ಪಾರ್ಮೆಂಟಿಯೆರಾ ಸೆರೆಫೆರಾ ಸೀಮ್.

ಕನ್ನಡದ ಹೆಸರು : -
ಸಾಮಾನ್ಯ ಹೆಸರು : ಕ್ಯಾಂಡಲ್ ಟ್ರೀ
ಕುಟುಂಬದ ಹೆಸರು : ಬಿಗ್ನೋನಿಯೇಸಿ
ವೈಜ್ಞಾನಿಕ ಹೆಸರು : ಪಾರ್ಮೆಂಟಿಯೆರಾ ಸೆರೆಫೆರಾ ಸೀಮ್.
ಪ್ರಭೇದದ ಪ್ರಕಾರ: ವಿದೇಶಿ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ಅಳಿವಿನಂಚಿನಲ್ಲಿದೆ
ಹೂಬಿಡುವ ಅವಧಿ: ಏಪ್ರಿಲ್-ಜೂನ್
ಹಣ್ಣಾಗುವ ಅವಧಿ: ಏಪ್ರಿಲ್-ಜೂನ್
ಮೂಲ: ಪನಾಮ

ಉಪಯೋಗಗಳು

ಇವುಗಳ ಹಣ್ಣುಗಳು ತಿನ್ನಲು ಯೋಗ್ಯವಾಗಿದೆ. ಇವುಗಳ ಮೆಥನಾಲಿಕ್ ಸಾರವು ಉರಿಯೂತ ನಿವಾರಕ, ಆಂಟಿ-ಹೈಪರ್ಗ್ಲೈಸೆಮಿಕ್ ( ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುವ), ಗ್ಯಾಸ್ಟ್ರೋಪ್ರೊಟೆಕ್ಟಿವ್ ( ಜೀರ್ಣಾಂಗವ್ಯೂಹದ ಗಾಯದ ಚಿಕಿತ್ಸೆ ಅಥವಾ ತಡೆಗಟ್ಟುವಿಕೆ) ಗೆ ಪರಿಣಾಮಕಾರಿಯಾಗಿದೆ ಎಂದು ಕಂಡುಬಂದಿದೆ.

ವಿವರಣೆ

7 ರಿಂದ 20 ಮೀಟರ್ ಎತ್ತರವಿರುವ, ನಿತ್ಯಹರಿದ್ವರ್ಣ ಮರವಾಗಿದೆ. ಇವು ಸಾಮಾನ್ಯವಾಗಿ ಬುಡದಲ್ಲಿ ಎರಡಕ್ಕಿಂತ ಹೆಚ್ಚು ಕೊಂಬೆಗಳನ್ನು ಹೊಂದಿರುತ್ತವೆ. ಎಲೆಗಳು ವಿರುದ್ಧವಾಗಿರುತ್ತವೆ, ಹಾಗೂ ಮೂರು ದಳವನ್ನು ಹೊಂದಿರುತ್ತದೆ; ಚಿಗುರೆಲೆಗಳು ಅಂಡಾಕಾರದದಿಂದ ಅಂಡಾಕಾರದ-ವಜ್ರದ ಆಕಾರವನ್ನು ಹೊಂದಿದ್ದು, ಸೂಕ್ಷ್ಮವಾದ ಪೊರೆಯಿಂದ ಕೂಡಿರುತ್ತವೆ. ಎಳೆಯ ತಳವು ಕಿರಿದಾಗಿದ್ದು, ತುದಿಯು ಚೂಪಾದ ಉದ್ದವಾದ ಬಿಂದುವಿನಲ್ಲಿ ಕೊನೆಗೊಳ್ಳುತ್ತದೆ. ಪುಷ್ಪಮಂಜರಿಯು 2 ರಿಂದ 3 ಹೂವುಗಳನ್ನು ಒಳಗೊಂಡ ಗುಚ್ಛವಾಗಿದೆ ಅಥವಾ ಅವು ಒಂಟಿಯಾಗಿರುತ್ತದೆ, ಮುಖ್ಯ ಕಾಂಡಗಳು ಅಥವಾ ಮರದ ಕಾಂಡಗಳಿಂದ ಹೂವುಗಳನ್ನು ಬಿಡುತ್ತವೆ. ಹೂವುಗಳು ದ್ವಿಲಿಂಗಗಳಾಗಿದ್ದು ಕೊಳವೆಯಾಕಾರದಲ್ಲಿರುತ್ತದೆ, ಹಾಗೂ ಬಿಳಿ ಬಣ್ಣದಿಂದ ಹಸಿರು ಮಿಶ್ರಿತ ಬಿಳಿ ಬಣ್ಣವನ್ನು ಹೊಂದಿರುತ್ತದೆ. ಇವು ಮೇಣದಂತಹ, ತಿರುಳಿರುವ ಹಣ್ಣನ್ನು (ಬೆರ್ರಿ) ಹೊಂದಿದ್ದು, ಹಳದಿ ಬಣ್ಣದಲ್ಲಿರುತ್ತವೆ. ಇವು ರೇಖೆಯಂತೆ ಉದ್ದವಾಗಿದ್ದು, ಹಣ್ಣಿನ ಸುತ್ತಲೂ ನಾರಿನಿಂದ ಕೂಡಿರುತ್ತದೆ ಮತ್ತು ಬೀಜದ ಸುತ್ತಲೂ ತಿರುಳಿರುವ ಭಾಗವನ್ನು ಹೊಂದಿರುತ್ತದೆ. ತೆಳುವಾದ, ಕಿರಿದಾದ ಮತ್ತು ಲೋಳೆಯ ರೆಕ್ಕೆಗಳೊಂದಿಗೆ ಬೀಜಗಳು ಚಿಕ್ಕದಾಗಿರುತ್ತವೆ.