ಕನ್ನಡದ ಹೆಸರು : | Neeru matti, Tore matti ನೀರು ಮತ್ತಿ , ತೊರೆ ಮತ್ತಿ |
ಸಾಮಾನ್ಯ ಹೆಸರು : | ಅರ್ಜುನ್ ಟ್ರೀ |
ಕುಟುಂಬದ ಹೆಸರು : | ಕಾಂಬ್ರೆಟೇಸಿ |
ವೈಜ್ಞಾನಿಕ ಹೆಸರು : | ಟರ್ಮಿನಾಲಿಯಾ ಅರ್ಜುನ (ರಾಕ್ಸ್‌ಬಿ. ಎಕ್ಸ್ ಡಿಸಿ.) ವೈಟ್ & ಅರ್ನ್. |
ಪ್ರಭೇದದ ಪ್ರಕಾರ: | ಸ್ವದೇಶಿ |
ಪ್ರಕೃತಿ ಶಾಸ್ತ್ರ : | ನಿತ್ಯಹರಿದ್ವರ್ಣ |
ಸಂರಕ್ಷಣೆಯ ಸ್ಥಿತಿ : | ಕಡಿಮೆ ಕಾಳಜಿ |
ಹೂಬಿಡುವ ಅವಧಿ: | ಮೇ - ಜೂನ್ |
ಹಣ್ಣಾಗುವ ಅವಧಿ: | ಸೆಪ್ಟೆಂಬರ್ - ನವೆಂಬರ್ |
ಮೂಲ: | ಭಾರತೀಯ ಉಪಖಂಡ |
ಅರ್ಜುನ ಮರದ ತೊಗಟೆಯನ್ನು ಅಸ್ಟ್ರಿಂಜೆಂಟ್ (ಸಂಕೋಚಕ - ದೇಹದ ಅಂಗಾಂಶಗಳನ್ನು ಕುಗ್ಗಿಸುವ ಅಥವಾ ಸಂಕುಚಿತಗೊಳಿಸುವ ರಾಸಾಯನಿಕ), ಸಿಹಿ, ಅಹಿತಕರವಾಗಿ ಕಹಿ ಅಥವಾ ಕಟುವಾದ, ತಂಪಾಗಿಸುವ, ಕಾಮೋತ್ತೇಜಕ, ಮೂತ್ರದ ಸಂಕೋಚಕ ಮತ್ತು ಕಫಹಾರಿಯಲ್ಲಿಬಳಸಲಾಗುತ್ತದೆ. ಹೃದಯಕ್ಕೆ ರಕ್ತ ಪೂರೈಕೆಯನ್ನು ಸುಧಾರಿಸುವುದರಿಂದ ಮುಖ್ಯವಾಗಿ ಹೃದಯದ ಬಲವರ್ಧಕ (ಕಾರ್ಡಿಯೋ ಟಾನಿಕ್) ಆಗಿ ಬಳಸಲಾಗುತ್ತದೆ. ಇದು ಹುಣ್ಣು ಚಿಕಿತ್ಸೆ, ಮುರಿತಗಳು, ಯಕೃತ್ತಿನ ಸಿರೋಸಿಸ್ (ವಿವಿಧ ಕಾರಣಗಳಿಂದ ಗಾಯದ ಗುರುತು ಯಕೃತ್ತಿನ ವೈಫಲ್ಯಕ್ಕೆ ಕಾರಣವಾಗುವ ದೀರ್ಘಕಾಲದ ಯಕೃತ್ತಿನ ಹಾನಿ), ರಕ್ತಕೊರತೆಯ ಹೃದ್ರೋಗ, ಮತ್ತು ಅಧಿಕ ರಕ್ತದೊತ್ತಡದಲ್ಲಿಯೂ ಸಹ ಉಪಯುಕ್ತವಾಗಿದೆ.
ನಯವಾದ, ತೆಳು ಹಸಿರು ಬಣ್ಣದಿಂದ ಬಿಳಿ ಬೂದು ತೊಗಟೆಯನ್ನು ಹೊಂದಿದ 25 ಮೀ ಎತ್ತರದವರೆಗಿನ ದೊಡ್ಡ ನಿತ್ಯಹರಿದ್ವರ್ಣ ಅಥವಾ ಪತನಶೀಲ ಮರವಾಗಿದೆ. ಎಲೆಗಳು ಸರಳವಾಗಿದ್ದು, ಪರ್ಯಾಯದಿಂದ ವಿರುದ್ದ, ಆಯತಾಕಾರದಿಂದ - ಅಂಡಾಕಾರ, ಅಥವಾ ಸರಿಸುಮಾರು ವೃತ್ತಾಕಾರ, ತುದಿ ಮೊಂಡಾದ, ಅಪರೂಪವಾಗಿ ಮಧ್ಯದಲ್ಲಿಅಗಲವಾಗಿ ತುದಿಯ ಕಡೆ ಚೂಪಾದ ಆಕಾರವನ್ನು ಹೊಂದಿರುತ್ತದೆ. ಇವು ಎಲೆಯ ಮೇಲೆ ಸ್ವಲ್ಪ ರೋಮವನ್ನು ಹೊಂದಿದ ಇಲ್ಲವೇ ರೋಮವಿಲ್ಲದ, ಕೆಳಗೆ ಭಾಗಶಃ ರೋಮವನ್ನು ಹೊಂದಿರುತ್ತದೆ, ಎಲೆಯು ತಳವು ವೃತ್ತಾಕಾರ ಅಥವಾ ಹೃದಯದ ಆಕಾರವನ್ನು ಹೊಂದಿದ್ದು ಮೊಂಡಾದ ತುದಿ, ಸಂಪೂರ್ಣ ಅಥವಾ ದುಂಡಗಿನ ಗರಗಸದ ಹಲ್ಲಿನಂತಿರುವ ಅಂಚನ್ನು ಹೊಂದಿರುತ್ತದೆ. ಅಕ್ಷಾಕಂಕುಳಿನಲ್ಲಿ ಅಥವಾ ಅಕ್ಷದ ತುದಿಯಲ್ಲಿರುವ ಕಾಂಡದಿಂದ ನೇರವಾಗಿ ಹುಟ್ಟುವ ಕವಲೊಡೆದ ಪುಷ್ಪಮಂಜರಿಯನ್ನು ಹೊಂದಿರುತ್ತವೆ. ಹೈಪಾಂಥಿಯಂ (ಪುಷ್ಪಪಾತ್ರೆ, ಎಸಳು ಸುತ್ತು ಮತ್ತು ಕೇಸರಗಳ ತಳದ ಭಾಗಗಳು ಬಟ್ಟಲು-ಆಕಾರದ ಕೊಳವೆಯನ್ನು ರೂಪಿಸುವ ರಚನೆ) ವಿಶಾಲವಾದ ಗಂಟೆಯ ಆಕಾರದಲ್ಲಿರುತ್ತದೆ. ಹಣ್ಣು ಒಂದು ಡ್ರೂಪ್ ಆಗಿದೆ (ತೆಳುವಾದ ಚರ್ಮ, ತಿರುಳು, ಮದ್ಯದಲ್ಲಿ ಬೀಜವನ್ನು ಹೊಂದಿರುವ ಹಣ್ಣು) ಇದು 5-ಕೋನ, ಅಂಡಾಕಾರದ-ಆಯತಾಕಾರ, ರೆಕ್ಕೆಗಳೊಂದಿಗೆ ಕಂದು ಬಣ್ಣದಲ್ಲಿರುತ್ತವೆ.