ಕನ್ನಡದ ಹೆಸರು : | Myrole, Nevaladi, Navuladi ಮೈರೊಳೆ , ನವಿಲಾಡಿ, ನವುಲಾದಿ |
ಸಾಮಾನ್ಯ ಹೆಸರು : | ಪೀಕಾಕ್ ಚೆಸ್ಟ್ ಟ್ರೀ |
ಕುಟುಂಬದ ಹೆಸರು : | ಲ್ಯಾಮಿಯಾಸಿ |
ವೈಜ್ಞಾನಿಕ ಹೆಸರು : | ವಿಟೆಕ್ಸ್ ಅಲ್ಟಿಸಿಮಾ ಎಲ್.ಎಫ್. |
ಪ್ರಭೇದದ ಪ್ರಕಾರ: | ವಿದೇಶಿ |
ಪ್ರಕೃತಿ ಶಾಸ್ತ್ರ : | ಪತನಶೀಲ |
ಸಂರಕ್ಷಣೆಯ ಸ್ಥಿತಿ : | ಕಡಿಮೆ ಕಾಳಜಿ |
ಹೂಬಿಡುವ ಅವಧಿ: | ಏಪ್ರಿಲ್ - ಮೇ |
ಹಣ್ಣಾಗುವ ಅವಧಿ: | ಜುಲೈ - ಆಗಸ್ಟ್ |
ಮೂಲ: | ಬಾಂಗ್ಲಾದೇಶ, ಭಾರತ, ಮಯನ್ಮಾರ್ |
ತೊಗಟೆಯನ್ನು ಸಂಧಿವಾತದ ಊತಗಳಿಗೆ ಶಾಖ ನೀಡಲು ಬಳಸಲಾಗುತ್ತದೆ. ಎಲೆಗಳು ಮತ್ತು ಬೇರುಗಳನ್ನು ಆಯುರ್ವೇದ ಔಷಧದಲ್ಲಿ ಬಳಸಲಾಗುತ್ತದೆ. ಸಸ್ಯವು ಕಫ, ವಾತವನ್ನು ಕಡಿಮೆಮಾಡುತ್ತದೆ ಎಂದು ನಂಬಲಾಗಿದೆ. ಉರಿಯೂತ, ಗಾಯಗಳು, ಹುಣ್ಣುಗಳು, ಅಲರ್ಜಿಗಳು, ಎಸ್ಜಿಮಾ (ದೀರ್ಘಕಾಲದ ಚರ್ಮದ ತೊರಿಕೆ, ಉರಿ ರೋಗ) , ಪ್ರುರಿಟಸ್ (ತುರಿಕೆ ಚರ್ಮ) , ಹುಳುಗಳ ಸೋಂಕು , ಮೂತ್ರದ ರೋಗಗಳು, ಸ್ಟೊಮಾಟಿಟಿಸ್ (ಬಾಯಿ ಹುಣ್ಣು) , ಸೊರಗುವಿಕೆ ಮತ್ತು ಹೆರಿಗೆಯ ನಂತರದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಇದನ್ನು ಬಳಸಲಾಗುತ್ತದೆ.
ಇದು 30 ಮೀಟರ್ ಎತ್ತರದವರೆಗೆ ಬೆಳೆಯುವ ಪತನಶೀಲ ಮರವಾಗಿದೆ. ತೊಗಟೆ ಬೂದು-ಹಳದಿ ಬಣ್ಣದಿಂದ ಕೂಡಿದ್ದು ಚಿಪ್ಪುಗಳನ್ನು ಹೊಂದಿರುತ್ತದೆ; ಮರದ ಕಾಂಡದ ಗುರುತುಗಳು ಹಳದಿ ಬಣ್ಣದಲ್ಲಿರುತ್ತವೆ; ಕಿರುಕೊಂಬೆಗಳು ಚತುರ್ಭುಜ ಆಕಾರವನ್ನು ಹೊಂದಿದ್ದು, ಲೆಂಟಿಸೆಲ್ (ಕೋಶಗಳ ನಡುವಿನ ವಿಶಾಲ ಅಂತರಕೋಶದ ಸ್ಥಳಗಳಿಂದ ಮಾಡಲ್ಪಟ್ಟ ಒಂದು ರಂಧ್ರದ ಅಂಗಾಂಶ) ಹಾಗೂ ದಟ್ಟವಾದ ಉಣ್ಣೆಯ ಕೂದಲಿನಿಂದ ಮುಚ್ಚಿರುತ್ತದೆ. ಎಲೆಗಳು ಒಂದಕ್ಕೊಂದು ಸಂಯುಕ್ತವಾಗಿ ಕೂಡಿದ್ದು, ಮೂರು ದಳವನ್ನು ಹೊಂದಿರುತ್ತದೆ. ವಿರುದ್ಧ ಮಾದರಿಯ ಎಲೆಗಳಾಗಿವೆ, ತೆಳ್ಳಗಿನ ಕಡಿಮೆ ಅಂತರದ ಹೂವಿನ ಕಾಂಡಗಳನ್ನು ಹೊಂದಿದ್ದು, ಮೃದುವಾದ ತುಪ್ಪಳದಿಂದ ಮುಚ್ಚಿರುತ್ತವೆ, ಹಾಗೂ ಎಳೆಯ ಎಲೆಗಳಲ್ಲಿ ರೆಕ್ಕೆಗಳನ್ನು ಹೊಂದಿದ್ದು, ರೆಕ್ಕೆಗಳು ಬುಡದಲ್ಲಿ ಎರಡು ಹಾಲೆಯನ್ನು ಹೊಂದಿರುತ್ತವೆ; ಎಲೆಗಳನ್ನು ನೇರವಾಗಿ ಕಾಂಡಕ್ಕೆ ಸಂಪರ್ಕಿಸುವ ಚಿಗುರೆಲೆಗಳನ್ನು ಹೊಂದಿದ್ದು, ಎಲೆಯು ಈಟಿಯ ತಲೆಯಂತೆ ಮೊನಚಾಗಿರುತ್ತದೆ, ಅದು ಅಂಡಾಕಾರ-ಈಟಿ ತಲೆ ರೀತಿ ಇರಬಹುದು ಅಥವಾ ಚಪ್ಪಟೆಯಾಗಿರಬಹುದು. ಮೇಲ್ಭಾಗದಲ್ಲಿ ರೋಮರಹಿತವಾಗಿರುತ್ತದೆ ಮತ್ತು ಕೆಳಗಿರುವ ಎಳೆಗಳ ನಾಳಗಳ ಉದ್ದಕ್ಕೂ ಸಣ್ಣ ಮೃದುವಾದ ಕೂದಲುಗಳು ಅಥವಾ ಹೊಳಪಿನಿಂದ ಕೂಡಿದ್ದು ಕಾಗದದ ರೀತಿಯ ವಿನ್ಯಾಸವನ್ನು ಹೊಂದಿರುತ್ತವೆ. ಬುಡವು ಬೆಣೆಯಾಕಾರ ಅಥವಾ ಚೂಪಾಗಿರುತ್ತದೆ. ತುದಿ ಕಿರಿದಾಗಿ ಚೂಪಾಗಿರುತ್ತದೆ ಹಾಗೂ ಸಂಪೂರ್ಣ ಅಂಚನ್ನು ಹೊಂದಿರುತ್ತದೆ. ಹೆಚ್ಚು ಕವಲೊಡೆದ ಹೂಗೊಂಚಲನ್ನು ಹೊಂದಿದೆ, ಹೂವುಗಳು ದ್ವಿಲಿಂಗಿಯಾಗಿದ್ದು ಬಿಳಿ, ಸ್ವಲ್ಪ ನೀಲಿ ಬಣ್ಣದಿಂದ ಕೂಡಿರುತ್ತದೆ. ತೆಳುವಾದ ಚರ್ಮವನ್ನು ಹೊಂದಿರುವ ತಿರುಳಿರುವ (ಡ್ರೂಪ್ಸ್) ಚಿಕ್ಕ ಹಣ್ಣುಗಳನ್ನು ಹೊಂದಿದ್ದು ನೀಲಿ ಬಣ್ಣದಲ್ಲಿರುತ್ತವೆ. ಹಣ್ಣುಗಳು ಗೋಳಾಕಾರವಾಗಿದ್ದು ನಾಣುಪಾಗಿರತ್ತವೆ ಮತ್ತು ಮೇಲ್ಮೈ ರೋಮರಹಿತವಾಗಿರುತ್ತದೆ. ಹಣ್ಣುಗಳು ವಿಸ್ತರಿಸಿದ ಪುಷ್ಪಪಾತ್ರೆಯಿಂದ ಕೂಡಿಕೊಂಡಿರುತ್ತದೆ. ಇವು ಅಂಡಾಕಾರದ 4 ಬೀಜಗಳು ಹೊಂದಿರುತ್ತವೆ.