ಕನ್ನಡದ ಹೆಸರು : | - |
ಸಾಮಾನ್ಯ ಹೆಸರು : | ಕೌನ್ಸಿಲ್ ಟ್ರೀ, ಲಾಫ್ಟಿ ಫಿಗ್ |
ಕುಟುಂಬದ ಹೆಸರು : | ಮೊರೇಸಿ |
ವೈಜ್ಞಾನಿಕ ಹೆಸರು : | ಫಿಕಸ್ ಅಲ್ಟಿಸಿಮಾ ಬ್ಲೂಮ್. |
ಪ್ರಭೇದದ ಪ್ರಕಾರ: | ವಿದೇಶಿ |
ಪ್ರಕೃತಿ ಶಾಸ್ತ್ರ : | ನಿತ್ಯಹರಿದ್ವರ್ಣ |
ಸಂರಕ್ಷಣೆಯ ಸ್ಥಿತಿ : | ಕಡಿಮೆ ಕಾಳಜಿ |
ಹೂಬಿಡುವ ಅವಧಿ: | |
ಹಣ್ಣಾಗುವ ಅವಧಿ: | |
ಮೂಲ: | ಆಗ್ನೇಯ ಏಷ್ಯಾ |
ಉತ್ತರ ಥೈಲ್ಯಾಂಡ್‌ನಲ್ಲಿ ಸ್ಥಳೀಯ ಅರಣ್ಯವನ್ನು ಮೊದಲಿನ ಸ್ಥಿತಿಗೆ ತರಲು ಮರು ಅರಣ್ಯೀಕರಣ ಯೋಜನೆಗಳಲ್ಲಿ ಈ ಮರವನ್ನು ಮೊದಲನೆಯ ಪ್ರಭೇದವಾಗಿ ನೆಡಲಾಗುತ್ತದೆ. ಇದರ ನಾರಿನ ತೊಗಟೆಯನ್ನು ಹಗ್ಗವನ್ನು ಮಾಡಲು ಬಳಸಲಾಗುತ್ತದೆ.
25 ರಿಂದ 30 ಮೀಟರ್ ಎತ್ತರವಿರುವ, ನೆಲದ ಮೇಲೆ ಬೇರುಗಳನ್ನು ಹೊಂದಿರುವ, ದೊಡ್ಡ ಅರೆ ನಿತ್ಯಹರಿದ್ವರ್ಣ ಮರವಾಗಿದೆ. ಇದು ಒರಟಾದ ಬೂದು ತೊಗಟೆಯನ್ನು ಹೊಂದಿರುತ್ತದೆ. ಎಲೆಗಳು ಸರಳ, ವಿಶಾಲ ಅಂಡಾಕಾರದದಿಂದ ವಿಶಾಲವಾದ ಅಂಡಾಕಾರ-ಅಂಡವೃತ್ತ ಆಕಾರದಲ್ಲಿದ್ದು, ಮೇಲೆ ರೋಮರಹಿತವಾಗಿರುತ್ತದೆ, ತಳವು ಹೊಳಪುಳ್ಳ, ಚರ್ಮದ ವಿನ್ಯಾಸವನ್ನು ಹೊಂದಿರುತ್ತದೆ, ತಳವು ಅಗಲವಾಗಿ ಮೊನಚಾಗಿ, ತುದಿ ಮೊಂಡಾಗಿ, ಸಂಪೂರ್ಣ ಅಂಚನ್ನು ಹೊಂದಿರುತ್ತದೆ. ಇವು ಒಳಗಿನ ಮೇಲ್ಮೈಯಲ್ಲಿ ಬಹು ಅಂಡಾಶಯಗಳೊಂದಿಗೆ ವಿಸ್ತರಿಸಿದ, ತಿರುಳಿರುವ, ಟೊಳ್ಳಾದ ರೆಸೆಪ್ಟಾಕಲ್‌ನಿಂದ ರೂಪುಗೊಂಡಿರುವ (ಸೈಕೋನಿಯಮ್) ಪುಷ್ಪಮಂಜರಿಯನ್ನು ಹೊಂದಿರುತ್ತದೆ. ಎಲೆಗಳಿಂದ ತುಂಬಿದ ಕಿರುಕೊಂಬೆಗಳ ಮೇಲಿನ ಅಕ್ಷಾಕಂಕುಳಿನ ಮೊಗ್ಗುಗಳು,ಜೋಡಿಯಾಗಿ, ಪಕ್ವವಾದಾಗ ಕೆಂಪು ಅಥವಾ ಹಳದಿ ಬಣ್ಣವನ್ನು ಹೊಂದಿದ್ದು, ಧೀರ್ಘವೃತ್ತ-ಅಂಡಾಕಾರವಾಗಿರುತ್ತದೆ. ಹೂಗೊಂಚಲ ಅಡಿಯಲ್ಲಿರುವ ತೊಟ್ಟೆಲೆಗಳು ಹುಡ್‌ನಂತೆ, ಎಳೆಯದಾದ ಮೊಗ್ಗುಗಳಿಂದ ಸುತ್ತುವರಿದಿದ್ದು, ಸುಲಭವಾಗಿ ಬೇರ್ಪಡುವ, ವಿಶಾಲವಾಗಿ ಮೊಂಡಾದ ತುದಿಯನ್ನು ಹೊಂದಿರುತ್ತದೆ, ಇದರ ಗುರುತುಗಳು ಉಂಗುರದಂತಿರುತ್ತದೆ. ಒಂದೇ ಮೊಗ್ಗಿನ ಒಳಗೆ ಗಂಡು, ಗಾಲ್ (ಸಣ್ಣ ಶೈಲಿಯ ಹೂವುಗಳು) ಮತ್ತು ಹೆಣ್ಣು ಹೂವುಗಳು ಇರುತ್ತವೆ. ಇವು ಬೀಜವನ್ನು ಬಿಡುಗಡೆ ಮಾಡಲು ತೆರೆದುಕೊಳ್ಳದ ಸಣ್ಣ, ಒಣ ಮತ್ತು ಸಣ್ಣ ವಾರ್ಟಿ ಪ್ರೊಜೆಕ್ಷನ್‌ಗಳಿಂದ ಮುಚ್ಚಿದ ಮೇಲ್ಮೈಯನ್ನು ಹೊಂದಿರುವ ಹಣ್ಣಗಳನ್ನು ಹೊಂದಿರುತ್ತದೆ.