ಟೂನಾ ಸಿಲಿಯಾಟಾ ಎಂ. ರೋಮ್.

ಕನ್ನಡದ ಹೆಸರು : -
ಸಾಮಾನ್ಯ ಹೆಸರು : ರೆಡ್ ಸೀಡರ್
ಕುಟುಂಬದ ಹೆಸರು : ಮೆಲಿಯೇಸಿ
ವೈಜ್ಞಾನಿಕ ಹೆಸರು : ಟೂನಾ ಸಿಲಿಯಾಟಾ ಎಂ. ರೋಮ್.
ಪ್ರಭೇದದ ಪ್ರಕಾರ: ವಿದೇಶಿ
ಪ್ರಕೃತಿ ಶಾಸ್ತ್ರ : ಪತನಶೀಲ
ಸಂರಕ್ಷಣೆಯ ಸ್ಥಿತಿ : ಕಡಿಮೆ ಕಾಳಜಿ
ಹೂಬಿಡುವ ಅವಧಿ: ಫೆಬ್ರವರಿ - ಮೇ
ಹಣ್ಣಾಗುವ ಅವಧಿ: ಸೆಪ್ಟೆಂಬರ್ - ನವೆಂಬರ್
ಮೂಲ: ಆಸ್ಟ್ರೇಲಿಯಾ, ಪಪುವಾ ನ್ಯೂ ಗಿನಿ

ಉಪಯೋಗಗಳು

ತೊಗಟೆಯು ಶಕ್ತಿಯುತವಾದ ಸಂಕೋಚಕ (ಆಸ್ಟ್ರೇನ್ ಜೇಂಟ್ - ದೇಹದ ಅಂಗಾಂಶಗಳನ್ನು ಕುಗ್ಗಿಸುವ ಅಥವಾ ಸಂಕುಚಿತಗೊಳಿಸುವ ರಾಸಾಯನಿಕ) , ಜ್ವರನಿವಾರಕ, ಬಲವರ್ಧಕ (ಟಾನಿಕ್) ಮತ್ತು ಪ್ರತಿಜೀವಕ (ಆಂಟಿಪೀರಿಯಾಡಿಕ್) ಆಗಿದೆ. ಇದನ್ನು ದೀರ್ಘಕಾಲದ ಭೇದಿ ಮತ್ತು ಗಾಯಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಇದನ್ನು ದೀರ್ಘಕಾಲದ ಭೇದಿ ಮತ್ತು ಗಾಯಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ತೊಗಟೆಯಿಂದ ಪಡೆದ ರಾಳದ ಗೊಂದನ್ನು (ಗಮ್) ಹುಣ್ಣುಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಹೂವುಗಳು ಎಮ್ಮೆನಾಗೋಗ್ (ಸೊಂಟದ ಪ್ರದೇಶ ಮತ್ತು ಗರ್ಭಾಶಯದಲ್ಲಿ ರಕ್ತದ ಹರಿವನ್ನು ಉತ್ತೇಜಿಸುವ ಗಿಡಮೂಲಿಕೆಗಳಾಗಿವೆ) ಆಗಿರುತ್ತವೆ.

ವಿವರಣೆ

30 ಮೀ ಎತ್ತರದವರೆಗೆ ಬೆಳೆಯುವ ಅರೆ ಪತನಶೀಲ ಮರವಾಗಿದ್ದು ಒರಟಾದ ಕೆಂಪು ಮಿಶ್ರಿತ ಕಂದು ಬಣ್ಣದ ತೊಗಟೆಯನ್ನು ಹೊಂದಿರುತ್ತದೆ. ತೊಗಟೆಯು ಒರಟಾಗಿದ್ದು ದೊಡ್ಡ ಪದರಗಳಲ್ಲಿ ಸಿಪ್ಪೆ ಸುಲಿಯುತ್ತದೆ. ತೊಗಟೆಯ ನಾರಿನಂತಹ ಒಳ ಒಳಪದರವನ್ನು ಹೊಂದಿದೆ. ಮರದ ಮೇಲಿನ ಗುರುತುಗಳು (ಬ್ಲೇಜ್) ಬಿಳಿ ಗೆರೆಯೊಂದಿಗೆ ಗುಲಾಬಿ ಕೆಂಪು ಬಣ್ಣದಿಂದ ಕೂಡಿದ್ದು ಕಟುವಾದ ವಾಸನೆಯನ್ನು ಹೊಂದಿರುತ್ತವೆ. ಇವುಗಳು (ಪೆರಿಪಿನೇಟ್) ಕಡಿಮೆ ಅಂತರದ ಕಾಂಡಗಳ ಮೇಲೆ ಸಮಾನ ಸಂಖ್ಯೆಯ ವಿರುದ್ಧ ಚಿಗುರೆಲೆಗಳನ್ನು ಹೊಂದಿರುತ್ತವೆ, ಕೊಂಬೆಗಳ ತುದಿಗಳಲ್ಲಿ ಒಂದರ ಮೇಲೊಂದರಂತೆ ಗೊಂಚಲಾಗಿರುತ್ತವೆ; ಚಿಗುರೆಲೆಗಳು 10 ರಿಂದ 14 ಜೋಡಿಗಳಾಗಿದ್ದು ವಿರುದ್ಧ ಅಥವಾ ಉಪವಿಮುಖ,ಅಂಡಾಕಾರ, ಅಂಡಾಕಾರ-ಈಟಿಯ ತಲೆ ಅಥವಾ ಆಯತಾಕಾರದಿಂದ-ಈಟಿಯ ತಲೆ ರೀತಿಯಿದ್ದು, ಕಾಗದದ ಹಾಗೆ ತೆಳ್ಳಗಿರುತ್ತದೆ. ಎಲೆಗಳು ಮೇಲೆ ಹೊಳಪು, ಕೆಳಗೆ ಮಸುಕು, ಬುಡವು ಬಾಗಿ, ತುದಿ ಕಿರಿದಾಗಿ ಚೂಪಾಗಿದ್ದು, ಸಂಪೂರ್ಣ ಅಥವಾ ಗರಗಸದ ಹಲ್ಲನ್ನು ಹೋಲುವ ಅಂಚನ್ನು ಹೊಂದಿರುತ್ತದೆ. ಪುಷ್ಪಮಂಜರಿ ಅಕ್ಷಾಕಂಕುಳಿನಲ್ಲಿ ಅಥವಾ ರೆಂಬೆಗಳ ತುದಿಯಲ್ಲಿ ಹೆಚ್ಚು ಕವಲೊಡೆದ ಹೂವಿನಗೊಂಚಲನ್ನು ಹೊಂದಿರುತ್ತದೆ. ಹೂಗಳು ದ್ವಿಲಿಂಗಿಯಾಗಿದ್ದು, ಬಿಳಿ ಬಣ್ಣದಲ್ಲಿರುತ್ತವೆ. ಇವು (ಕ್ಯಾಪ್ಸುಲ್) ಅತ್ಯಂತ ಸಾಮಾನ್ಯ ಮತ್ತು ಸರಳವಾದ ಹಣ್ಣನ್ನು ಹೊಂದಿದ್ದು, ಇದು ಒಣಗಿದಾಗ ಬೀಜಗಳನ್ನು ಬಿಡುಗಡೆ ಮಾಡಲು ತೆರೆದುಕೊಳ್ಳುವ, 5 ಕವಾಟವನ್ನು ಹೊಂದಿರುತ್ತದೆ. ಇವುಗಳು ಎರಡೂ ತುದಿಗಳಲ್ಲಿ ರೆಕ್ಕೆಗಳನ್ನು ಹೊಂದಿರುವ ಅನೇಕ ತೆಳುವಾದ ಉದ್ದವಾದ ಬೀಜಗಳನ್ನು ಹೊಂದಿರುತ್ತವೆ.