ಕನ್ನಡದ ಹೆಸರು : | - |
ಸಾಮಾನ್ಯ ಹೆಸರು : | ಮಡಗಾಸ್ಕರ್ ಆಲ್ಮಂಡ್ |
ಕುಟುಂಬದ ಹೆಸರು : | ಕಾಂಬ್ರೆಟೇಸಿ |
ವೈಜ್ಞಾನಿಕ ಹೆಸರು : | ಟರ್ಮಿನಾಲಿಯಾ ಮಾಂಟಲಿ ಎಚ್.ಪೆರಿಯರ್ |
ಪ್ರಭೇದದ ಪ್ರಕಾರ: | ವಿದೇಶಿ |
ಪ್ರಕೃತಿ ಶಾಸ್ತ್ರ : | ನಿತ್ಯಹರಿದ್ವರ್ಣ |
ಸಂರಕ್ಷಣೆಯ ಸ್ಥಿತಿ : | ತಿಳಿದಿಲ್ಲ |
ಹೂಬಿಡುವ ಅವಧಿ: | |
ಹಣ್ಣಾಗುವ ಅವಧಿ: | |
ಮೂಲ: | ಮಡಗಾಸ್ಕರ್ |
ತೊಗಟೆ ಮತ್ತು ಮರವು (ಅಸ್ಟ್ರಿಂಜೆಂಟ್- ದೇಹದ ಅಂಗಾಂಶಗಳನ್ನು ಕುಗ್ಗಿಸುವ ಅಥವಾ ಸಂಕುಚಿತಗೊಳಿಸುವ ರಾಸಾಯನಿಕ) ಸಂಕೋಚಕವಾಗಿದೆ. ಇವುಗಳನ್ನು ಭೇದಿ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.
ಇದು ಸಣ್ಣ ಮತ್ತು ಮಧ್ಯಮ ಗಾತ್ರದ ನಿತ್ಯಹರಿದ್ವರ್ಣ ಮರವಾಗಿದ್ದು, 10 ರಿಂದ 20 ಮೀ ಎತ್ತರವಿರುತ್ತವೆ. ತೊಗಟೆ ಮಸುಕಾದ ಬೂದು ಬಣ್ಣದಿಂದ ಕೂಡಿದ್ದು ನಯವಾಗಿರುತ್ತದೆ ಅಥವಾ ಕಲೆಗಳಿಂದ (ಮಚ್ಚೆಗಳಿಂದ) ಕೂಡಿರುತ್ತದೆ. ಮರದ ಮೇಲಿನ ಭಾಗವು ಸಮ್ಮಿತೀಯ ಶ್ರೇಣಿಗಳ ಸ್ತರಗಳಿಂದ ಕೂಡಿದೆ. ಎಲೆಗಳು ಸರಳವಾಗಿದ್ದು, ಸಣ್ಣ ಮತ್ತು ದಪ್ಪ ಕಾಂಡಗಳ ಮೇಲೆ 4 ರಿಂದ 9 ಸಮಾನ ಎಲೆಗಳ ವೃತ್ತಾಕಾರದ ವ್ಯವಸ್ಥೆ ಹೊಂದಿರುತ್ತದೆ, ತುದಿಯಲ್ಲಿ ಅಗಲ ಮತ್ತು ತಳಕ್ಕೆ ಮೊನಚಾಗಿ, ರೋಮರಹಿತವಾಗಿರುತ್ತದೆ. ಕಿರಿದಾದ ಬುಡ, ಅಗಲವಾಗಿ ದುಂಡಾದ ತುದಿಯು, ಏರಿಳಿತದಿಂದ ದುಂಡಗಿನ ಹಲ್ಲಿನ ಅಂಚನ್ನು ಹೊಂದಿರುತ್ತವೆ. ಪ್ರತ್ಯೇಕ ಹೂವಿನ ಕಾಂಡಗಳಿಲ್ಲದೆ ಮುಖ್ಯ ಕಾಂಡದಿಂದ ಹುಟ್ಟುವ ಪುಷ್ಪಮಂಜರಿ ಹೊಂದಿದೆ. ಹೂವುಗಳು ಚಿಕ್ಕದಾಗಿದ್ದು, ಹಸಿರು ಬಣ್ಣದಲ್ಲಿರುತ್ತವೆ. ಅಂಡಾಕಾರದ ಚಿಕ್ಕ, ತೆಳುವಾದ ಚರ್ಮವಿರುವ ಹಣ್ಣುಗಳನ್ನು ಹೊಂದಿದ್ದು (ಡ್ರೂಪ್) ಹೊರಭಾಗದಲ್ಲಿ ತಿರುಳು ಮತ್ತು ಮಧ್ಯದಲ್ಲಿ ಬೀಜವಿದೆ. 1.5 ಸೆಂ.ಮೀ ಉದ್ದದ ರೆಕ್ಕೆಗಳಿಲ್ಲದ ಬೀಜಗಳನ್ನು ಹೊಂದಿರುತ್ತದೆ.