ತಬೆಬುಯಾ ಪಲ್ಲಿಡಾ (ಲಿಂಡ್ಲಿ) ಮಿಯರ್ಸ್

ಕನ್ನಡದ ಹೆಸರು : -
ಸಾಮಾನ್ಯ ಹೆಸರು : ಕ್ಯೂಬನ್ ಪಿಂಕ್ ಟ್ರಂಪೆಟ್
ಕುಟುಂಬದ ಹೆಸರು : ಬಿಗ್ನೋನಿಯೇಸಿ
ವೈಜ್ಞಾನಿಕ ಹೆಸರು : ತಬೆಬುಯಾ ಪಲ್ಲಿಡಾ (ಲಿಂಡ್ಲಿ) ಮಿಯರ್ಸ್
ಪ್ರಭೇದದ ಪ್ರಕಾರ: ವಿದೇಶಿ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ: ಜನವರಿ - ಫೆಬ್ರವರಿ
ಹಣ್ಣಾಗುವ ಅವಧಿ:
ಮೂಲ: ಕೆರಿಬಿಯನ್

ಉಪಯೋಗಗಳು

ಕ್ಯಾನ್ಸರ್, ಜ್ವರ ಮತ್ತು ನೋವಿಗೆ ಚಿಕಿತ್ಸೆ ನೀಡಲು ಇದನ್ನು ಗಿಡಮೂಲಿಕೆ ಅಥವಾ ಔಷಧೀಯ ಚಹಾದ ರೂಪದಲ್ಲಿ ಸಾಂಪ್ರದಾಯಿಕ ಔಷಧದಲ್ಲಿ ಬಳಸಲಾಗುತ್ತದೆ. ಇದಲ್ಲದೆ, ಟಿ. ಪಲ್ಲಿಡಾ ಎಲೆಯ ಸಾರಗಳು ಕ್ಯಾನ್ಸರ್ ತಡೆಗಟ್ಟುವ ಅಂಶಗಳನ್ನು ಹೊಂದಿವೆ.

ವಿವರಣೆ

15 ಮೀ ಎತ್ತರದ ಚಿಕ್ಕ ಅರೆ-ಪತನಶೀಲ ಮರವಾಗಿದೆ, ಇವುಗಳ ಎಲೆಗಳು 1 ರಿಂದ 5 ಚಿಗುರೆಲೆ, ಅಂಡಾಕಾರದಿಂದ ಅಂಡಾಕಾರ-ಆಯಾಕಾರ, ಮೊಂಡಾದ ತುದಿ, ದುಂಡಾದ ತಳ, ಕಾಗದ ಅಥವಾ ಚರ್ಮವನ್ನು ಹೋಲುವ ವಿನ್ಯಾಸದೊಂದಿಗೆ, ಮೇಲ್ಮೈ ಸ್ಕರ್ಫಿ ರಕ್ಷಣೆಯ ಕೋಟ್ ಹೊಂದಿರುತ್ತದೆ. ಕಾಂಡದ ತುದಿಯಲ್ಲಿ ಸಾಮಾನ್ಯವಾಗಿ ಒಂದು ಅಥವಾ ಎರಡು ಹೂವುಗಳಿರುವ ಕವಲೊಡೆದ ಪುಷ್ಪಮಂಜರಿಯನ್ನು ಹೊಂದಿರುತ್ತದೆ. ಹೂವುಗಳು ಕೊಳವೆಯಾಕಾರ, ದ್ವಿಲಿಂಗಿಯಾಗಿದ್ದು, ಗುಲಾಬಿ ಮಿಶ್ರಿತ-ನೇರಳೆಯಿಂದ ಬಹುತೇಕ ಬಿಳಿ ಬಣ್ಣದಲ್ಲಿರುತ್ತದೆ, ಹೂವಿನ ಕೊಳವೆಯ ಒಳ ಭಾಗ ತೆರೆದುಕೊಳ್ಳುವಾಗ ಹಳದಿ ಬಣ್ಣದಿಂದ ಕೂಡಿರುತ್ತದೆ. ಹಣ್ಣು ಒಂದು ಕ್ಯಾಪ್ಸುಲ್ (ಸರಳ, ಒಣ, ತಿರುಳಿರುವ, ಬೀಜವನ್ನು ಹೊರಹಾಕಲು ಬಾಯಿ ಬಿರಿಯುವ ಹಣ್ಣು), ಉದ್ದವಾಗಿ-ಆಯತಾಕಾರ, ಎರಡು ತುದಿಯಲ್ಲೂ ದಪ್ಪವು ಕಡಿಮೆಯಾಗಿರುತ್ತದೆ. ಇದರ ಬೀಜಗಳು ಎರಡು ರೆಕ್ಕೆ, ನೋಟದಲ್ಲಿ ಗಾಜಿನಂತಹ-ಪೊರೆಯ ರೀತಿಯಿದ್ದು ಬೀಜದ ಸ್ಪಷ್ಟವಾಗಿ ಬೇರ್ಪಟ್ಟಿದೆ.