ಲೆರೊಡೆಂಡ್ರಮ್ ಪ್ಲಿಯೊಸಿಯಾಡಿಯಮ್ ಗುರ್ಕೆ

ಕನ್ನಡದ ಹೆಸರು : -
ಸಾಮಾನ್ಯ ಹೆಸರು : ಸ್ಯಾಂಡ್‌ವೆಲ್ಡ್ ಟಿಂಡರ್‌ವುಡ್
ಕುಟುಂಬದ ಹೆಸರು : ಲ್ಯಾಮಿಯಾಸಿ
ವೈಜ್ಞಾನಿಕ ಹೆಸರು : ಲೆರೊಡೆಂಡ್ರಮ್ ಪ್ಲಿಯೊಸಿಯಾಡಿಯಮ್ ಗುರ್ಕೆ
ಪ್ರಭೇದದ ಪ್ರಕಾರ: ವಿದೇಶಿ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ:
ಹಣ್ಣಾಗುವ ಅವಧಿ:
ಮೂಲ: ಆಫ್ರಿಕಾ

ಉಪಯೋಗಗಳು

ವಿವರಣೆ

ಇದು ಕೋನೀಯ ಕಾಂಡವನ್ನು ಹೊಂದಿರುವ ಪೊದೆಸಸ್ಯವಾಗಿದ್ದು, 3 ಮೀ ಎತ್ತರಕ್ಕೆ ಬೆಳೆಯುತ್ತದೆ. ಎಲೆಗಳು ವಿರುದ್ಧ, ಉಪವಿಮುಖ ಅಥವಾ 3 ರಿಂದ 4 ಸುರುಳಿಸುತ್ತಿಕೊಂಡಿರುತ್ತವೆ. ಇವು ಅಂಡಾಕಾರ ಅಥವಾ ಅಂಡಾಕಾರದಿಂದ ಆಯತಾಕಾರದಲ್ಲಿದ್ದು, ಕೆಳಗೆ ಚುಕ್ಕೆಗಳು ಅಥವಾ ಸಣ್ಣ ರಂಧ್ರಗಳನ್ನು ಹೊಂದಿರುತ್ತವೆ. ಮೊಟಕುಗೊಳಿಸಿದಂತೆ ದುಂಡಾಗಿರುವ ಅಥವಾ ಸ್ವಲ್ಪ ಮಟ್ಟಿಗೆ ಹೃದಯಾಕಾರದ ಆಕಾರವನ್ನು ಹೊಂದಿರುವ ಬುಡ, ಥಟ್ಟನೆ ಎಲೆಯ ತುದಿಯ ಬಿಂದುವಿಗೆ ಮೊನಚಾದ ಅಥವಾ ಕಿರಿದಾದ ಅಥವಾ ಕಿರಿದಾದ ತುದಿಗೆ ಕ್ರಮೇಣ ಮೊಟಕುಗೊಳಿಸಿದಂತಿರುವ ತುದಿ, ಸಂಪೂರ್ಣ ಅಥವಾ ಕೆಲವೊಮ್ಮೆ ಹಲ್ಲುಗಳುಳ್ಳ ಅಥವಾ ಸಮತೋಲನವಿಲ್ಲದ ರೀತಿಯಲ್ಲಿ ಹಲ್ಲುಗಳುಳ್ಳ ಅಂಚನ್ನು ಹೊಂದಿರುತ್ತದೆ. ಪುಷ್ಪಮಂಜರಿಯು ಕಾಂಡದ ತುದಿಯಲ್ಲಿ ಸಂಯುಕ್ತ ಮೊಗ್ಗನ್ನು ( ಕಂಪೋಸ್ಡ್ ಸೈಮ್- ಇದರಲ್ಲಿ ಮುಖ್ಯ ಅಕ್ಷವು ಅನಿರ್ದಿಷ್ಟವಾಗಿ ಬೆಳೆಯುತ್ತದೆ ಮತ್ತು ಉಪ ಅಕ್ಷವು ನಿರ್ದಿಷ್ಟ ಬೆಳವಣಿಗೆಯನ್ನು ಹೊಂದಿರುತ್ತವೆ) ಹೊಂದಿರುತ್ತದೆ. ಹೂಗಳು ದ್ವಿಲಿಂಗಿಗಳಾಗಿದ್ದು ಬಿಳಿ ಅಥವಾ ಕೆನೆ ಬಣ್ಣವನ್ನು ಹೊಂದಿರುತ್ತದೆ. ಇವು ಆಹ್ಲಾದಕರ ವಾಸನೆ ಹಾಗೂ ಸೆಸೈಲ್ ಗ್ರಂಥಿಗಳನ್ನು ಹೊಂದಿರುತ್ತವೆ. ಹಣ್ಣುಗಳು ಉಪಗೋಳಾಕಾರದಲ್ಲಿದೆ, ಇವು ಗಾಢವಾದ ಕೆಂಪು ಅಥವಾ ನೇರಳೆ-ಕಪ್ಪು ಬಣ್ಣವನ್ನು ಹೊಂದಿವೆ. ಸಂಕುಚಿತಗೊಂಡ ಬೀಜಗಳನ್ನು ಹೊಂದಿದ್ದು ನುಣ್ಣಗೆ ಸುಕ್ಕುಗಟ್ಟಿದಂತಿರುತ್ತದೆ.