ವೊಡೆಟಿಯಾ ಬೈಫುರ್ಕಾಟಾ ಎ.ಕೆ.ಇರ್ವಿನ್

ಕನ್ನಡದ ಹೆಸರು : -
ಸಾಮಾನ್ಯ ಹೆಸರು : ಫಾಕ್ಸ್‌ಟೇಲ್ ಪಾಮ್
ಕುಟುಂಬದ ಹೆಸರು : ಅರೆಕೇಸಿಯೇ
ವೈಜ್ಞಾನಿಕ ಹೆಸರು : ವೊಡೆಟಿಯಾ ಬೈಫುರ್ಕಾಟಾ ಎ.ಕೆ.ಇರ್ವಿನ್
ಪ್ರಭೇದದ ಪ್ರಕಾರ: ವಿದೇಶಿ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ಸಂರಕ್ಷಣೆ ಅವಲಂಬಿತ
ಹೂಬಿಡುವ ಅವಧಿ: ಡಿಸೆಂಬರ್ - ಫೆಬ್ರವರಿ
ಹಣ್ಣಾಗುವ ಅವಧಿ: ಅಕ್ಟೋಬರ್ - ಡಿಸೆಂಬರ್
ಮೂಲ: ಆಸ್ಟ್ರೇಲಿಯಾ

ಉಪಯೋಗಗಳು

ಇದನ್ನು ಅಲಂಕಾರಿಕ ಮರವಾಗಿ ಬಳಸಲಾಗುತ್ತದೆ.

ವಿವರಣೆ

ಇದು ತಿಳಿ ಬೂದು ಕಾಂಡವನ್ನು ಹೊಂದಿದೆ, 6 ರಿಂದ 15 ಮೀಟರ್ ಎತ್ತರಕ್ಕೆ ಬೆಳೆಯುತ್ತದೆ, ಗಂಡು ಮತ್ತು ಹೆಣ್ಣು ಹೂವುಗಳು ಒಂದೇ ಮರದ ಮೇಲೆ ಇರುತ್ತವೆ, ಕಾಂಡವು ಉಂಗುರದ ಗುರುತುಗಳೊಂದಿಗೆ ನಿಕಟವಾಗಿ ಸುತ್ತುವರಿಯಲ್ಪಟ್ಟಿದೆ. ಇವು ಒಂದು ರೀತಿಯ ಸಂಯುಕ್ತ ಎಲೆಯನ್ನು ಹೊಂದಿದ್ದು, ಇದರ ಎರಡೂ ಬದಿಗಳಲ್ಲಿ ಚಿಗುರೆಲೆಗಳನ್ನು ಜೋಡಿಸಿರುವ ಕೇಂದ್ರ ಕಾಂಡವನ್ನು ಹೊಂದಿರುತ್ತದೆ, ಇವು ನೋಡಲು ಹಕ್ಕಿಯ ಗರಿಗಳಂತೆ ಕಾಣುತ್ತದೆ. ಇವು ಕೊಳವೆಯಾಕಾರದ ರಕ್ಷಣಾತ್ಮಕ ರಚನೆ, ಮತ್ತು ಉದ್ದವಾದ ಸುತ್ತಳತೆಯ ಎಲೆಯ ಮೂಲ ರಚನೆಯನ್ನು (ಕ್ರೌನ್‌ಶಾಫ್ಟ್) ಹೊಂದಿದ್ದು ನಸು ಬೂದು ಬಿಳಿ ಬಣ್ಣದ ಉಣ್ಣೆಯ ರೀತಿಯ ಕೂದಲಿನಿಂದ ಸುತ್ತುವರಿಯಲ್ಪಟ್ಟಿರುತ್ತದೆ; ಸಂಯುಕ್ತ ಎಲೆಯ ಪ್ರರಂಭವಾಗುವ ಜಾಗವು 90 ರಿಂದ 107 ಎಲೆಗಳನ್ನು ಹೊಂದಿದ್ದು ಹಲವಾರು ರೇಖೀಯ ಭಾಗಗಳಂತೆ ವಿಂಗಡಿಸಿರುತ್ತದೆ ಅಥವಾ ಆಳವಾಗಿ ಹಾಲೆ, ರೋಮರಹಿತವಾಗಿರುತ್ತದೆ. ಇದರ ತಳವೂ ಸ್ವಲ್ಪ ಮಟ್ಟಿಗೆ ಬೆಣೆಯಾಕಾರದಲ್ಲಿದ್ದು , ತುದಿಯು ಒರಟಾಗಿ ಥಟ್ಟನೆ ಮತ್ತು ಅಸಮಾನವಾಗಿ, ಕಚ್ಚು ಕಚ್ಚಾಗಿ ಕೊನೆಗೊಳ್ಳುತ್ತದೆ. ಎಲೆಗಳ ಕೆಳಗೆ ರೆಂಬೆಗಳು ಅಥವಾ ಕಾಂಡದಿಂದ ಹುಟ್ಟುವ ಹೂಗೊಂಚಲನ್ನು ಹೊಂದಿದ್ದು, ಒಂದಕ್ಕಿಂತ ಹೆಚ್ಚು ಬಾರಿ ಸಂಯೋಜನೆಗೊತಂದಿರುತ್ತದೆ. ವಿಶಾಲ ಅಂತರವಿರುವ ತ್ರಿಕೋನಗಳಲ್ಲಿ ಹೂಗಳು, 2 ಗಂಡುಗಳ ನಡುವೆ 1 ಹೆಣ್ಣು ಹೂವನ್ನು ಹೊಂದಿದ್ದು, ಬಿಳಿ ಬಣ್ಣದಲ್ಲಿರುತ್ತವೆ. ಗೋಳಾಕಾರದದಿಂದ ಅಂಡಾಕಾರದ, ಚಿಕ್ಕ ತಿರುಳಿರುವ (ಬೆರ್ರಿ) ಹಣ್ಣನ್ನು ಹೊಂದಿದ್ದು, ಕಿತ್ತಳೆಯಿಂದ ಕೆಂಪು ಬಣ್ಣವನ್ನು ಹೊಂದಿರುತ್ತವೆ. ಬೀಜ ಕೊಕ್ಕಿನಿಂದ ಕೂಡಿರುತ್ತದೆ.