ವಿಟೆಕ್ಸ್ ನೆಗುಂಡೋ ಎಲ್.

ಕನ್ನಡದ ಹೆಸರು : Indrani, Kari lakki, Lakki gida ಇನ್ದ್ರಾಣಿ,ಕರಿ ಲಕ್ಕಿ, ಲಕ್ಕಿ ಗಿಡ
ಸಾಮಾನ್ಯ ಹೆಸರು : ಛೇಸ್ಟ್ ಟ್ರೀ
ಕುಟುಂಬದ ಹೆಸರು : ಲ್ಯಾಮಿಯಾಸಿ
ವೈಜ್ಞಾನಿಕ ಹೆಸರು : ವಿಟೆಕ್ಸ್ ನೆಗುಂಡೋ ಎಲ್.
ಪ್ರಭೇದದ ಪ್ರಕಾರ: ದೇಶೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ: ಏಪ್ರಿಲ್ - ಆಗಸ್ಟ್
ಹಣ್ಣಾಗುವ ಅವಧಿ: ಫೆಬ್ರವರಿ - ಜುಲೈ
ಮೂಲ: ಪೂರ್ವ ಮತ್ತು ದಕ್ಷಿಣ ಆಫ್ರಿಕಾ ಮತ್ತು ಏಷ್ಯಾ

ಉಪಯೋಗಗಳು

ಸಂಗ್ರಹಿಸಿದ ಬೆಳ್ಳುಳ್ಳಿಯನ್ನು ಕೀಟಗಳ ವಿರುದ್ಧ ಮತ್ತು ಕೆಮ್ಮು ಪರಿಹಾರವಾಗಿ ಬಳಸಲಾಗುತ್ತದೆ. ಋತುಚಕ್ರವನ್ನು ನಿಯಂತ್ರಿಸುವ ಚಿಕಿತ್ಸೆಗಳು, ಫೈಬ್ರೊಸಿಸ್ಟಿಕ್ ( ಸ್ತನಕ್ಕೆ ಮುದ್ದೆ ಅಥವಾ ಹಗ್ಗದಂತಹ ಕ್ಯಾನ್ಸರ್ ಅಲ್ಲದ ಅಂಗಾಂಶಗಳ ಬೆಳವಣಿಗೆ) ಸ್ತನ ಕಾಯಿಲೆ ಮತ್ತು ಪ್ರಸವಾನಂತರದ ಚಿಕಿತ್ಸೆಗಳು ಸೇರಿದಂತೆ ಮಹಿಳೆಯರ ಆರೋಗ್ಯಕ್ಕಾಗಿ ಸಾಂಪ್ರದಾಯಿಕ ಗಿಡಮೂಲಿಕೆ ಔಷಧಿಗಳಲ್ಲಿ ಇದನ್ನು ಬಳಸಲಾಗುತ್ತದೆ

ವಿವರಣೆ

ಪೊದೆಗಳು ಅಥವಾ ಸಣ್ಣ ನಿತ್ಯಹರಿದ್ವರ್ಣ ಮರವಾಗಿದೆ, ಎಲೆಗಳು ಮತ್ತು ಹಣ್ಣುಗಳ ಮೇಲಿನ ಮೇಲ್ಮೈಯನ್ನು ಹೊರತುಪಡಿಸಿ ಉಳಿದ ಭಾಗಗಳು ನಸು ಬಿಳಿಬಣ್ಣದಿಂದ ಬೂದು ಬಣ್ಣದ ಉಣ್ಣೆಯ ರೀತಿಯ ಕೂದಲಿನಿಂದ ದಟ್ಟವಾಗಿ ಮುಚ್ಚಿರುತ್ತವೆ. ಕಿರುಕೊಂಬೆಗಳು ಅಡ್ಡ ಛೇದದಲ್ಲಿ ನಾಲ್ಕು ಕೋನಗಳನ್ನು ಹೊಂದಿದೆ ಮತ್ತು ಇದರ ಪರಿಣಾಮವಾಗಿ ನಾಲ್ಕು ಬದಿಗಳಲ್ಲಿ ಕವಲೊಡೆದಿರುತ್ತದೆ. ಇವು 3 ರಿಂದ 5 ಎಲೆಗಳನ್ನು ಹೊಂದಿದ್ದು, ಸಂಯುಕ್ತವಾಗಿರುತ್ತದೆ. ಎಲೆಗಳು ಕಾಂಡದ ಮೇಲೆ ವಿರುದ್ಧವಾಗಿ ಕತ್ತರಿ ಮಾದರಿಯ ಆಕಾರವನ್ನು ಹೊಂದಿರುತ್ತದೆ, ಚಿಗುರೆಲೆಗಳು ಸಾಮಾನ್ಯವಾಗಿ ಕಿರಿದಾದ ಆಯತಾಕಾರದ ಅಥವಾ ದೀರ್ಘವೃತ್ತದಿಂದ ಎರಡು ಕಡೆಗೂ ತುದಿ ಮೊನೆಗೂಡುವಂತೆ ಈಟಿಯ ತಲೆಯ ಆಕಾರವನ್ನು ಹೊಂದಿದ್ದು ಕಾಗದದ ಹಾಗೆ ತೆಳ್ಳಗಿರುತ್ತವೆ. ಎಲೆಯ ಮೇಲ್ಭಾಗವು ಕಡು ಹಸಿರು ವಿರಳವಾಗಿ ಮೃದುತುಪ್ಪಳದಿಂದ ಕೂಡಿರುತ್ತದೆ. ಎಲೆಯ ಕೆಳ ಭಾಗವು ತೆಳು ಬೂದುಬಣ್ಣದ ಮೃದುತುಪ್ಪಳದಿಂದ ಕೂಡಿರುತ್ತದೆ. ಎಲೆಯ ಚೂಪಾದ ಬುಡ, ಕಿರಿದಾಗಿ ಉದ್ದವಾಗಿರುವ ತುದಿಯು, ನಯವಾದ ಅಥವಾ ಗರಗಸದ ಹಲ್ಲನ್ನು ಹೋಲುವ ಅಂಚನ್ನು ಹೊಂದಿರುತ್ತವೆ. ಕಾಂಡದ ತುದಿಯಲ್ಲಿ ಹೆಚ್ಚು ಕವಲೊಡೆದ ಪುಷ್ಪಮಂಜರಿಯನ್ನು ಹೊಂದಿವೆ. ಇವು ಸಾಮಾನ್ಯವಾಗಿ ನೀಲಿ ಅಥವಾ ನೇರಳೆ ಬಣ್ಣದ, ಸಣ್ಣ, ದ್ವಿಲಿಂಗಿ ಹೂವುಗಳನ್ನು ಹೊಂದಿದ್ದು, ಬಹಳ ಚಿಕ್ಕ ಕಾಂಡದಿಂದ ಒಂದೇ ಹೂವನ್ನು ಹೂಗೊಂಚಲುಗಳಿಗೆ ಜೋಡಿಸುತ್ತದೆ. ಇವು ಉಪಗೋಳಾಕೃತಿ ಅಥವಾ ಸ್ವಲ್ಪಮಟ್ಟಿಗೆ ಅಂಡಾಕಾರದ (ಡ್ರೂಪ್) ಸರಳ ತಿರುಳಿರುವ ಹಣ್ಣನ್ನು ಹೊಂದಿರುತ್ತವೆ, ಸಾಮಾನ್ಯವಾಗಿ ಹಣ್ಣು 4 ಭಾಗಗಳನ್ನು ಹೊಂದಿದ್ದು, ಪ್ರತಿ ಭಾಗದಲ್ಲಿ ಒಂದು ಬೀಜವಿರುತ್ತದೆ.