ಕನ್ನಡದ ಹೆಸರು : | Taarekaayi, Shanthikayi ತಾರೆ ಕಾಯಿ, ಶಾಂತಿ ಕಾಯಿ |
ಸಾಮಾನ್ಯ ಹೆಸರು : | ಬಹೇದ |
ಕುಟುಂಬದ ಹೆಸರು : | ಕಾಂಬ್ರೆಟೇಸಿ |
ವೈಜ್ಞಾನಿಕ ಹೆಸರು : | ಟರ್ಮಿನಾಲಿಯಾ ಬೆಲ್ಲಿರಿಕಾ (ಗೇರ್ಟ್ನ್.) ರಾಕ್ಸ್ಬ್. |
ಪ್ರಭೇದದ ಪ್ರಕಾರ: | ಸ್ವದೇಶಿ |
ಪ್ರಕೃತಿ ಶಾಸ್ತ್ರ : | ನಿತ್ಯಹರಿದ್ವರ್ಣ |
ಸಂರಕ್ಷಣೆಯ ಸ್ಥಿತಿ : | ಕಡಿಮೆ ಕಾಳಜಿ |
ಹೂಬಿಡುವ ಅವಧಿ: | ಏಪ್ರಿಲ್ - ಮೇ |
ಹಣ್ಣಾಗುವ ಅವಧಿ: | ನವೆಂಬರ್ - ಫೆಬ್ರವರಿ |
ಮೂಲ: | ಉಷ್ಣವಲಯದ ಏಷ್ಯಾ, ಭಾರತ |
ಹಣ್ಣು ಆಂಥೆಲ್ಮಿಂಟಿಕ್(ಪರಾವಲಂಬಿ ಹುಳುಗಳೊಂದಿಗೆ ಸೋಂಕುಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುವ ಔಷಧ), ಅಸ್ಟ್ರೆಂಜೆಂಟ್ (ಚರ್ಮದ ಜೀವಕೋಶಗಳು ಮತ್ತು ಇತರ ದೇಹದ ಅಂಗಾಂಶಗಳ ಸಂಕೋಚನವನ್ನು ಉಂಟುಮಾಡುವ ರಾಸಾಯನಿಕ), ಜೀರ್ಣಕಾರಿ, ಟಾನಿಕ್ (ಬಲವರ್ಧಕ) ಮತ್ತು ವಿರೇಚಕ(ಭೇದಿಔಷಧಗಳು) ಚಿಕಿತ್ಸೆಗಳಲ್ಲಿ ಬಳಕೆಯಾಗುತ್ತದೆ. ಜೀರ್ಣಕಾರಿ ಮತ್ತು ಉಸಿರಾಟದ ಸಮಸ್ಯೆಗಳ ಚಿಕಿತ್ಸೆಯಲ್ಲಿ ಇದನ್ನು ಮುಖ್ಯವಾಗಿ ಆಂತರಿಕವಾಗಿ ಬಳಸಲಾಗುತ್ತದೆ. ಭಾರತೀಯ ಮೂಲಿಕೆ ಔಷಧದಲ್ಲಿ ಮಾಗಿದ ಹಣ್ಣನ್ನು ಅತಿಸಾರ ಮತ್ತು ಅಜೀರ್ಣದ ಸಂದರ್ಭಗಳಲ್ಲಿ ಬಳಸಲಾಗುತ್ತದೆ, ಹಾಗೆಯೇ ಪಕ್ವವಾಗದ ಹಣ್ಣನ್ನು ದೀರ್ಘಕಾಲದ ಮಲಬದ್ಧತೆಯ ಸಂದರ್ಭಗಳಲ್ಲಿ ವಿರೇಚಕವಾಗಿ ಬಳಸಲಾಗುತ್ತದೆ. ನೋಯುತ್ತಿರುವ ಗಂಟಲು, ಒರಟುತನ (ಕರ್ಕಶತೆ) ಮತ್ತು ಕೆಮ್ಮಿನ ಲಕ್ಷಣಗಳನ್ನು ಉಂಟುಮಾಡುವ ಮೇಲ್ಭಾಗದ ಶ್ವಾಸೇಂದ್ರಿಯ ಪ್ರದೇಶದ ಸೋಂಕುಗಳಿಗೆ ಚಿಕಿತ್ಸೆ ನೀಡಲು ಹಣ್ಣನ್ನು ಹೆಚ್ಚಾಗಿ ಬಳಸಲಾಗುತ್ತದೆ. ಬಾಹ್ಯವಾಗಿ, ನೋಯುತ್ತಿರುವ ಕಣ್ಣುಗಳಿಗೆ ಲೋಷನ್ (ದ್ವವೌಷಧ) ತಯಾರಿಸಲು ಹಣ್ಣನ್ನು ಬಳಸಲಾಗುತ್ತದೆ.
35 ಮೀ ಎತ್ತರವಿರುವ ಪತನಶೀಲ ಮರವಾಗಿದ್ದು ಸಾಮಾನ್ಯವಾಗಿ ನೆಲದ ಮೇಲೆ ವಿಸ್ತಾರವಾಗಿ ಬೆಳೆದಿರುವ ಮರದ ಕಾಂಡವನ್ನು ಹೊಂದಿರುತ್ತದೆ. ತೊಗಟೆಯ ಮೇಲ್ಮೈ ಗಾಢವಾದ ಕಪ್ಪು ಬಣ್ಣದಿಂದ ಬೂದು ಬಣ್ಣದಲ್ಲಿರುತ್ತದೆ, ಇವು ನಯವಾದ, ಲಂಬವಾದ ಆಳವಿಲ್ಲದ ಬಿರುಕುಗಳನ್ನು ಹೊಂದಿದ್ದು, ಸಣ್ಣದಾಗಿ ಸಿಪ್ಪೆಸುಲಿಯುತ್ತದೆ ಮತ್ತು ಅರೆ-ನಾರುಗಳಿಂದ ಕೂಡಿರುತ್ತದೆ; ಮರದ ಕಾಂಡದ ಮೇಲಿನ ಗುರುತುಗಳು ಹಳದಿ ಬಣ್ಣದಲ್ಲಿರುತ್ತದೆ. ದ್ವಿತೀಯ ಕಾಂಡಗಳಿಂದ ಸ್ಪಷ್ಟವಾದ ಮುಖ್ಯ ಕಾಂಡದ ರಚನೆಯನ್ನು ಒಳಗೊಂಡಿರುವ ಟೊಂಗೆಗಳನ್ನು ಹೊಂದಿರುತ್ತದೆ. ಕಿರುಕೊಂಬೆಗಳು ದುಂಡಾಗಿರುತ್ತದೆ, ಬೂದು ಮತ್ತು ಕಂದು ಮಿಶ್ರಣದೊಂದಿಗೆ ಮಂದ ಹಳದಿ, ಕಂದು ಬಣ್ಣದ ಕೂದಲು ಇದ್ದು, ಎಲೆಗಳು ಉದುರಿದ ನಂತರ ಕಾಂಡದ ಮೇಲೆ ಗುರುತುಗಳು ಸುಲಭವಾಗಿ ಕಾಣುತ್ತದೆ. ಎಲೆಗಳು ಸರಳವಾಗಿರುತ್ತವೆ, ವಿರುದ್ಧ ಅಥವಾ ಪರ್ಯಾಯವಾಗಿರುತ್ತವೆ, ಕಿರುಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ. ಇವು ಅಂಡಾಕಾರ, ದೀರ್ಘವೃತ್ತೀಯ ಅಥವಾ ಅಂಡಾಕಾರವಾಗಿ-ದೀರ್ಘವೃತ್ತೀಯ ಆಕಾರದಲ್ಲಿರುತ್ತವೆ. ಎಳೆಗಳು ರೋಮರಹಿತವಾಗಿದ್ದು, ತಳವು ಓರೆಯಾಗಿ ಬೇನೆಯಾಕಾರದಲ್ಲಿದ್ದು, ಮೊಟಕುಗೊಳಿಸಿದ ಅಥವಾ ಚೂಪಾದ ರೀತಿಯಲ್ಲಿವೆ; ಎಲೆಯ ತುದಿಯು ಮೊಂಡಾಗಿ ಚೂಪಾಗಿರುತ್ತದೆ, ಹಾಗೂ ಸಂಪೂರ್ಣ ಅಂಚಿನಿಂದ ಕೂಡಿರುತ್ತವೆ. ಇವು ಎಲೆಯ ಅಕ್ಷದಿಂದ ಹುಟ್ಟುವ ಮತ್ತು ಕಾಂಡದಿಂದ ನೇರವಾಗಿ ಬೆಳೆಯುವ ಪುಷ್ಪಮಂಜರಿಯನ್ನು ಹೊಂದಿವೆ. ಹೂವುಗಳು ದ್ವಿಲಿಂಗಿಯಾಗಿದ್ದು, ಹಸಿರು ಮಿಶ್ರಿತ ಹಳದಿ ಬಣ್ಣವನ್ನು ಹೊಂದಿರುತ್ತವೆ. ತೆಳುವಾದ ಚರ್ಮ, ತಿರುಳು, ಮದ್ಯದಲ್ಲಿ ಬೀಜವನ್ನು ಹೊಂದಿರುವ ಹಣ್ಣನ್ನು ಹೊಂದಿದ್ದು, ಅಂಡಾಕಾರದಲ್ಲಿವೆ ,ಹಾಗೂ ಅಸ್ಪಷ್ಟವಾಗಿರುವ 5 ಎಣುಗೆರೆ, ಹಳದಿ ಮಿಶ್ರಿತ ಕಂದು ಬಣ್ಣ , ಹರಿತವಾದ ಅಂಚು, ರೆಕ್ಕೆಗಳಿಲ್ಲದ ಮತ್ತು ಮೃದುವಾದ ಕೂದಲನ್ನು ಹೊಂದಿರುತ್ತದೆ; ಅಂಡಾಕಾರದ ಒಂದು ಬೀಜವಿರುತ್ತದೆ.