ಕೊನೊಕಾರ್ಪಸ್ ಲ್ಯಾನ್ಸಿಫೋಲಿಯಸ್ ಇಂಗ್ಲೇ.

ಕನ್ನಡದ ಹೆಸರು : -
ಸಾಮಾನ್ಯ ಹೆಸರು : ಲ್ಯಾನ್ಸ್‌ಲೀಫ್ ಬಟನ್‌ವುಡ್
ಕುಟುಂಬದ ಹೆಸರು : ಕಾಂಬ್ರೆಟೇಸಿ
ವೈಜ್ಞಾನಿಕ ಹೆಸರು : ಕೊನೊಕಾರ್ಪಸ್ ಲ್ಯಾನ್ಸಿಫೋಲಿಯಸ್ ಇಂಗ್ಲೇ.
ಪ್ರಭೇದದ ಪ್ರಕಾರ: ವಿದೇಶಿ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ಮುಂದಿನ ದಿನಗಳಲ್ಲಿ ಅಳಿವಿನಂಚಿನಲ್ಲಿರುವ
ಹೂಬಿಡುವ ಅವಧಿ: -
ಹಣ್ಣಾಗುವ ಅವಧಿ: -
ಮೂಲ: ಸೊಮಾಲಿಯಾ

ಉಪಯೋಗಗಳು

ಮರದ ಕಟ್ಟಿಗೆಗಳು ಗಟ್ಟಿಯಾಗಿರುತ್ತದೆ ಮತ್ತು ಇವು ಕಲ್ಲಿದ್ದಲಿಗೆ ಸೂಕ್ತವಾಗಿದೆ. ಮರದಿಂದ ತೆಗೆದ ಅಂಟನ್ನು ಎದೆ ಮತ್ತು ಕರುಳಿನ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.

ವಿವರಣೆ

ಇವು ಸುಮಾರು 10 ಮೀ ಎತ್ತರ ಬೆಳೆಯುವ ನಿತ್ಯಹರಿದ್ವರ್ಣ ಮರವಾಗಿದೆ. ಇವು ಬಿರುಕು ಬಿಟ್ಟ ತೊಗಟೆಯನ್ನು ಹೊಂದಿರುತ್ತವೆ. ಎಲೆಗಳು ಈಟಿ ತಲೆಯ ಆಕಾರ, ರೋಮ ರಹಿತವಾದ, ವಿಶಾಲವಾಗಿ ಕಿರಿದಾಗಿ ಮೊನಚಾದ ತಳ, ಮೊನಚಾದ ತುದಿಯನ್ನು ಹೊಂದಿರುತ್ತದೆ. ಹೂಗೊಂಚಲು ಗೋಳಾಕಾರದ ಅಥವಾ ಸ್ವಲ್ಪ ಉದ್ದವಾದ ತಲೆಯನ್ನು ಹೊಂದಿರುತ್ತದೆ. ಹೂವುಗಳು ಹಳದಿ-ಹಸಿರು ಬಣ್ಣದಿಂದ ಕೂಡಿದೆ, ಮತ್ತು ಸ್ವಲ್ಪ ಪರಿಮಳಯುಕ್ತವಾಗಿರುತ್ತವೆ. ಹಣ್ಣುಗಳು ದುಂಡಾದ, ಹಸಿರುಬಣ್ಣದ ತಲೆ, ಸಣ್ಣ ಮೃದು ಕೂದಲಿನೊಂದಿಗೆ, ಕೋನ್ ತರಹದ, ಸಣ್ಣ, ಗಟ್ಟಿಯಾದ ಬೀಜಗಳನ್ನು ಹೊಂದಿರುತ್ತವೆ.