ಕನ್ನಡದ ಹೆಸರು : | Jagalaganti mara, karemara ಜಗಳಗಂಟಿ ಮರ , ಕರೆ ಮರ |
ಸಾಮಾನ್ಯ ಹೆಸರು : | ಮೌಂಟೇನ್ ಪರ್ಸಿಮನ್, ಮೊಟ್ಟೆಲ್ಡ್ ಎಬೋನಿ |
ಕುಟುಂಬದ ಹೆಸರು : | ಎಬೆನೇಸಿ |
ವೈಜ್ಞಾನಿಕ ಹೆಸರು : | ಡಯೋಸ್ಪೈರೋಸ್ ಮೊಂಟಾನಾ ರಾಕ್ಸ್ಬ್. ಎಲ್. |
ಪ್ರಭೇದದ ಪ್ರಕಾರ: | ಸ್ಥಳೀಯ |
ಪ್ರಕೃತಿ ಶಾಸ್ತ್ರ : | ಪತನಶೀಲ |
ಸಂರಕ್ಷಣೆಯ ಸ್ಥಿತಿ : | ಕಡಿಮೆ ಕಾಳಜಿ |
ಹೂಬಿಡುವ ಅವಧಿ: | ಮಾರ್ಚ್ ನಿಂದ ಏಪ್ರಿಲ್ ವರೆಗೆ |
ಹಣ್ಣಾಗುವ ಅವಧಿ: | ಅಕ್ಟೋಬರ್ |
ಮೂಲ: | ಉಷ್ಣವಲಯದ ಏಷ್ಯಾ |
ಸಾಂಪ್ರದಾಯಿಕ ಔಷಧ ತಯಾರಿಕೆಯಲ್ಲಿ ವಿಶೇಷವಾಗಿ ಬಲಿಯದ (ಪಕ್ವವಾಗದ) ಹಣ್ಣುಗಳನ್ನು ಬಳಸಲಾಗುತ್ತದೆ. ಹೊಸತಾಗಿ ಬಂದ ಚಿಗುರುಗಳನ್ನು ಬೇಯಿಸಿ ತಿನ್ನುತ್ತಾರೆ.
ಇವು ಹೂವುಗಳಲ್ಲಿ ಕೇವಲ ಪುರುಷ ಸಂತಾನೋತ್ಪತ್ತಿ ರಚನೆಗಳು ಅಥವಾ ಹೆಣ್ಣು ಸಂತಾನೋತ್ಪತ್ತಿ ರಚನೆಗಳನ್ನು ಹೊಂದಿರುವ (ಡೈಯೋಸಿಯಸ್) 20 ಮೀ ಎತ್ತರದವರೆಗಿನ ಪತನಶೀಲ ಮರವಾಗಿದೆ. ತೊಗಟೆ ನಯವಾದ, ಬೂದು ಅಥವಾ ಹಳದಿ ಮಿಶ್ರಿತ ಬೂದು ಬಣ್ಣ,ಒಳಗೆ ಹಳದಿ, ಹೊರಗೆ ನೀರನ್ನು ಹೋಲುವ ದ್ರವವಿರುತ್ತದೆ. ಎಲೆಗಳು ಸರಳ, ಪರ್ಯಾಯ, ಅಂಡಾಕಾರ, ಅಂಡಾಕಾರದ-ಆಯತಾಕಾರ ಅಥವಾ ದೀರ್ಘವೃತ್ತದ-ಆಯತಾಕಾರದಲ್ಲಿರುತ್ತದೆ,ಇವು ಸಂಪೂರ್ಣ ಅಂಚು, ತುದಿ ಚೂಪಾದ, ಮೊನಚಾದ ಆದರೆ ತೀಕ್ಷ್ಣವಾಗಿ ಮೊನಚಾಗಿರದ ಅಥವಾ ಮೊಂಡಾದ ತುದಿಯು ಉದ್ದವಾದ ಬಿಂದುವಿನಲ್ಲಿ ಕೊನೆಗೊಳ್ಳುತ್ತದೆ. ಹೂವುಗಳು ಹಳದಿ, ಹಸಿರು ಅಥವಾ ಹಸಿರು ಮಿಶ್ರಿತ ಬಿಳಿ ಬಣ್ಣವನ್ನು ಹೊಂದಿದ್ದು ಏಕಲಿಂಗಿ ಆಗಿರುತ್ತದೆ. ಗಂಡು ಹೂವುಗಳು ಅಕ್ಷಾಕಂಕುಳಿನಲ್ಲಿರುವ ಛತ್ರಿಯಲ್ಲಿ(ಇದು ಒಂದು ಸಾಮಾನ್ಯ ಬಿಂದುವಿನಿಂದ ಹರಡುವ ಹಲವಾರು ಸಣ್ಣ ಹೂವಿನ ಕಾಂಡಗಳನ್ನು ಒಳಗೊಂಡಿರುತ್ತದೆ), ನಾಲ್ಕು ಸಂದುಗಳು ಅಥವಾ ಭಾಗಗಳನ್ನು ಒಳಗೊಂಡಿರುತ್ತದೆ. ಹೆಣ್ಣು ಹೂಗಳು ಒಂಟಿಯಾಗಿ, ಅಕ್ಷಾಕಂಕುಳಿನಲ್ಲಿದ್ದು, ನಾಲ್ಕು ಸಂದುಗಳು ಅಥವಾ ಭಾಗಗಳನ್ನು ಒಳಗೊಂಡಿರುತ್ತದೆ. ಇವುಗಳ ಹಣ್ಣು ಬೆರ್ರಿ (ಅನೇಕ ಬೀಜಗಳನ್ನು ಹೊಂದಿರುವ ಸರಳ ತಿರುಳಿರುವ ಹಣ್ಣು) ಆಗಿದ್ದು, 1.5 ರಿಂದ 2 ಸೆಂ.ಮೀ ಅಗಲ, ಅಂಡಾಕಾರದಿಂದ ವಿಪರ್ಯಸ್ತ ಶಂಕುರೂಪವಾಗಿದ್ದು, ಹಳದಿ ಬಣ್ಣದಿಂದ ಕಿತ್ತಳೆ ಬಣ್ಣವನ್ನು ಹೊಂದಿದ್ದು, ಹೊಳಪನ್ನು ಹೊಂದಿರುತ್ತದೆ. ಇವು ಪುಷ್ಪಪಾತ್ರೆ ಎಲೆಗಳುಳ್ಳದ್ದು, ಸ್ವಲ್ಪ ದೊಡ್ಡದಾಗಿದೆ; ಇವು ಒರಟಾದ, ಕಪ್ಪು ಬಣ್ಣದ, 3 ರಿಂದ 6 ಬೀಜಗಳನ್ನು ಹೊಂದಿರುತ್ತವೆ.