ಟರ್ಮಿನೇಲಿಯಾ ಕ್ಯಾಟಪ್ಪಾ ಎಲ್.

ಕನ್ನಡದ ಹೆಸರು : Kaadu baadaami ಕಾಡುಬಾದಾಮಿ
ಸಾಮಾನ್ಯ ಹೆಸರು : ಇಂಡಿಯನ್ ಆಮಂಡ್
ಕುಟುಂಬದ ಹೆಸರು : ಕಾಂಬ್ರೆಟೇಸಿ
ವೈಜ್ಞಾನಿಕ ಹೆಸರು : ಟರ್ಮಿನೇಲಿಯಾ ಕ್ಯಾಟಪ್ಪಾ ಎಲ್.
ಪ್ರಭೇದದ ಪ್ರಕಾರ: ವಿದೇಶಿ
ಪ್ರಕೃತಿ ಶಾಸ್ತ್ರ : ಪತನಶೀಲ
ಸಂರಕ್ಷಣೆಯ ಸ್ಥಿತಿ : ಕಡಿಮೆ ಕಾಳಜಿ
ಹೂಬಿಡುವ ಅವಧಿ: ಮಾರ್ಚ್ - ಜೂನ್
ಹಣ್ಣಾಗುವ ಅವಧಿ: ಜುಲೈ - ಸೆಪ್ಟೆಂಬರ್
ಮೂಲ: ಏಷ್ಯಾ, ಆಸ್ಟ್ರೇಲಿಯಾ

ಉಪಯೋಗಗಳು

ಕೆಂಪು ಎಲೆಗಳು ಜಂತುಹುಳು ಔಷಧವಾಗಿ ಕಾರ್ಯನಿರ್ವಹಿಸುತ್ತವೆ, ಎಳೆಯ ಎಲೆಗಳ ರಸವನ್ನು ಬೀಜದ ಎಣ್ಣೆಯಿಂದ ಬೇಯಿಸಲಾಗುತ್ತದೆ ಇದನ್ನು ಕುಷ್ಠರೋಗಕ್ಕೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಎಲೆಗಳ ರಸವನ್ನು ಕೆಮ್ಮಿಗೆ ಸೇವಿಸಲಾಗುತ್ತದೆ. ಎಲೆಗಳ ಕಷಾಯವನ್ನು ಕಾಮಾಲೆ ರೋಗಕ್ಕೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ದೇಹದ ಹೊರಗಿನ ನೋವನ್ನು ಗುಣಪಡಿಸಲು ಎಲೆಗಳನ್ನು ಎದೆಯ ಮೇಲೆ ಉಜ್ಜಬಹುದು ಅಥವಾ ಬಿಸಿ ಮಾಡಿ, ದೇಹದ ಜಡ ಭಾಗಗಳಿಗೆ ಹಚ್ಚಬಹುದು. ಇವುಗಳನ್ನು ಊದಿಕೊಂಡ ಸಂಧಿವಾತ ಕೀಲುಗಳಿಗೆ ಬಳಸಬಹುದು. ಎಲೆಗಳನ್ನು ನೆತ್ತಿಗೆ ಹಚ್ಚುವುದರಿಂದ ತಾಜಾತನ ಮತ್ತು ಬೆವರುವಿಕೆಯನ್ನು ಉತ್ತೇಜಿಸುತ್ತದೆ.

ವಿವರಣೆ

20 ಮೀ ಎತ್ತರದವರೆಗಿನ ಪತನಶೀಲ ಅಥವಾ ಅರೆ ನಿತ್ಯಹರಿದ್ವರ್ಣ ಮರಗಳಾಗಿವೆ. ತೊಗಟೆ ಕಂದು ಮಿಶ್ರಿತ ಕಪ್ಪು ಬಣ್ಣವನ್ನು ಹೊಂದಿದ್ದು, ಉದ್ದುದ್ದವಾಗಿ ಸಿಪ್ಪೆ ಸುಲಿಯುತ್ತದೆ. ಇದು ಸಾಲುಗಳನ್ನು ರೂಪಿಸುವ ಹರಡುವ ಕೊಂಬೆಗಳನ್ನು ಹೊಂದಿದೆ. ಕಿರುಕೊಂಬೆಗಳು ದಟ್ಟವಾದ ಕಂದು ಮಿಶ್ರಿತ ಹಳದಿ ಬಣ್ಣದ ತುಪ್ಪಟದಿಂದ ಕೂಡಿದ್ದು ಮರದ ತುದಿಯ ಬಳಿ, ಎದ್ದುಕಾಣುವ ಎಲೆಗಳ ಗುರುತುಗಳಿಂದ ದಟ್ಟವಾಗಿ ಮುಚ್ಚಿದೆ. ಎಲೆಗಳು ಪರ್ಯಾಯವಾಗಿದ್ದು, ಕಿರುಕೊಂಬೆಗಳ ತುದಿಗಳಲ್ಲಿ ಕಿಕ್ಕಿರಿದು ತುಂಬಿದೆ; ಎಲೆಯ ಬ್ಲೇಡ್ (ದ್ಯುತಿಸಂಶ್ಲೇಷಣೆಯನ್ನು ನಿರ್ವಹಿಸುವ ಎಲೆಯ ವಿಸ್ತರಿಸಿದ ತೆಳುವಾದ ಮತ್ತು ಹಸಿರು ಭಾಗ) ಅಂಡಾಕಾರದಿಂದ ಈಟಿಯ ತಲೆಯಾಕಾರದಲ್ಲಿದ್ದು, ಅರ್ಧದಲ್ಲಿ ಸಂಕುಚಿತಗೊಂಡಿರುತ್ತದೆ, ಎರಡೂ ಮೇಲ್ಮೈಗಳು ರೋಮರಹಿತವಾಗಿರುತ್ತವೆ ಅಥವಾ ಎಲೆಯು ಚಿಕ್ಕದಾಗಿದ್ದಾಗ ಎಲೆಯ ಕೆಳಗಿನ ಮೇಲ್ಮೈ ವಿರಳವಾದ ಮೃದುವಾದ ಕೂದಲುಳ್ಳದ್ದಾಗಿರುತ್ತವೆ, ಬುಡ ಕಿರಿದಾಗಿ, ಹೃದಯಾಕಾರದ ಅಥವಾ ಮೊಟಕುಗೊಂಡಂತಿರುತ್ತದೆ, ಮೊಂಡಾದ ಅಥವಾ ಚೂಪಾದ ತೀಕ್ಷ್ಣವಾದ ಬಿಂದುವನ್ನು ಹೊಂದಿರುವ ತುದಿಯು, ಪೂರ್ಣ ಅಂಚನ್ನು ಹೊಂದಿರುತ್ತದೆ. ಅಕ್ಷದಿಂದ ಹುಟ್ಟುವ, ಸರಳ, ಉದ್ದವಾದ ಮತ್ತು ಕಾಂಡಕ್ಕೆ ನೇರವಾಗಿ ಜೋಡಿಸಲಾದ ಅನೇಕ ಹೂವಿನ ತಲೆಗಳಿಂದ ರೂಪುಗೊಂಡ ಪುಷ್ಪಮಂಜರಿಗಳನ್ನು ಹೊಂದಿವೆ. ಹೂವುಗಳು ದ್ವಿಲಿಂಗಿಯಾಗಿದ್ದು, ಪರಿಮಳಯುಕ್ತವಾಗಿರುತ್ತವೆ, ಹಾಗೂ ಬಿಳಿ ಬಣ್ಣದಿಂದ ನುಸು ಹಸಿರು ಬಣ್ಣವನ್ನು ಹೊಂದಿರುತ್ತವೆ. ಹಣ್ಣುಗಳು ಡ್ರೂಪ್ (ತೆಳುವಾದ ಚರ್ಮ,ತಿರುಳು ಮತ್ತು ಬೀಜವನ್ನು ಮಧ್ಯದಲ್ಲಿ ಹೊಂದಿರುವ ಹಣ್ಣು) ಆಗಿದೆ, ಮಾಗಿದಾಗ ಕೆಂಪು ಅಥವಾ ಕಪ್ಪು ಮಿಶ್ರಿತ ಹಸಿರು ಬಣ್ಣವನ್ನು ಹೊಂದಿರುತ್ತದೆ. ಇವು ಅಂಡಾಕಾರದಲ್ಲಿರುತ್ತವೆ, ಸ್ವಲ್ಪ ತೆಳುವಿನಿಂದ ಗಟ್ಟಿಯಾಗಿ ಸಂಕುಚಿತಗೊಂಡಿದ್ದು, ಮರದಂತಹ ಸಸ್ಯದ ಅಂಡಾಶಯದ ಆವರಣವು ಗಟ್ಟಿಯಾಗಿರುತ್ತದೆ.