ಫಿ ಹೊರಪದರ) ಅನ್ನು ಹೊಂದಿದೆ, ದುಂಡಾದದಿಂದ ವಿಲೋಮ ಹೃದಯಾಕೃತಿಯ ತಳ, ದುಂಡಾದ ಅಥವಾ ಸ್ವಲ್ಪ ಮಟ್ಟಿಗೆ ಚೂಪಾದ ತುದಿಯು, ಸಂಪೂರ್ಣ ಅಂಚನ್ನು ಹೊಂದಿರುತ್ತದೆ. ಕಾಂಡದ ತುದಿಯಲ್ಲಿ ಹುಟ್ಟುವ ಕವಲೊಡೆದ ಹೂಗೊಂಚಲು ಹೊಂದಿದೆ. ಇದು ಕೊಳವೆಯಾಕಾರದ ಹಳದಿ ಬಣ್ಣದ ಹೂವುಗಳನ್ನು ಹೊಂದಿದೆ. ಇವು ಎರಡೂ ತುದಿಗಳು ಮೊನಚಾದ, ಉದ್ದವಾದ ಕ್ಯಾಪ್ಸುಲ್ (ಸರಳ, ಒಣ, ತಿರುಳಿರುವ, ಬೀಜವನ್ನು ಹೊರಹಾಕಲು ಬಾಯಿ ಬಿರಿಯುವ ಹಣ್ಣು) ಹಣ್ಣನ್ನು ಹೊಂದಿದೆ. ಹಣ್ಣುಗಳು ಬೂದು ಬಣ್ಣದಲ್ಲಿರುತ್ತವೆ, ದಟ್ಟವಾದ ಲೆಪಿಡೋಟ್ (ಸ್ಕರ್ಫಿ ಹೊರ ಪದರ) ಹೊಂದಿರುತ್ತವೆ. ಬೀಜಗಳು ಗಾಜಿನಂಥ-ಪೊರೆಯುಳ್ಳ ಎರಡು ರೆಕ್ಕೆಗಳನ್ನು ಹೊಂದಿರುವ ಅಂಚು, ತಳದಲ್ಲಿ ಸಮತೋಲನವಿಲ್ಲದ ರೀತಿಯಲ್ಲಿರುವ ಕಂದುಬಣ್ಣ, ಬದಲಿಗೆ ಹಣ್ಣಿನ ಮಧ್ಯ ಭಾಗದ ಬದಿಯಲ್ಲಿ ನೇರವಾಗಿರುತ್ತದೆ.