ಕನ್ನಡದ ಹೆಸರು : | - |
ಸಾಮಾನ್ಯ ಹೆಸರು : | ಗ್ರ್ಯಾಂಡ್ ಡೆವಿಲ್ಸ್- ಕ್ಲೋಸ್ |
ಕುಟುಂಬದ ಹೆಸರು : | ನೈಕ್ಟಾಜಿನೇಸಿ |
ವೈಜ್ಞಾನಿಕ ಹೆಸರು : | ಸಿಯೋಡ್ಸ್ ಗ್ರ್ಯಾಂಡಿಸ್ (ಆರ್.ಬ್ರ.) ಡಿ.ಕ್ಯೂ.ಲು |
ಪ್ರಭೇದದ ಪ್ರಕಾರ: | ಸ್ಥಳೀಯ |
ಪ್ರಕೃತಿ ಶಾಸ್ತ್ರ : | ನಿತ್ಯಹರಿದ್ವರ್ಣ |
ಸಂರಕ್ಷಣೆಯ ಸ್ಥಿತಿ : | ತಿಳಿದಿಲ್ಲ |
ಹೂಬಿಡುವ ಅವಧಿ: | |
ಹಣ್ಣಾಗುವ ಅವಧಿ: | |
ಮೂಲ: | ಪೆಸಿಫಿಕ್ ಮತ್ತು ಹಿಂದೂ ಮಹಾಸಾಗರದ ಉದ್ದಕ್ಕೂ |
ಇವುಗಳನ್ನು ಆಂಟಿ-ಆಕ್ಸಿಡೆಂಟ್ (ಜೀವಕೋಶದ ಹಾನಿಯನ್ನು ತಡೆಯುವ ಅಥವಾ ವಿಳಂಬಗೊಳಿಸುವ) , ಆಂಟಿ-ಮೈಕ್ರೋಬಿಯಲ್ (ಮಾನವರು, ಪ್ರಾಣಿಗಳು ಮತ್ತು ಸಸ್ಯಗಳಲ್ಲಿನ ಸೋಂಕನ್ನು ತಡೆಗಟ್ಟಲು ಬಳಸುವ ಔಷಧಿಗಳು), ಆಂಟಿ ಇಂಪ್ಲಾಮೇಟರಿ (ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುವ ಔಷಧ) , ಆಂಟಿ-ಡಯಾಬಿಟಿಕ್ ( ಮಧುಮೇಹ ಹೊಂದಿರುವ ಜನರಲ್ಲಿ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸ್ಥಿರಗೊಳಿಸಲು ಮತ್ತು ನಿಯಂತ್ರಿಸಲು ಬಳಸುವ ಔಷಧಿ), ಡೈಯುರೆಟಿಕ್ (ದೇಹದಲ್ಲಿನ ಉಪ್ಪು (ಸೋಡಿಯಂ) ಮತ್ತು ನೀರನ್ನು ತೆಗೆಯಲು ಸಹಾಯ ಮಾಡುವ ಔಷಧಿ), ನೋವು ನಿವಾರಕ ಮತ್ತು ಗಾಯವನ್ನು ಗುಣಪಡಿಸುವ ಚಿಕಿತ್ಸಿಗಳಿಗಾಗಿ ಮತ್ತಷ್ಟು ಅಧ್ಯಯನ ಮಾಡಲಾಗಿದೆ.
ಇದು 28 ಮೀ ಎತ್ತರದವರೆಗೆ ಬೆಳೆಯುವ ನಿತ್ಯಹರಿದ್ವರ್ಣ ಮರವಾಗಿದೆ. ಎಲೆಗಳು ವಿರುದ್ಧ ಅಥವಾ ಉಪವಿಮುಖವಾಗಿರುತ್ತವೆ. ಇವು ದೀರ್ಘವೃತ್ತೀಯ, ಆಯಾಕಾರ ಅಥವಾ ಅಂಡಾಕಾರವಾಗಿದ್ದು, ರೋಮರಹಿತವಾದ, ಹೊಳೆಯುವ, ಪೊರೆಯನ್ನು ಹೊಂದಿರುತ್ತವೆ. ಹಾಗೂ ದುಂಡಾದ ಅಥವಾ ಹೃದಯದ ಆಕಾರಾದ ತಳ, ಓರೆಯಾಗಿ ಬಾಗಿದ, ಚೂಪಾದ ಅಥವಾ ತೆಳ್ಳಗಿನ ಬಿಂದುವಿಗೆ ಮೊನಚಾದ ತುದಿಯು, ಸಂಪೂರ್ಣ ಅಂಚನ್ನು ಹೊಂದಿರುತ್ತದೆ. ಇವು ಕಾಂಡದ ತುದಿಯಲ್ಲಿ ಹೂವನ್ನು ಬಿಡುತ್ತವೆ, ಹೂವುಗಳು ಹೊಸ ಬೆಳವಣಿಗೆಯು ಪಕ್ಕದ ಚಿಗುರುಗಳಿಂದ ಬರುತ್ತದೆ ಮತ್ತು ಹಳೆಯ ಹೂವುಗಳು ಮೇಲ್ಬಾಗದಲ್ಲಿರುವ ಪುಷ್ಪಮಂಜರಿಯನ್ನು ಹೊಂದಿರುತ್ತದೆ. ಹೂವುಗಳು ಉಭಯಲಿಂಗಿಯಾಗಿದ್ದು ಕೊಳವೆಯಾಕಾರದಲ್ಲಿರುತ್ತದೆ. ಇದರ ಹಣ್ಣುಗಳು ಸಿಲಿಂಡರಾಕಾರದಿಂದ ಗದೆಯ (ಬುಡಕ್ಕಿಂತ ತುದಿ ದಪ್ಪ) ಆಕಾರದಲ್ಲಿರುತ್ತದೆ, ಹಾಗೂ 8 ರಿಂದ 12 ಮಿಲಿಮೀಟರ್ ದೊಡ್ಡದಾಗಿರುತ್ತದೆ. ಮತ್ತು ಉದ್ದ,ಒರಟು, ಪಕ್ಕೆಲುಬಿನಂತಹ ವಿನ್ಯಾಸವನ್ನು ಹೊಂದಿರುತ್ತದೆ; ಇವು ಲೋಳೆ ರಸದಂತಹ, ಮುಳ್ಳಿನ ಹಾಗೆ ಕಾಣುವ, ಗ್ರಂಥಿಗಳಿರುವ ಕೂದಲನ್ನು ಹೊಂದಿರುತ್ತದೆ.