ಟೆಕ್ಟೋನಾ ಗ್ರಾಂಡಿಸ್ ಎಲ್.ಎಫ್.

ಕನ್ನಡದ ಹೆಸರು : Tegu, Saagavaani ತೇಗು, ಸಾಗವಾನಿ
ಸಾಮಾನ್ಯ ಹೆಸರು : ಟಿಕ್ ವುಡ್ ಟ್ರೀ
ಕುಟುಂಬದ ಹೆಸರು : ಲ್ಯಾಮಿಯಾಸಿ
ವೈಜ್ಞಾನಿಕ ಹೆಸರು : ಟೆಕ್ಟೋನಾ ಗ್ರಾಂಡಿಸ್ ಎಲ್.ಎಫ್.
ಪ್ರಭೇದದ ಪ್ರಕಾರ: ಸ್ವದೇಶಿ
ಪ್ರಕೃತಿ ಶಾಸ್ತ್ರ : ಪತನಶೀಲ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ: ಜೂನ್ - ಆಗಸ್ಟ್
ಹಣ್ಣಾಗುವ ಅವಧಿ: ನವೆಂಬರ್ - ಜನವರಿ
ಮೂಲ: ಬಾಂಗ್ಲಾದೇಶ, ಭಾರತ, ಶ್ರೀಲಂಕಾ, ಮ್ಯಾನ್ಮಾರ್

ಉಪಯೋಗಗಳು

ತೊಗಟೆಯನ್ನು ಅಸ್ಟ್ರಿಂಜೆಂಟ್ (ಸಂಕೋಚಕ - ದೇಹದ ಅಂಗಾಂಶಗಳನ್ನು ಕುಗ್ಗಿಸುವ ಅಥವಾ ಸಂಕುಚಿತಗೊಳಿಸುವ ರಾಸಾಯನಿಕ) ಮತ್ತು ಬ್ರಾಂಕೈಟಿಸ್ (ಶ್ವಾಸನಾಳಗಳ ಒಳಪೊರೆಯ ಉರಿಯೂತ) ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಹೂವುಗಳು ಮೂತ್ರವರ್ಧಕಗಳಾಗಿವೆ. ಇವುಗಳನ್ನು ಪಿತ್ತರಸ, ಬ್ರಾಂಕೈಟಿಸ್ (ಶ್ವಾಸನಾಳಗಳ ಒಳಪೊರೆಯ ಉರಿಯೂತ) ಮತ್ತು ಮೂತ್ರದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಇದನ್ನು ಹೊರಾಂಗಣ ಪೀಠೋಪಕರಣಗಳು ಮತ್ತು ಹಡಗಿನ ಮಹಡಿ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇದನ್ನು ಕತ್ತರಿಸುವ ಬೋರ್ಡ್‌ಗಳು (ಆಹಾರವನ್ನು ಕತ್ತರಿಸುವ ಮರದ ಬೋರ್ಡ್), ಒಳಾಂಗಣ ಅಂತಸ್ತುಗಳು, ಕೌಂಟರ್‌ಟಾಪ್‌ಗಳು (ಅಡುಗೆಮನೆಯಲ್ಲಿ ಕೆಲಸ ಮಾಡಲು ಸಮತಟ್ಟಾದ ಮೇಲ್ಮೈ) ಮತ್ತು ಒಳಾಂಗಣ ಹೊದಿಕೆಯಾಗಿ ಬಳಸಲಾಗುತ್ತದೆ.

ವಿವರಣೆ

ಇದು 40 ಮೀ ಎತ್ತರದವರೆಗೆ ಬೆಳೆಯುವ ದೊಡ್ಡ ಪತನಶೀಲ ಮರವಾಗಿದೆ. ಮರದ ಎಳೆ ಭಾಗಗಳು ನಕ್ಷತ್ರಾಕಾರದ ಕೂದಲಿನೊಂದಿಗೆ ದಟ್ಟವಾದ ಮೃದುತುಪ್ಪಳದಿಂದ ಕೂಡಿರುತ್ತವೆ. ಎಲೆಯು ಸರಳ, ವಿರುದ್ಧ, ಅಗಲವಾದ ಅಂಡಾಕಾರದಲ್ಲಿದ್ದು, ಮೇಲೆ ಹೊಳೆಯುವ ಹಸಿರುಬಣ್ಣ, ಮತ್ತು ಕೆಳಗೆ ತಳಿ ಬಣ್ಣದ ಜೊತೆ ದಟ್ಟವಾಗಿರುವ ರೋಮಗಳನ್ನು ಹೊಂದಿರುತ್ತದೆ, ಇವು ಸಾಮಾನ್ಯವಾಗಿ ಚರ್ಮದ ವಿನ್ಯಾಸವನ್ನು ಹೊಂದಿದ್ದು ಎಳೆಯ ತಳವು ವಿಶಾಲವಾಗಿ ಕಿರಿದಾದ ಮೊನಚಾದ, ತ್ರಿಕೋನದಿಂದ ಬೆಣೆ-ಆಕಾರ, ತುದಿಯು ಮೊನಚಾದ ಇಲ್ಲವೇ ಸ್ವಲ್ಪ ಹರಿತವಾಗಿದ್ದು, ಸಂಪೂರ್ಣ ಅಂಚಿನಿಂದ ಸ್ವಲ್ಪ ಹಲ್ಲಿನ ಅಂಚಿನ ವಿನ್ಯಾಸವನ್ನು ಹೊಂದಿರುತ್ತದೆ. ಕಾಂಡಗಳ ತುದಿಗಳಲ್ಲಿ ಇರುವ ಚಪ್ಪಟೆ-ಮೇಲ್ಭಾಗದ ಪುಷ್ಪಮಂಜರಿಯಾಗಿದ್ದು ಇದರಲ್ಲಿ ಕೇಂದ್ರ ಹೂವುಗಳು ಮೊದಲು ತೆರೆದುಕೊಳ್ಳುತ್ತವೆ, ನಂತರ ಬಾಹ್ಯ ಹೂವುಗಳು ತೆರೆದುಕೊಳ್ಳುತ್ತವೆ. ಹೂವುಗಳು ಬಿಳಿ, ಅಪರೂಪವಾಗಿ ಗುಲಾಬಿ ಬಣ್ಣದಲ್ಲಿದ್ದು ದ್ವಿಲಿಂಗಿಯಾಗಿದೆ. ಹಣ್ಣು ಒಂದು ಡ್ರೂಪ್ (ತೆಳುವಾದ ಚರ್ಮ, ತಿರುಳು, ಮದ್ಯದಲ್ಲಿ ಬೀಜವನ್ನು ಹೊಂದಿರುವ ಹಣ್ಣು) ಆಗಿದ್ದು, ಉಪಗೋಳಾಕಾರದಿಂದ ಚತುರ್ಭುಜವಾಗಿ ಚಪ್ಪಟೆಯಾಗಿರುತ್ತದೆ, ಉಣ್ಣೆಯಂತಹ ಕೂದಲಿನಿಂದ ಮುಚ್ಚಿರುತ್ತದೆ, ಸಾಮಾನ್ಯವಾಗಿ ಹಣ್ಣಿನ ತುದಿಯಲ್ಲಿ 4 ಹಾಲೆಗಳು, ಸ್ಪಂಜಿನಂತಹ ಹೊರ ಪದರ, ಮತ್ತು ಬೀಜವನ್ನು ಸುತ್ತುವರೆದಿರುವ ಗಟ್ಟಿಯಾದ ಪದರವಿದೆ . 1 ರಿಂದ 4 ಬೀಜಗಳನ್ನು ಹೊಂದಿದ್ದು ಉದ್ದವಾದ ಆಕಾರದಲ್ಲಿರುತ್ತವೆ.