ಕನ್ನಡದ ಹೆಸರು : | Koranechellar ಕೊರಾನೆಚೆಲ್ಲಾರ್ |
ಸಾಮಾನ್ಯ ಹೆಸರು : | ಯಲ್ಲೋ ಎಲ್ಡರ್ , ಯಲ್ಲೋ ಟ್ರಂಪೆಟ್ಬುಷ್ |
ಕುಟುಂಬದ ಹೆಸರು : | ಬಿಗ್ನೋನಿಯೇಸಿ |
ವೈಜ್ಞಾನಿಕ ಹೆಸರು : | ಟೆಕೋಮಾ ಸ್ಟ್ಯಾನ್ಸ್ ಎಸ್ (ಎಲ್.) ಜಸ್. ಎಕ್ಸ್ ಕುಂತ್ |
ಪ್ರಭೇದದ ಪ್ರಕಾರ: | ವಿದೇಶಿ |
ಪ್ರಕೃತಿ ಶಾಸ್ತ್ರ : | ನಿತ್ಯಹರಿದ್ವರ್ಣ |
ಸಂರಕ್ಷಣೆಯ ಸ್ಥಿತಿ : | ತಿಳಿದಿಲ್ಲ |
ಹೂಬಿಡುವ ಅವಧಿ: | ಅಕ್ಟೋಬರ್ - ಮೇ |
ಹಣ್ಣಾಗುವ ಅವಧಿ: | ಜೂನ್ - ಆಗಸ್ಟ್ |
ಮೂಲ: | ದಕ್ಷಿಣ ಅಮೇರಿಕ |
ಮಧುಮೇಹ ಮತ್ತು ಹೊಟ್ಟೆನೋವಿಗೆ ಎಲೆಗಳ ಕಷಾಯವನ್ನು ಕುಡಿಯಬಹುದು. ಗಡುಸಾದ ಎಲೆ ಮತ್ತು ಬೇರಿನ ಕಷಾಯವನ್ನು ಮೂತ್ರವರ್ಧಕವಾಗಿ, ಸಿಫಿಲಿಸ್ (ಸಾಮಾನ್ಯವಾಗಿ ಲೈಂಗಿಕ ಸಂಪರ್ಕದಿಂದ ಹರಡುವ ಬ್ಯಾಕ್ಟೀರಿಯಾದ ಸೋಂಕು) ಗಾಗಿ ಅಥವಾ ಕರುಳಿನ ಹುಳುಗಳಿಗೆ (ಜಂತು ಹುಳ) ತೆಗೆದುಕೊಳ್ಳಬಹುದು. ಇವುಗಳ ಹೂವುಗಳು ಮೂತ್ರವರ್ಧಕಗಳಾಗಿವೆ.
ಪೊದೆಸಸ್ಯ ಅಥವಾ ಚಿಕ್ಕ ನಿತ್ಯಹರಿದ್ವರ್ಣ ಮರ, ರೋಮರಹಿತವಾಗಿರುತ್ತದೆ. ಸಸ್ಯದ ಕಾಂಡದ ತುದಿ ಜೋಡಿಯಾಗದ ಸಂಯುಕ್ತ ಎಲೆಗಳನ್ನು ಹೊಂದಿದೆ. ಇವು ವಿರುದ್ಧವಾಗಿ ಕೊಡಿರುತ್ತವೆ ಹಾಗೂ ಎಲೆ ಬಿಡುವ ಪ್ರತಿ ರೆಂಬೆಯು 3 ರಿಂದ 9 ಎಲೆಗಳನ್ನು ಹೊಂದಿರುತ್ತದೆ. ಚಿಗುರೆಲೆಗಳು ಈಟಿಯ ತಲೆಯ ಆಕಾರದಲ್ಲಿದ್ದು, ತುದಿಯು ಚೂಪಾಗಿ ಉದ್ದವಾಗಿ ಕಿರಿದಾಗಿರುತ್ತದೆ. ಎಲೆಯ ಮುಖ್ಯ ಮುಖ್ಯನಾಳಗಳು ಸಾಮಾನ್ಯವಾಗಿ ಸೂಕ್ಷ್ಮ ಕೂದಲಿನಿಂದ ಮುಚ್ಚಲ್ಪಟ್ಟಿರುತ್ತವೆ. ಇವು ಬಾಗಿದ ತಳವನ್ನು ಹೊಂದಿದ್ದು ತುದಿಯು ಉದ್ದವಾಗಿ ಕಿರಿದಾಗಿದೆ ಮತ್ತು ಗರಗಸದಂತೆ ಹಲ್ಲುಳ್ಳ ಅಂಚನ್ನು ಹೊಂದಿರುತ್ತವೆ. ಪುಷ್ಪಮಂಜರಿ (ರೇಸಿಮ್) ಕಾಂಡದ ತುದಿಯಲ್ಲಿ ಸಮಾನ ಮಧ್ಯಂತರಗಳಲ್ಲಿ ಸಣ್ಣ ಸಮಾನ ಕಾಂಡಗಳಲ್ಲಿ ಕೂಡಿಕೊಂಡು ಪ್ರತ್ಯೇಕವಾದ, ಸುಮಾರು 20 ಹಳದಿ ಬಣ್ಣದ ಹೂವುಗಳನ್ನು ಹೊಂದಿರುತ್ತದೆ. ಹೂವುಗಳು ದ್ವಿಲಿಂಗಿಯಾಗಿದ್ದು, ಕೊಳವೆಯಾಕಾರದಲ್ಲಿರುತ್ತವೆ, ಮತ್ತು ಪ್ರಕಾಶಮಾನವಾದ ಹಳದಿ ಬಣ್ಣವನ್ನು ಹೊಂದಿದ್ದು ಪರಿಮಳಯುಕ್ತವಾಗಿದೆ. ಬೀಜಗಳನ್ನು ಬಿಡುಗಡೆ ಮಾಡಲು ಬಾಯಿ ತೆರೆದುಕೊಳ್ಳುವ (ಕ್ಯಾಪ್ಸುಲ್) ಒಣ ಹಣ್ಣನ್ನು ಹೊಂದಿವೆ. ಬೀಜವು ವ್ರತ್ತಾಕಾರವಾಗಿ ಮತ್ತು ಸಂಕುಚಿತವಾಗಿದ್ದು, ರೆಕ್ಕೆಗಳನ್ನು ಹೊಂದಿರುತ್ತವೆ.