ಕೆನಂಗಾ ಒಡೊರಾಟಾ (ಲ್ಯಾಮ್.) ಹುಕ್.ಎಫ್. ಮತ್ತು ಥಾಮ್ಸನ್

ಕನ್ನಡದ ಹೆಸರು : apoorva champaka, kamalada mara, Katte sampige ಅಪೂರ್ವ ಚಂಪಕ, ಕಮಲದ ಮರ , ಕತ್ತೆ ಸಂಪಿಗೆ
ಸಾಮಾನ್ಯ ಹೆಸರು : ಯಲ್ಯಾಂಗ್-ಯಲ್ಯಾಂಗ್, ಕ್ಯಾನಂಗಾ ಟ್ರೀ
ಕುಟುಂಬದ ಹೆಸರು : ಅನ್ನೊನೇಸಿ
ವೈಜ್ಞಾನಿಕ ಹೆಸರು : ಕೆನಂಗಾ ಒಡೊರಾಟಾ (ಲ್ಯಾಮ್.) ಹುಕ್.ಎಫ್. ಮತ್ತು ಥಾಮ್ಸನ್
ಪ್ರಭೇದದ ಪ್ರಕಾರ: ವಿದೇಶಿ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ: ವರ್ಷಪೂರ್ತಿ
ಹಣ್ಣಾಗುವ ಅವಧಿ: ವರ್ಷಪೂರ್ತಿ
ಮೂಲ: ಆಸ್ಟ್ರೇಲಿಯಾ, ಆಗ್ನೇಯ ಏಷ್ಯಾ

ಉಪಯೋಗಗಳು

ಇದರ ಸಾರಭೂತ ತೈಲವನ್ನು ಅರೋಮಾಥೆರಪಿ (ಮಸಾಜ್, ಸಸ್ಯದ ರಸಗಳೊಂದಿಗೆ ಮಾಡುವ ಮಸಾಜ್) ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ, ರಕ್ತದೊತ್ತಡ, ಖಿನ್ನತೆ ಮತ್ತು ಮಾನಸಿಕ ಒತ್ತಡ , ಮಲೇರಿಯಾ, ಅಸ್ತಮಾ, ಪಾರ್ಶ್ವವಾಯು (ಅಪಸ್ಮಾರ) ಮತ್ತು ಸಂಧಿವಾತದ ಚಿಕಿತ್ಸೆಯಲ್ಲಿಯೂ ಬಳಸಲಾಗುತ್ತದೆ.

ವಿವರಣೆ

20 ಮೀ ಎತ್ತರದವರೆಗೆ ಬೆಳೆಯುವ, ನಿತ್ಯಹರಿದ್ವರ್ಣ ಮರವಾಗಿದೆ. ತೊಗಟೆ ಮಸುಕಾದ ಬೂದು ಬಣ್ಣವನ್ನು ಹೊಂದಿದೆ, ಕಿರುಕೊಂಬೆಗಳು ಮೊದಲು ಸೂಕ್ಷ್ಮವಾದ ಕೂದಲನ್ನು ಹೊಂದಿರುತ್ತದೆ, ನಂತರ ರೋಮರಹಿತವಾಗಿ, ನೇರವಾಗಿ ಕವಲೊಡೆಯುತ್ತದೆ. ಎಲೆಗಳು ಸರಳ, ಪರ್ಯಾಯ, ಅಂಡಾಕಾರದಿಂದ - ಈಟಿಯ ತಲೆಯ ಆಕಾರ, ಆಯತಾಕಾರದಿಂದ-ಈಟಿಯ ತಲೆಯ ಆಕಾರ ಅಥವಾ ವಿಶಾಲವಾದ ಅಂಡಾಕಾರವನ್ನು ಹೊಂದಿರುತ್ತದೆ, ಚರ್ಮವನ್ನು ಹೋಲುವ, ತಳವು ಮೊಂಡು ಅಥವಾ ದುಂಡಾಗಿರುತ್ತದೆ, ಚೂಪಾದ ಅಥವಾ ಕಡಿಮೆ ಚೂಪಾದ ತುದಿ, ಮತ್ತು ಸಂಪೂರ್ಣವಾದ ಅಂಚನ್ನು ಹೊಂದಿರುತ್ತದೆ. ಪುಷ್ಪಮಂಜರಿ ಅಕ್ಷಾಕಂಕುಳಿನಲ್ಲಿದ್ದು, ಮಧ್ಯ ಕಾಂಡದ ಉದ್ದಕ್ಕೂ ಸಮಾನ ಅಂತರದಲ್ಲಿ ಸಣ್ಣ ಸಮಾನ ಕಾಂಡಗಳಿಂದ ಜೋಡಿಸಲಾದ (ರಸೀಮ್) ಜೋಲುಬಿದ್ದಿರುವ ಹೂಗೊಂಚಲನ್ನು ಹೊಂದಿರುತ್ತದೆ. ಹೂವುಗಳು ಪರಿಮಳಯುಕ್ತವಾಗಿದ್ದು, ದ್ವಿಲಿಂಗಿ ಆಗಿದೆ, ಇವು 6 ದಳಗಳನ್ನು ಹೊಂದಿವೆ, ಹೂವು ಪ್ರಾರಂಭದಲ್ಲಿ ಹಸಿರು, ಸಂಪೂರ್ಣವಾಗಿ ಬೆಳೆದಾಗ ಹಳದಿ ಬ್ಬಣ್ಣವನ್ನು ಪಡೆಯುತ್ತದೆ, ಹಾಗೂ ಸೂಕ್ಷ್ಮವಾದ ಮೃದು ಕೂದಲಿನಿಂದ ಕೂಡಿರುತ್ತದೆ. ಇವು (ಬೆರ್ರಿ) ಸಣ್ಣ ತಿರುಳಿರುವ ಹಣ್ಣನ್ನು ಹೊಂದಿದ್ದು ಸಾಮಾನ್ಯವಾಗಿ ಎಲೆಗಳ ಕಾಂಡದ ಎರಡೂ ಬದಿಯಿಂದ ಎಲೆಗಳು ಅಥವಾ ಹೂವುಗಳೊಂದಿಗೆ ಒಟ್ಟಿಗೆ ಕಿಕ್ಕಿರಿದು ಬೆಳೆಯುತ್ತದೆ. ಇವು ಮೊನೊಕಾರ್ಪಿಕ್ (ಒಮ್ಮೆ ಮಾತ್ರ ಹೂಬಿಡುತ್ತದೆ ಮತ್ತು ನಂತರ ಸಾಯುತ್ತದೆ) ಆಗಿದೆ. ಮತ್ತು ಅಂಡಾಕಾರದ, ಗೋಳಾಕಾರದ ಅಥವಾ ಆಯತಾಕಾರ, ತಿರುಳು ಹೊಂದಿದ , ರೋಮರಹಿತವಾದ, ಮಾಗಿದಾಗ ಕಪ್ಪು ಬಣ್ಣದಲ್ಲಿರುವ ಹಣ್ಣನ್ನು ಹೊಂದಿರುತ್ತದೆ. ಪ್ರತಿ ಮೊನೊಕಾರ್ಪ್‌ ನಲ್ಲಿ 2 ರಿಂದ 12 ಬೀಜಗಳಿರುತ್ತವೆ.