ಥೆಸ್ಪೆಸಿಯಾ ಪಾಪುಲ್ನಿಯಾ (ಎಲ್.) ಸೋಲ್. ಎಕ್ಸ್ ಕೊರಿಯಾ

ಕನ್ನಡದ ಹೆಸರು : Adavi bende mara, Huvarasi mara ಅಡವಿ ಬೆಂಡೆ ಮರ, ಹೂವರಸಿ ಮರ
ಸಾಮಾನ್ಯ ಹೆಸರು : ಪೋರ್ಟಿಯಾ ಟ್ರೀ, ಪೆಸಿಫಿಕ್ ರೋಸ್ ವುಡ್, ಇಂಡಿಯನ್ ಟುಲಿಪ್ ಟ್ರೀ
ಕುಟುಂಬದ ಹೆಸರು : ಮಾಲ್ವೇಸೀ
ವೈಜ್ಞಾನಿಕ ಹೆಸರು : ಥೆಸ್ಪೆಸಿಯಾ ಪಾಪುಲ್ನಿಯಾ (ಎಲ್.) ಸೋಲ್. ಎಕ್ಸ್ ಕೊರಿಯಾ
ಪ್ರಭೇದದ ಪ್ರಕಾರ: ವಿದೇಶಿ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ: ವರ್ಷಪೂರ್ತಿ
ಹಣ್ಣಾಗುವ ಅವಧಿ: ವರ್ಷಪೂರ್ತಿ
ಮೂಲ: ಉಷ್ಣವಲಯದ ಆಫ್ರಿಕಾ ಮತ್ತು ಏಷ್ಯಾ

ಉಪಯೋಗಗಳು

ಸರ್ಪಸುತ್ತಿನ (ಹರ್ಪಿಸ್) ರೋಗದ ಚಿಕಿತ್ಸೆಗಾಗಿ ಹಣ್ಣಿನ ರಸವನ್ನು ಬಳಸಲಾಗುತ್ತದೆ. ಪುಡಿಮಾಡಿದ ಹಣ್ಣನ್ನು ಮೂತ್ರನಾಳದ ತೊಂದರೆಗಳು ಮತ್ತು ಊದಿಕೊಂಡ ಕಿಬ್ಬೊಟ್ಟೆಯ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಊದಿಕೊಂಡ ವೃಷಣಗಳಿಗೆ ಹಣ್ಣಿನ ಸಾರವನ್ನು ಹಚ್ಚಲಾಗುತ್ತದೆ. ಎಲೆಗಳ ಕಷಾಯವನ್ನು ಕೆಮ್ಮು, ಶೀತಜ್ವರ , ತಲೆನೋವು ಮತ್ತು ಮರುಕಳಿಸುವ ರೋಗಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಕಾಂಡವನ್ನು ಸ್ತನ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.

ವಿವರಣೆ

ನಿತ್ಯಹರಿದ್ವರ್ಣ ಅಥವಾ ಒಣ ಪತನಶೀಲ ಮರವಾಗಿದ್ದು,15 ಮೀ ಎತ್ತರ ಬೆಳೆಯುತ್ತವೆ. ತೊಗಟೆಯು ಗಾಢ ಕಂದು ಬಣ್ಣವನ್ನು ಹೊಂದಿರುತ್ತದೆ. ಮರದ ಹೊರ ಪದರದ ಗುರುತು (ಬ್ಲೇಜ್) ಹಳದಿ ಮಿಶ್ರಿತ ಗುಲಾಬಿ ಬಣ್ಣದಲ್ಲಿರುತ್ತದೆ; ಕಿರುಕೊಂಬೆಗಳು ದಟ್ಟವಾಗಿ ಸೂಕ್ಷ್ಮ ಹೊಳಪುಳ್ಳ (ಸ್ಕೇಲ್) ಪೊರೆಯಿಂದ ಮುಚ್ಚಿರುತ್ತದೆ. ಎಲೆಗಳು ಸರಳ, ಪರ್ಯಾಯ, ವೃತ್ತಾಕಾರ ಅಥವಾ ಅಂಡಾಕಾರ, ಚರ್ಮದ ವಿನ್ಯಾಸದಿಂದ ಕೂಡಿದ್ದು ಎಲೆಯ ಮೇಲೆ ಕಾಂಡಕ್ಕೆ ಕೆಳಗಿನ ಮೇಲ್ಮೈಯಿಂದ ಜೋಡಿಸಲಾದ ಪೊರೆಗಳಿಂದ ಕೂಡಿದೆ; ಅಡಿಯಲ್ಲಿ ಹೊಳಪುಳ್ಳ ಅಥವಾ ನಕ್ಷತ್ರಾಕಾರದ ದಟ್ಟವಾದ ಕೂದಲುಗಳನ್ನು ಹೊಂದಿದೆ. ಎಲೆಯ ತಳವು ಹೃದಯದ ಆಕಾರ ಅಥವಾ ಮೊಟಕುಗೊಂಡಿದೆ. ಎಲೆಯ ತುದಿ ಚೂಪಾದ ಅಥವಾ ಉದ್ದವಾದ ಬಿಂದುವಿಗೆ ಮೊನಚಾಗಿದ್ದು, ಸಂಪೂರ್ಣ ಅಥವಾ ಹಲ್ಲಿನ ರೀತಿಯ ಅಂಚನ್ನು ಹೊಂದಿರುತ್ತವೆ. ಇವು ಒಂಟಿಯಾದ ಅಥವಾ ಕೊಂಬೆಯ ತುದಿಯಲ್ಲಿ ಮತ್ತು ಸಂಪೂರ್ಣ-ಅಭಿವೃದ್ಧಿ ಹೊಂದಿದ ಎಲೆಯ ಅಕ್ಷದಲ್ಲಿ ಹುಟ್ಟುವ ಹೂಗೊಂಚಲನ್ನು ಹೊಂದಿದೆ. ಹಳದಿ ಬಣ್ಣದ ದ್ವಿಲಿಂಗಿ ಹೂವುಗಳನ್ನು ಹೊಂದಿದ್ದು, ಆಕರ್ಷಕವಾಗಿದೆ. ಇವು ಗೋಳಾಕಾರದ, (ಕ್ಯಾಪ್ಸುಲ್ಗಳು) ಒಣ, ಸರಳ, ತಿರುಳನ್ನು ಹೊಂದಿರುವ ಹಣ್ಣನ್ನು ಹೊಂದಿದ್ದು ಬೀಜವನ್ನು ಬಿಡುಗಡೆ ಮಾಡಲು ಬಾಯಿ ತೆರೆದುಕೊಳ್ಳುವುದಿಲ್ಲ. ಹಣ್ಣುಗಳ ಸುತ್ತಲೂ ಚಿಪ್ಪನ್ನು ಹೊಂದಿದ್ದು, ಹೊಳೆಯುತ್ತವೆ. ಹಿಂಭಾಗದಲ್ಲಿ ರೇಖೆಗಳನ್ನು ಹೊಂದಿರುವ ಅನೇಕ ಅಂಡಾಕಾರದ ಬೀಜಗಳನ್ನು ಹೊಂದಿದ್ದು ಮೃದುತುಪ್ಪಳದಿಂದ ಕೂಡಿರುತ್ತವೆ.