ಅಕೇಶಿಯ ಫೆರುಜಿನಿಯಾ ಡಿಸಿ.

ಕನ್ನಡದ ಹೆಸರು : ಬನ್ನಿ ಮರ, ಕಿರಿ ಬನ್ನಿ
ಸಾಮಾನ್ಯ ಹೆಸರು : ರಸ್ಟಿ ಅಕೇಶಿಯ
ಕುಟುಂಬದ ಹೆಸರು : ಫ್ಯಾಬೇಸಿ
ವೈಜ್ಞಾನಿಕ ಹೆಸರು : ಅಕೇಶಿಯ ಫೆರುಜಿನಿಯಾ ಡಿಸಿ.
ಪ್ರಭೇದದ ಪ್ರಕಾರ: ಸ್ಥಳೀಯ
ಪ್ರಕೃತಿ ಶಾಸ್ತ್ರ : ಪತನಶೀಲ
ಸಂರಕ್ಷಣೆಯ ಸ್ಥಿತಿ : ಬೇಧ್ಯ, ವಲ್ನರಬಲ್
ಹೂಬಿಡುವ ಅವಧಿ: ಮಾರ್ಚ್ - ಮೇ
ಹಣ್ಣಾಗುವ ಅವಧಿ: ಜೂನ್ - ಆಗಸ್ಟ್
ಮೂಲ: ಭಾರತ, ಶ್ರೀಲಂಕಾ

ಉಪಯೋಗಗಳು

ಶುಂಠಿಯೊಂದಿಗೆ ಸೇರಿದ ತೊಗಟೆಯ ಕಷಾಯವನ್ನು ಹೆಚ್ಚಾಗಿ ಹಲ್ಲುಗಳಿಗೆ ಸ್ರಾವನಿರೋಧಕವಾಗಿ (ಆಸ್ಟ್ರಿಂಜೆಂಟಾಗಿ) ಬಳಸಲಾಗುತ್ತದೆ. ಮರವನ್ನು ಹೆಚ್ಚಾಗಿ ಬಂಡಿ ಚಕ್ರಗಳು, ಕಂಬಗಳು, ತೊಲೆಗಳು ಮತ್ತು ಕೃಷಿ ಉಪಕರಣಗಳನ್ನು ಮಾಡಲು ಬಳಸಲಾಗುತ್ತದೆ

ವಿವರಣೆ

. 20 ಮೀ ಎತ್ತರದವರೆಗೆ ಬೆಳೆಯುವ. ಮಧ್ಯಮ ಗಾತ್ರದ ಮರ. ಡಬಲ್- ಕಾಂಪೌಂಡ್ ಎಲೆಗಳು ಆಲ್ಟರ್ನೇಟಾಗಿ(ಪರ್ಯಾಯವಾಗಿ) ಜೋಡಿಸಲ್ಪಟ್ಟಿರುತ್ತವೆ, ಅವಳಿಮುಳ್ಳುಗಳು ಹಾಗೂ ಒಳಗೆ ವೃಂತಪರ್ಣಗಳಿರುತ್ತವೆ. ಇದರ ಎಲೆಗಳು ಸ್ವಲ್ಪ ಬಾಗಿರುತ್ತವೆ. ಮಸುಕಾದ ಹಳದಿ ಬಣ್ಣದ ಹೂವುಗಳು ಹಲವಾರು ಸಡಿಲವಾದ ಹೂಗೊನೆಗಳಾಗಿರುತ್ತವೆ, ಸಾಮಾನ್ಯವಾಗಿ ಅವುಗಳು ಕೊಂಬೆಯ ಕೊನೆಯಲ್ಲಿ ಹೂಗೊಂಚಲಾಗಿರುತ್ತವೆ. ಬೀಜಕೋಶಗಳು ರೋಮರಹಿತವಾಗಿರುತ್ತವೆ, ಒಣ ಸಿಹಿಯಾದ ತಿರುಳನ್ನು ಹೊಂದಿರುತ್ತವೆ, ಗಾಢ ಕಂದ ಬಣ್ಣದ ಇವು ಸೂಕ್ಷ್ಮವಾಗಿ ಬಿರಿದಂತಿದ್ದು 3-7 ಬೀಜಗಳನ್ನು ಹೊಂದಿರುತ್ತವೆ. ಬೀಜಗಳು ಅಂಡಾಕಾರ, ಆಯತಾಕಾರದಲ್ಲಿದ್ದು ಚಪ್ಪಟೆಯಾಗಿರುತ್ತವೆ, ಎದ್ದುಕಾಣುವಂತಹ ತೊಟ್ಟನ್ನು ಹೊಂದಿರುತ್ತವೆ, ಹಸಿರು ಬಣ್ಣದಿಂದ ಕಂದು ಬಣ್ಣದಲ್ಲಿರುತ್ತವೆ.