ಸ್ಪೊಂಡಿಯಾಸ್ ಎಲ್.

ಕನ್ನಡದ ಹೆಸರು : -
ಸಾಮಾನ್ಯ ಹೆಸರು : ಮೊಂಬಿನ್ಸ್
ಕುಟುಂಬದ ಹೆಸರು : ಅನಾಕಾರ್ಡಿಯೇಸಿ
ವೈಜ್ಞಾನಿಕ ಹೆಸರು : ಸ್ಪೊಂಡಿಯಾಸ್ ಎಲ್.
ಪ್ರಭೇದದ ಪ್ರಕಾರ: ವಿದೇಶಿ
ಪ್ರಕೃತಿ ಶಾಸ್ತ್ರ : ಪತನಶೀಲ
ಸಂರಕ್ಷಣೆಯ ಸ್ಥಿತಿ : ಕಡಿಮೆ ಕಾಳಜಿ
ಹೂಬಿಡುವ ಅವಧಿ: ಜನವರಿಯಿಂದ ಮೇವರೆಗೆ
ಹಣ್ಣಾಗುವ ಅವಧಿ: ಜುಲೈನಿಂದ ಸೆಪ್ಟೆಂಬರ್‌ವರೆಗೆ
ಮೂಲ: ಮಧ್ಯ ಅಮೆರಿಕಾದ ದ್ವೀಪಗಳು (ವೆಸ್ಟ್ ಇಂಡೀಸ್) ಸೇರಿದಂತೆ ಉಷ್ಣವಲಯದ ಅಮೇರಿಕಾ

ಉಪಯೋಗಗಳು

ಹಣ್ಣಿನ ತಿರುಳನ್ನು ತಾಜಾವಾಗಿ ಸೇವಿಸಲಾಗುತ್ತದೆ ಮತ್ತು ಇವುಗಳನ್ನು ಹಣ್ಣಿನ ರಸ, ಕಾನ್ಸನ್ಟ್ರೇಟ್ (ಹಣ್ಣಿನಿಂದ ನೀರಿನ ಅಂಶವನ್ನು ತೆಗೆದು ಮಾಡಿದ ಆಹಾರ) , ಜೆಲ್ಲಿಗಳು (ಸಿಹಿಯಾದ ಜಾಮ್) ಮತ್ತು ಪಾನೀಯಗಳನ್ನು ತಯಾರಿಸಲು ಬಳಸಲಾಗುತ್ತದೆ.

ವಿವರಣೆ

ಚಿಕ್ಕ ಗಾತ್ರದಿಂದ ಹಾಗೂ ದೊಡ್ಡ ಗಾತ್ರದ ಪತನಶೀಲ ಅಥವಾ ಅರೆ-ಪತನಶೀಲ ಮರವಾಗಿದೆ. ಎಲೆಗಳು ಪರ್ಯಾಯವಾಗಿರುತ್ತವೆ, ಮತ್ತು ಜೋಡಿಯಾಗದ ಚಿಗುರೆಲೆಯನ್ನು ಹೊಂದಿರುತ್ತದೆ; ಚಿಗುರೆಲೆಗಳು ವಿರುದ್ಧದಿಂದ ಉಪ-ವಿರುದ್ಧವಾಗಿದ್ದು, ಪೊರೆ ಅಥವಾ ಸುಮಾರು ಚರ್ಮದ ಮೇಲ್ಮೈ, ದುಂಡಗಿನ ಹಲ್ಲು ಅಥವಾ ಗರಗಸದ ರೀತಿಯ ಹಲ್ಲಿನಿಂದ ಸುತ್ತುವರಿದ ಸಂಪೂರ್ಣ ಅಂಚು ಹೊಂದಿರುತ್ತದೆ. ಪುಷ್ಪಮಂಜರಿ ಅಕ್ಷಾಕಂಕುಳಿನ ಅಥವಾ ಕಾಂಡದ ತುದಿಯಲ್ಲಿ ಹುಟ್ಟುವ ಕವಲೊಡೆದ ಹೂಗೊಂಚಲು ಹೊಂದಿರುತ್ತದೆ. ಹೂವುಗಳು ಚಿಕ್ಕ, ದ್ವಿಲಿಂಗಿ, ಕೆಲವೊಮ್ಮೆ ಏಕಲಿಂಗಿ ಆಗಿದೆ. ಇವು ಕೆನೆ, ಬಿಳಿ, ಕಿತ್ತಳೆ ಅಥವಾ ಕೆಂಪು ಬಣ್ಣದಲ್ಲಿರುತ್ತವೆ . ಇವು (ಡ್ರೂಪ್) ತೆಳುವಾದ ಚರ್ಮ, ತಿರುಳು, ಮದ್ಯದಲ್ಲಿ ಬೀಜವನ್ನು ಹೊಂದಿರುವ ಹಣ್ಣುಗಳನ್ನು ಹೊಂದಿದೆ. ಇದು ಆಯತಾಕಾರ, ಗೋಳಾಕಾರ, ಅಂಡಾಕಾರ ಅಥವಾ ದೀರ್ಘವೃತ್ತದ ಆಕಾರದಲ್ಲಿದ್ದು ಹಸಿರು, ಹಳದಿ, ಕಿತ್ತಳೆ ಅಥವಾ ಕೆಂಪು ಬಣ್ಣವನ್ನು ಹೊಂದಿರುತ್ತದೆ, ಹಾಗೂ ತಿರುಳಿರುವ ಮೆಸೊಕಾರ್ಪ್ (ಹಣ್ಣಿನ ಪೆರಿಕಾರ್ಪ್‌ನ ಮಧ್ಯದ ಪದರ) , ಖಾದ್ಯ, ಆಮ್ಲೀಯ, ನಾರಿನಂತಹ ಮ್ಯಾಟ್ರಿಕ್ಸ್ (ಸಸ್ಯ ಕೋಶಗಳಲ್ಲಿನ ಅಂಗಾಂಶ) ನೊಂದಿಗೆ ಎಲುಬಿನಂತಹ ಎಂಡೋಕಾರ್ಪ್ (ಪೆರಿಕಾರ್ಪ್‌ನ ಒಳಗಿನ ಅಂಗಾಂಶ ಪದರ) ರಚನೆಯನ್ನು ಹೊಂದಿರುತ್ತದೆ.