ವಚೆಲಿಯಾ ಲ್ಯುಕೋಫ್ಲೋಯಾ (ರಾಕ್ಸ್‌ಬಿ.) ಮಾಸ್ಲಿನ್, ಸೀಗ್ಲರ್ & ಎಬಿಂಗರ್

ಕನ್ನಡದ ಹೆಸರು : Bili jaari mara, Naayi bela ಬಿಳಿ ಜಾರಿ ಮಾರ, ನಾಯಿಬೇಲ
ಸಾಮಾನ್ಯ ಹೆಸರು : ವೈಟ್ ಬಾರ್ಕ್ ಅಕೇಶಿಯ
ಕುಟುಂಬದ ಹೆಸರು : ಫ್ಯಾಬೇಸಿ
ವೈಜ್ಞಾನಿಕ ಹೆಸರು : ವಚೆಲಿಯಾ ಲ್ಯುಕೋಫ್ಲೋಯಾ (ರಾಕ್ಸ್‌ಬಿ.) ಮಾಸ್ಲಿನ್, ಸೀಗ್ಲರ್ & ಎಬಿಂಗರ್
ಪ್ರಭೇದದ ಪ್ರಕಾರ: ದೇಶೀಯ
ಪ್ರಕೃತಿ ಶಾಸ್ತ್ರ : ಪತನಶೀಲ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ: ಜುಲೈ - ನವೆಂಬರ್
ಹಣ್ಣಾಗುವ ಅವಧಿ: ಏಪ್ರಿಲ್ - ಜೂನ್
ಮೂಲ: ದಕ್ಷಿಣ ಮತ್ತು ಆಗ್ನೇಯ ಏಷ್ಯಾ

ಉಪಯೋಗಗಳು

ತೊಗಟೆಯ ಸಾರಗಳನ್ನು ಪಾಕಿಸ್ತಾನಿ ಸಾಂಪ್ರದಾಯಿಕ ಔಷಧದಲ್ಲಿ "ಅಂಗಾಂಶಗಳನ್ನು ಕುಗ್ಗಿಸುವ ಅಥವಾ ಸಂಕುಚಿತಗೊಳಿಸುವ ರಾಸಾಯನಿಕ" ತಯಾರಿಕೆಗೆ , ಸೋಂಕುಗಳ ತಡೆಗಟ್ಟುವಿಕೆ, ಆಂಥೆಲ್ಮಿಂಟಿಕ್ (ಪರಾವಲಂಬಿ ಹುಳುಗಳೊಂದಿಗೆ ಪ್ರಾಣಿಗಳ ಸೋಂಕಿಗೆ ಚಿಕಿತ್ಸೆ ನೀಡಲು ಬಳಸುವ ಔಷಧ), ಗಾಯಗಳನ್ನು ಗುಣಪಡಿಸುವಲ್ಲಿ, ಉರಿಯೂತವನ್ನು ಕಡಿಮೆಮಾಡುವಲ್ಲಿ, ಕೆಮ್ಮುಗಳಿಗೆ ಚಿಕಿತ್ಸೆ ನೀಡುವಲ್ಲಿ, ಜ್ವರವನ್ನು ಕಡಿಮೆಮಾಡುವಲ್ಲಿ, ಹಾವಿನ ಕಡಿತಕ್ಕೆ ಪ್ರತಿವಿಷವಾಗಿ, ಶ್ವಾಸನಾಳಗಳ ಒಳಪೊರೆಯ ಉರಿಯೂತಕ್ಕೆ ಚಿಕಿತ್ಸೆ ನೀಡುವಲ್ಲಿ, ಕೆಮ್ಮು, ವಾಂತಿ, ಗಾಯ, ಹುಣ್ಣು, ಅತಿಸಾರ, ಭೇದಿ ಮತ್ತು ಚರ್ಮಕ್ಕೆ ಸಂಬಂಧಿಸಿದ ರೋಗಕ್ಕೆ ಚಿಕಿತ್ಸೆ ನೀಡುವಲ್ಲಿ ಬಳಸಲಾಗುತ್ತದೆ.

ವಿವರಣೆ

20 ಮೀ ಎತ್ತರದವರೆಗೆ ಬೆಳೆಯುವ ಪತನಶೀಲ ಮರಗಳಾಗಿವೆ; ತೊಗಟೆ ಹಳದಿಯಿಂದ ಹಳದಿ ಮಿಶ್ರಿತ ಕಂಡು ಬಣ್ಣದಲ್ಲಿರುತ್ತದೆ, ಒರಟಾಗಿರುತ್ತದೆ ಮತ್ತು ಕಾಂಡದಿಂದ ಸಿಪ್ಪೆ ಸುಲಿಯುತ್ತದೆ. ಮರದ ಮೇಲಿನ ಗುರುತು ತೆಳುವಾದ ಕೆಂಪು ಬಣ್ಣದಲ್ಲಿರುತ್ತವೆ; ಕಿರುಕೊಂಬೆಗಳು ನಯವಾದ ಹಳದಿ ಮಿಶ್ರಿತ ಬಣ್ಣದಲ್ಲಿದ್ದು ರಕ್ಷಣಾತ್ಮಕ (ಸ್ಪೈನ್) ರಚನೆಯನ್ನು ಹೊಂದಿವೆ. ಎಲೆಗಳು ದ್ವಿಮುಖ (ಚಿಗುರೆಲೆಗಳನ್ನು ಚಿಕ್ಕ ಚಿಗುರೆಲೆಗಳಾಗಿ ವಿಂಗಡಿಸುತ್ತದೆ), ಪರ್ಯಾಯ ವಾಗಿದ್ದು, ಎಲೆಯ ಪ್ರಾಥಮಿಕ ವಿಭಾಗದಲ್ಲಿ5 ರಿಂದ 15 ಜೋಡಿ ಚಿಗುರೆಲೆಯನ್ನು ಹೊಂದಿವೆ. ಇವು ವಿರುದ್ಧವಾಗಿ ಜೋಡಿರುವ 30 ರಿಂದ 54 ಚಿಗುರೆಲೆಗಳನ್ನು ಹೊಂದಿದ್ದು, ತನ್ನದೇ ಆದ ಕಾಂಡವನ್ನು ಹೊಂದಿರದ ಆದರೆ ಸಸ್ಯದ ಮುಖ್ಯ ಕಾಂಡಕ್ಕೆ ನೇರವಾಗಿ ಜೋಡಿಸಲಾದ ನೇರವಾಗಿರುವ ಎಲೆಗಳನ್ನು ಹೊಂದಿವೆ. ಅವು ಮೇಲ್ಭಾಗದಲ್ಲಿ ರೋಮರಹಿತವಾಗಿರುತ್ತವೆ ಮತ್ತು ಕೆಳಭಾಗದಲ್ಲಿ ಸಣ್ಣ ಮೃದುವಾದ ಕೂದಲನ್ನು ಹೊಂದಿರುತ್ತವೆ ಹಾಗು ಕಾಗದದ ವಿನ್ಯಾಸವನ್ನು ಹೋಲುತ್ತದೆ. ಇವು ಬಾಗಿದ ಬುಡವನ್ನು ಹೊಂದಿದ್ದು ತುದಿ ಮೊಂಡಾಗಿರುತ್ತದೆ, ಎಲೆಗಳ ಅಂಚುಗಳು ಗರಗಸದಂತೆ ಹಲ್ಲುಗಳಂತೆ ಇರುತ್ತವೆ. ಹೂಗೊಂಚಲು ರೆಂಬೆಗಳ ತುದಿಯಲ್ಲಿ ಸಡಿಲವಾಗಿ ಕವಲೊಡೆಯುವ ಹೂವುಗಳ ಸಮೂಹವನ್ನು ಹೊಂದಿದೆ. ಹೂಗಳು ಹಳದಿ ಅಥವಾ ಹಳದಿ ಮಿಶ್ರಿತ ಬಿಳಿ ಬಣ್ಣದಲ್ಲಿರುತ್ತದೆ. ಬಟಾಣಿ ಅಥವಾ ಬೀನ್ಸ್‌ನಂತಹ ಹಣ್ಣುಗಳನ್ನು ಹೊಂದಿದ್ದು ಸಮತಟ್ಟಾಗಿರುತ್ತದೆ. ಇವು ಪಟ್ಟಿಯ ಆಕಾರ, ನೇರ ಅಥವಾ ಕೆಲವೊಮ್ಮೆ ವಕ್ರ, ಹಣ್ಣುಗಳ ಉದ್ದಕ್ಕೂ ಬೀಜ, ತೆಳುವಾದ ಪದರ, ಹಣ್ಣಿನ ತುದಿಯಲ್ಲಿ ದುಂಡಾಗಿ ಇಲ್ಲವೇ ಮೊನಚಾಗಿ, ಹಾಗೂ ಸುತ್ತಲೂ ಸೂಕ್ಷ್ಮ ಕಂದು ಬಣ್ಣದ ಕೂದಲನ್ನು ಹೊಂದಿದ್ದು, ಕಾಂಡಕ್ಕೆ ನೇರವಾಗಿ ಜೋಡಿಸಲಾದ ಹಣ್ಣುನ್ನು ಹೊಂದಿದೆ. ಇದು ಬೀಜವನ್ನು ಹೊರಬಿಡಲು ಹಣ್ಣಿನ ಉದ್ದಕ್ಕೂ ವಿಭಜನೆಗೊಳ್ಳುತ್ತದೆ. ಬೀಜಗಳು ಅಂಡಾಕಾರದಲ್ಲಿರುತ್ತವೆ.