ಅರೌಕೇರಿಯಾ ಕನ್ನಿಂಗ್ಹ್ಯಾಮಿ ಮುಡಿ.

ಕನ್ನಡದ ಹೆಸರು : -
ಸಾಮಾನ್ಯ ಹೆಸರು : ಹೂಪ್ ಪೈನ್, ಮೊರೆಟನ್ ಬೇ ಪೈನ್
ಕುಟುಂಬದ ಹೆಸರು : ಅರೌಕಾರಿಯೇಸಿ
ವೈಜ್ಞಾನಿಕ ಹೆಸರು : ಅರೌಕೇರಿಯಾ ಕನ್ನಿಂಗ್ಹ್ಯಾಮಿ ಮುಡಿ.
ಪ್ರಭೇದದ ಪ್ರಕಾರ: ವಿದೇಶೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ಕನಿಷ್ಠ ಕಾಳಜಿ
ಹೂಬಿಡುವ ಅವಧಿ:
ಹಣ್ಣಾಗುವ ಅವಧಿ: ಬೀಜ ಪ್ರಸರಣ - ನವೆಂಬರ್ - ಫೆಬ್ರವರಿ
ಮೂಲ: ಆಸ್ಟ್ರೇಲಿಯಾ

ಉಪಯೋಗಗಳು

ಇದನ್ನು ಕೊಯ್ದಾಗ ಇದರ ತೊಗಟೆ ಒಂದು ರಾಳವನ್ನು ಹೊರಹಾಕುತ್ತದೆ. ಮೂತ್ರಪಿಂಡದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಈ ರಾಳವನ್ನು ಆಲ್ಕೋಹಾಲಿನಲ್ಲಿ ಕರಗಿಸಬಹುದು. ಇದು ಕಟ್ಟಡ ನಿರ್ಮಾಣದಲ್ಲಿ ಸಾಮಾನ್ಯ ಉದ್ದೇಶಕ್ಕೆ ಬಳಸುವ ಮರಕ್ಕೆ ಸೂಕ್ತವಾಗಿದೆ; ಕಟ್ಟಡಗಳು, ಪೀಠೋಪಕರಣಗಳು ಮತ್ತು ಕ್ಯಾಬಿನೆಟ್ ತಯಾರಿಕೆಗೆ, ಕಟ್ಟಡದ ಒಳಗಿನ ಫಿನಿಶಿಂಗ್ ಗೆ ಉತ್ತಮ ಶ್ರೇಣಿಯ ಮರದ ಬಳಕೆ ಸೂಕ್ತ. ಇದು ಅತ್ಯುತ್ತಮವಾದ ವೆನೀರ್ ಜಾತಿಯಾಗಿದೆ ಮತ್ತು ಇದನ್ನು ಪ್ಲೈವುಡ್ ತಯಾರಿಸಲು ಬಳಸಲಾಗುತ್ತದೆ..

ವಿವರಣೆ

. 70 ಮೀ ವರೆಗೆ ಎತ್ತರ ಇರುವ ನಿತ್ಯಹರಿದ್ವರ್ಣ ಮರ. ಒರಟಾದ, ಬೂದು- ಕಂದು ಬಣ್ಣದ ತೊಗಟೆಯುಳ್ಳ ಇದು, ಸಹಜವಾಗಿ ಸೀಳುತ್ತದೆ ಮತ್ತು ಸುಲಭವಾಗಿ ಸಿಪ್ಪೆ ಸುಲಿಯುತ್ತದೆ. ಪಕ್ಕದ ಕೊಂಬೆಗಳು ದಟ್ಟವಾಗಿರುತ್ತವೆ ಮತ್ತು ಇಳಿಬೀಳುತ್ತವೆ. ದ್ವಿರೂಪದ ಎಲೆಗಳು: ಎಳೆಯ ಮರಗಳ ಎಲೆಗಳು ಮತ್ತು ಪಾರ್ಶ್ವದ ಕಿರುಕೊಂಬೆಗಳು ಸಡಿಲವಾಗಿ ಜೋಡಿಸಲ್ಪಟ್ಟಿರುತ್ತವೆ, ಸೂಜಿಯಂತೆ, ಕಡಗೋಲಿನಂತಿದ್ದು, ಬುಡದಲ್ಲಿ ಅಗಲ, ತುದಿಯಲ್ಲಿ ಹರಿತ ಅಥವಾ ಚೂಪಾಗಿರುತ್ತವೆ. ಬಲಿತ ಮರಗಳ ಮೇಲೆ ಎಲೆಗಳು ಮತ್ತು ಕೋನ್ ಗಳು ಇರುವ ಕಿರುಕೊಂಬೆಗಳ ಮೇಲೆ ಎಲೆಗಳು ದಟ್ಟವಾಗಿ ಜೋಡಿಸಲ್ಪಟ್ಟಿರುತ್ತವೆ, ಓವರ್ ಲ್ಯಾಪ್ ಆಗಿರುತ್ತವೆ, ಅಂಡಾಕಾರದಿಂದ ತ್ರಿಕೋನ, ತುದಿ ಹರಿತ ಅಥವಾ ಚೂಪಾಗಿರುತ್ತದೆ. ಕೊನೆಯಲ್ಲಿರುವ ಒಂಟಿ ಪುರುಷ ಶಂಕುಗಳ ಅಂಡಾಕಾರದ ಅಥವಾ ದೀರ್ಘವೃತ್ತದ ಆಕಾರದಲ್ಲಿರುತ್ತವೆ. ತೊಟ್ಟೆಲೆಗಳಿರುವ ಹೆಣ್ಣು ಶಂಕುಗಳು ಓವಾಯಿಡ್ ಅಥವಾ ಎಲಿಪ್ಸಾಯಿಂಡ್ ಆಕಾರದಲ್ಲಿದ್ದು , 6-10 ಸೆಂ.ಮೀ ಉದ್ದವಿರುತ್ತವೆ, ತುದಿಯಲ್ಲಿ ಬಾಲವಿರುತ್ತದೆ. ಅಂಡಾಕಾರದ ಬೀಜಗಳು ಪೊರೆಯುಳ್ಳ ಪಾರ್ಶ್ವದ ರೆಕ್ಕೆಯನ್ನು ಹೊಂದಿರುತ್ತವೆ.