ಟ್ರಿಪ್ಲಾರಿಸ್ ಟ್ರಿಪ್ಲಾರಿಸ್ ವೀಗೆಲ್ಟಿಯಾನಾ (ಆರ್ ಸಿ ಎಚ್ ಬಿ.) ಕುಂಟ್ಜೆ ವೀಗೆಲ್ಟಿಯಾನಾ

ಕನ್ನಡದ ಹೆಸರು : -
ಸಾಮಾನ್ಯ ಹೆಸರು : ಆಂಟ್ ಟ್ರೀ
ಕುಟುಂಬದ ಹೆಸರು : ಪಾಲಿಗೊನೇಸಿ
ವೈಜ್ಞಾನಿಕ ಹೆಸರು : ಟ್ರಿಪ್ಲಾರಿಸ್ ಟ್ರಿಪ್ಲಾರಿಸ್ ವೀಗೆಲ್ಟಿಯಾನಾ (ಆರ್ ಸಿ ಎಚ್ ಬಿ.) ಕುಂಟ್ಜೆ ವೀಗೆಲ್ಟಿಯಾನಾ
ಪ್ರಭೇದದ ಪ್ರಕಾರ: ವಿದೇಶಿ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ:
ಹಣ್ಣಾಗುವ ಅವಧಿ:
ಮೂಲ: ದಕ್ಷಿಣ ಅಮೇರಿಕ

ಉಪಯೋಗಗಳು

ತೊಗಟೆಯ ಕಷಾಯವನ್ನು ಭೇದಿ , ಅತಿಸಾರ ಮತ್ತು ಮೂಲವ್ಯಾಧಿ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಇದನ್ನು ಪೀಠೋಪಕರಣ ಭಾಗಗಳು, ಪೆಟ್ಟಿಗೆಗಳು ಮತ್ತು ಸರಕುಗಳನ್ನು ಸಾಗಿಸಲು ಬಳಸುವ ಹಲಗೆಯ ಮರದ ಕೇಸ್, ಮನೆಯ ಒಳಗೆ ಸಂಬಂಧಿಸಿದ ನಿರ್ಮಾಣ, ಮೆಟ್ಟಿಲುಗಳು, ಬಾಗಿಲುಗಳು, ಕಿಟಕಿಗಳು, ನಾರು ಹಲಗೆ (ಫೈಬರ್ಬೋರ್ಡ್) ಮತ್ತು ಕಣಹಲಗೆ (ಪಾರ್ಟಿಕಲ್ ಬೋರ್ಡ್) ಮಾಡಲು ಬಳಸಲಾಗುತ್ತದೆ.

ವಿವರಣೆ

ಇದು 5 ಮೀಟರ್ ಅಥವಾ ಅದಕ್ಕಿಂತ ಹೆಚ್ಚಿನ ಎತ್ತರದವರೆಗೆ ಬೆಳೆಯುವ ಮರವಾಗಿದೆ. ಎಲೆಗಳು ಬಹಳ ಚಿಕ್ಕ ಕಾಂಡ, ತೀಕ್ಷ್ಣವಾದ ತುದಿ, ಬೆಣೆಯಾಕಾರದ ಬುಡ, ನಯವಾದ ಅಂಚು, ಉದ್ದದ ರೇಖೆಯ ಜೊತೆಯಲ್ಲಿ ಎಲೆಯ ಮಧ್ಯನಾಳದಿಂದ ಹುಟ್ಟಿಕೊಂಡ ಮತ್ತು ಎಲೆಯ ಅಂಚಿನ ಕಡೆಗೆ ಸಾಗುವ ಹಲವಾರು ಪ್ರಮುಖ ದ್ವಿತೀಯಕ ನಾಳಗಳನ್ನು ಹೊಂದಿದೆ. ಕಾಂಡಗಳನ್ನು ಹೊಂದಿಲ್ಲದ ಮತ್ತು ನೇರವಾಗಿ ಕೇಂದ್ರ ಅಕ್ಷಕ್ಕೆ ಜೋಡಿಸಲ್ಪಟ ಹೂವುಗಳು 6 ರಿಂದ 10 ಸೆಂ.ಮೀ ಉದ್ದ, ಅಂಡಾಕಾರದಿಂದ ಅಂಡಾಕಾರ-ಈಟಿ ತಲೆ ಆಕಾರದಲ್ಲಿದೆ. ತೊಗಟೆ ನಯವಾದ ಮತ್ತು ಸ್ವಲ್ಪ ಗಟ್ಟಿಯಾದ ಕೂದಲನ್ನು ಹೊಂದಿದೆ. ಪಿಸ್ಟಿಲೇಟ್ (ಹೂವಿನ ಸ್ತ್ರೀ ಅಂಗಗಳು ಮತ್ತು ಅಂಡಾಶಯವನ್ನು ಒಳಗೊಂಡಿರುತ್ತದೆ ಆದರೆ ಕೇಸರ ಇರುವುದಿಲ್ಲ) ಪುಷ್ಪದಳವು ಹೂಬಿಡುವ ನಂತರ ದೊಡ್ಡದಾಗಿ ಬೆಳೆಯುತ್ತದೆ ಮತ್ತು ಹಣ್ಣುಗಳನ್ನು ಸುತ್ತುವರಿದಿದೆ. ಮೂರು ಸೀಪಲ್ಸ್ ಗಳು ((ಹೂವಿನ ಹೊರ ಭಾಗಗಳು (ಹೆಚ್ಚಾಗಿ ಹಸಿರು ಮತ್ತು ಎಲೆಯಂತಹವು) ಅಭಿವೃದ್ಧಿ ಹೊಂದುತ್ತಿರುವ ಮೊಗ್ಗುವನ್ನು ಸುತ್ತುವರಿಯುತ್ತವೆ)) ಹೆಚ್ಚು ವಿಸ್ತರಿಸಿದೆ , 2.8 ರಿಂದ 3.2 ಸೆಂ.ಮೀ ಉದ್ದ, 4-5 ಮಿ.ಮೀ ಅಗಲ,ಹಾಗೂ ಕೆಂಪು ನೇರಳೆ ಬಣ್ಣವನ್ನು ಹೊಂದಿದ್ದು ಆಕರ್ಷಕವಾಗಿದೆ.