ಕನ್ನಡದ ಹೆಸರು : | Elachi, Bore hannu ಎಲಚಿ, ಬೋರೆ ಹಣ್ಣು |
ಸಾಮಾನ್ಯ ಹೆಸರು : | ಇಂಡಿಯನ್ ಜುಜುಬಿ |
ಕುಟುಂಬದ ಹೆಸರು : | ರಾಮ್ನೇಸಿ |
ವೈಜ್ಞಾನಿಕ ಹೆಸರು : | ಜಿಜಿಫಸ್ ಮಾರಿಷಿಯಾನಾ ಲ್ಯಾಮ್. |
ಪ್ರಭೇದದ ಪ್ರಕಾರ: | ವಿದೇಶಿ |
ಪ್ರಕೃತಿ ಶಾಸ್ತ್ರ : | ನಿತ್ಯಹರಿದ್ವರ್ಣ |
ಸಂರಕ್ಷಣೆಯ ಸ್ಥಿತಿ : | ತಿಳಿದಿಲ್ಲ |
ಹೂಬಿಡುವ ಅವಧಿ: | ಜುಲೈ - ಅಕ್ಟೋಬರ್ |
ಹಣ್ಣಾಗುವ ಅವಧಿ: | ಡಿಸೆಂಬರ್ - ಮಾರ್ಚ್ |
ಮೂಲ: | ಆಗ್ನೇಯ ಏಷ್ಯಾ |
ಇದು ತೂಕ , ಸ್ನಾಯುವಿನ ಬಲ ಮತ್ತು ದೈಹಿಕ ಶಕ್ತಿಯನ್ನು ಹೆಚ್ಚಿಸಲು ಸಹಾಯಕವಾಗಿದೆ. ಚೀನೀ ಔಷಧದಲ್ಲಿ ಇದನ್ನು ಯಕೃತ್ತಿನ ಕಾರ್ಯವನ್ನು ಬಲಪಡಿಸುವ ಟಾನಿಕ್ (ಉತ್ತೇಜಕ) ಆಗಿ ಬಳಸಲಾಗುತ್ತದೆ. ಇವುಗಳನ್ನು ಅನೋಡೈನ್ (ನೋವನ್ನು ಕಡಿಮೆ ಮಾಡಲು ಬಳಸುವ ಔಷಧ),ಕ್ಯಾನ್ಸರ್ ಚಿಕಿತ್ಸೆಯಲ್ಲಿ, ಪ್ರತಿವಿಷ, ಕಫಹಾರಿ (ಕೆಮ್ಮುಗಳಿಗೆ ಚಿಕಿತ್ಸೆ ನೀಡಲು ಬಳಸುವ ಔಷಧ), ಪೆಕ್ಟೋರಲ್ ( ಎದೆ ಅಥವಾ ಉಸಿರಾಟದ ಪ್ರದೇಶದ ಅಸ್ವಸ್ಥತೆಗಳನ್ನು ನಿವಾರಿಸುವ ಔಷಧಿ), ರೆಫ್ರಿಜರೆಂಟ್ (ದೇಹದ ಉಷ್ಣತೆಯನ್ನು ಕಡಿಮೆ ಮಾಡುವ ಔಷಧಿ), ಸೆಡಟಿವ್ ( ನಿದ್ದೆಬರಿಸುವ ಮದ್ದು), ಜಠರೌಷಧ, ಸ್ಟೈಪ್ಟಿಕ್ ( ರಕ್ತಸ್ರಾವ ನಿರೋಧಕ), ಟಾನಿಕ್ (ಬಲವರ್ಧಕ) ದಲ್ಲಿ ಬಳಸಲಾಗುತ್ತದೆ.
10 ಮೀಟರ್ ಎತ್ತರದವರೆಗೆ ಬೆಳೆಯುವ ನಿತ್ಯಹರಿದ್ವರ್ಣ ಅಥವಾ ಪತನಶೀಲ ಮರವಾಗಿದೆ. ತೊಗಟೆ ಗಾಢ ಬೂದು ಅಥವಾ ಬಹುತೇಕ ಕಪ್ಪು ಬಣ್ಣವನ್ನು ಹೊಂದಿದ್ದು, ತೊಗಟೆಯ ಮೇಲ್ಮೈ ಆಳವಾದ ಲಂಬವಾದ ಬಿರುಕುಗಳನ್ನು ಹೊಂದಿರುತ್ತವೆ, ಮತ್ತು ಈ ಬಿರುಕುಗಳು ನಸುಗೆಂಪು ಮತ್ತು ಒಳಭಾಗವು ನಾರಿನಿಂದ ಕೂಡಿರುತ್ತದೆ; ಕಿರುಕೊಂಬೆಗಳಲ್ಲಿರುವ ಎಲೆಯ ತೊಟ್ಟು ಮತ್ತು ಎಲೆಯ ಕೆಳಭಾಗವು ನಸು ಹಳದಿ ಮಿಶ್ರಿತ ಬಿಳಿ ಬಣ್ಣ, ಹಾಗೂ ದಟ್ಟವಾದ ಉಣ್ಣೆಯ ಕೂದಲಿನಿಂದ ಕೂಡಿದ್ದು, ಮುಳ್ಳುಮುಳ್ಳಾದ ಮೇಲ್ಮೈ ಹೊಂದಿರುತ್ತವೆ. ಎಲೆಗಳು ಸರಳ, ಪರ್ಯಾಯವಾಗಿ ಕೂಡಿಕೊಂಡಿರುತ್ತದೆ. ಇವು ಅಂಡಾಕಾರ, ದೀರ್ಘವೃತ್ತೀಯ-ಅಂಡಾಕಾರ, ದೀರ್ಘವೃತ್ತೀಯ-ಕಕ್ಷೀಯ ಅಥವಾ ಸುಮಾರು ಕಕ್ಷೀಯ ಆಕಾರದಲ್ಲಿರುತ್ತವೆ. ಎಲೆಯ ಮೇಲ್ಮೈ ತುಪ್ಪಳರಹಿತವಾಗಿದ್ದು, ಚರ್ಮದ ವಿನ್ಯಾಸವನ್ನು ಹೋಲುತ್ತವೆ. ಎಲೆಯ ಬುಡವು ಓರೆಯಾಗಿ, ಸುಮಾರು ಹೃದಯದ ಆಕಾರವನ್ನು ಅಥವಾ ವ್ರತ್ತಾಕಾರವಾಗಿರುತ್ತದೆ ಹಾಗೂ ತುದಿಯ ಸಹ ವ್ರತ್ತಾಕಾರವಾಗಿರುತ್ತದೆ. ಎಲೆಯ ಅಂಚು ಗ್ರಂಥಿಗಳಿಂದ ಕೂಡಿದ ಹಲ್ಲಿನಂತೆ ಅಥವಾ ಗರಗಸದಂತೆ ಹಲ್ಲನ್ನು ಹೊಂದಿರುತ್ತವೆ. ಅಕ್ಷಾಕಂಕುಳಿನಲ್ಲಿ ಚಪ್ಪಟೆ ಆಕಾರದ ಕವಲೊಡೆದ ಗೊಂಚಲು ಹೊಂದಿದ್ದು, ಅದರಲ್ಲಿ ಮುಖ್ಯ ಮತ್ತು ರೆಂಬೆಯ ಕಾಂಡಗಳ ಪ್ರತಿ ತುದಿಯಲ್ಲಿ ಹೂವಿನಲ್ಲಿ ಹೊಂದಿರುತ್ತವೆ, ಅದರ ಕೆಳಗೆ ಅಥವಾ ಅದರ ಬದಿಯಲ್ಲಿ ಹೂವುಗಳು ಹುಟ್ಟುತ್ತವೆ. ಹೂಗಳು ದ್ವಿಲಿಂಗಿಯಾಗಿದ್ದು ಹಸಿರು ಮಿಶ್ರಿತ ಹಳದಿ ಬಣ್ಣದಲ್ಲಿರುತ್ತವೆ. ಇವು ಡ್ರೂಪ್ಸ್ (ತೆಳುವಾದ ಚರ್ಮವನ್ನು ಹೊಂದಿರುವ ತಿರುಳಿರುವ ಹಣ್ಣಾಗಿದ್ದು ಮದ್ಯದಲ್ಲಿ ಬೀಜವನ್ನು ಹೊಂದಿರುತ್ತದೆ) ರೀತಿಯ ಹಣ್ಣುಗಳನ್ನು ಹೊಂದಿದ್ದು, ಆಯತಾಕಾರದಿಂದ ಗೋಳಾಕಾರದಲ್ಲಿರುತ್ತದೆ, ಹಾಗೂ ಇದರ ಹಣ್ಣುಗಳು ಹಳದಿ ಅಥವಾ ಕಿತ್ತಳೆ ಬಣ್ಣವನ್ನು ಹೊಂದಿರುತ್ತದೆ. ಇವು ಸಂಕುಚಿತವಾದ 1 ರಿಂದ 2 ಬೀಜಗಳನ್ನು ಹೊಂದಿರುತ್ತವೆ.