20 ಆರ್ಟೊಕಾರ್ಪಸ್ ಹೆಟೆರೊಫಿಲ್ಲಸ್ ಲ್ಯಾಮ್

ಕನ್ನಡದ ಹೆಸರು : ಹಲಸಿನ ಮರ
ಸಾಮಾನ್ಯ ಹೆಸರು : ಜ್ಯಾಕ್ ಟ್ರೀ
ಕುಟುಂಬದ ಹೆಸರು : ಮೊರೇಸಿ
ವೈಜ್ಞಾನಿಕ ಹೆಸರು : 20 ಆರ್ಟೊಕಾರ್ಪಸ್ ಹೆಟೆರೊಫಿಲ್ಲಸ್ ಲ್ಯಾಮ್
ಪ್ರಭೇದದ ಪ್ರಕಾರ: ಸ್ಥಳೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ: ಮಾರ್ಚ್ - ಏಪ್ರಿಲ್
ಹಣ್ಣಾಗುವ ಅವಧಿ: ಜೂನ್ - ಆಗಸ್ಟ್
ಮೂಲ: ಭಾರತದ ಪಶ್ಚಿಮ ಘಟ್ಟಗಳು

ಉಪಯೋಗಗಳು

.ಉತ್ತಮ ಗೆರೆವಿನ್ಯಾಸವಿರುವ ಈ ಚಿನ್ನದ ಹಳದಿ ಬಣ್ಣದ ಮರವನ್ನು ಪೀಠೋಪಕರಣಗಳನ್ನು ನಿರ್ಮಿಸಲು ಮತ್ತು ಮನೆ ನಿರ್ಮಾಣಕ್ಕೆ ಬಳಸಲಾಗುತ್ತದೆ. ಇದು ಗೆದ್ದಲು-ನಿರೋಧಕವಾಗಿದೆ ಮತ್ತು ಪೀಠೋಪಕರಣಗಳನ್ನು ತಯಾರಿಸಲು ತೇಗಕ್ಕಿಂತಲೂ ಉತ್ತಮವಾದ ಮರವಾಗಿದೆ. ಈ ಮರವನ್ನು ಸಂಗೀತದ ಉಪಕರಣಗಳನ್ನು ತಯಾರಿಸಲು ಸಹ ಬಳಸಲಾಗುತ್ತದೆ. ಎಳೆಯ ಹಣ್ಣಿನ ತಿರುಳನ್ನು ತರಕಾರಿಯಾಗಿ ಬೇಯಿಸಲಾಗುತ್ತದೆ, ಉಪ್ಪಿನಕಾಯಿ ಮಾಡಲಾಗುತ್ತದೆ ಅಥವಾ ಉಪ್ಪುನೀರಿಗೆ ಹಾಕಿ ಡಬ್ಬಿಯಲ್ಲಿ ಶೇಖರಿಸಲಾಗುತ್ತದೆ ಅಥವಾ ಸಾರಿನಲ್ಲಿ ಬೇಯಿಸಲಾಗುತ್ತದೆ. ಮಾಗಿದ ಹಣ್ಣಿನ ತಿರುಳನ್ನು ಹಾಗೆಯೇ ತಿನ್ನಲಾಗುತ್ತದೆ ಅಥವಾ ವಿವಿಧ ಸ್ಥಳೀಯ ಭಕ್ಷ್ಯಗಳಾಗಿ ತಯಾರಿಸಲಾಗುತ್ತದೆ. ರಸವು ಆಂಟಿ ಸಿಫಿಲಿಟಿಕ್ ಆಗಿದೆ ಮತ್ತು ಜಂತುಹುಳುಗಳನ್ನು ನಿವಾರಿಸುತ್ತದೆ.

ವಿವರಣೆ

ನಿತ್ಯಹರಿದ್ವರ್ಣ ಮರ, 10 - 20 ಮೀ ಎತ್ತರ, ಕಪ್ಪು-ಬೂದು ಬಣ್ಣದ ತೊಗಟೆ. ಎಲ್ಲಾ ಭಾಗಗಳು ಜಿಗುಟಾದ, ಬಿಳಿ ಲ್ಯಾಟೆಕ್ಸ್ ಅನ್ನು ಹೊಂದಿರುತ್ತವೆ.ಎಲೆಗಳು ಸರಳವಾಗಿದ್ದು, ಸುರುಳಿಯಾಗಿ ಜೋಡಿಸಲ್ಪಟ್ಟಿರುತ್ತವೆ, ಆಕಾರ ಎಲಿಪ್ಟಿಕ್ ನಿಂದ ಒಬೊವೇಟ್ ಆಗಿದ್ದು, ಸಸಿಗಳಲ್ಲಿ ಹಾಲೆಗಳಿರುವ ಎಲೆಗಳಿರುತ್ತವೆ, ಎಲೆಗಳು ಚರ್ಮದಂತಿರುತ್ತದೆ, ಬುಡ ಬೆಣೆಯಾಕಾರದಲ್ಲಿದ್ದು , ತುದಿ ಸಂಪೂರ್ಣವಾಗಿ ಅಕ್ಯೂಟ್ – ಅಬ್ಟ್ಯೂಸ್ ಆಗಿರುತ್ತದೆ. ಗಂಡು ಪುಷ್ಪಮಂಜರಿಗಳು ಕವಲುಮೂಲೆಯ ಅಥವಾ ತುದಿಯಲ್ಲಿನ ದಂಡೆಹೂಗಳಾಗಿರುತ್ತವೆ, ಹೆಣ್ಣು ಪುಷ್ಪಮಂಜರಿಯ ದಂಡೆಹೂಗಳು, ಮುಖ್ಯ ಕಾಂಡ ಮತ್ತು ಹಳೆಯ ಕೊಂಬೆಗಳ ಮೇಲೆ ಹುಟ್ಟುತ್ತವೆ, ಏಕಲಿಂಗಿ ಹೂಗಳು, ತುಂಬಾ ಚಿಕ್ಕದಾಗಿದ್ದು, ಹಳದಿ ಮಿಶ್ರಿತ ಹಸಿರು ಬಣ್ಣದಲ್ಲಿರುತ್ತವೆ ಮತ್ತು ಪುಷ್ಪಗುಚ್ಚ ಕೋಶದಂತಹ ತೊಟ್ಟೆಲೆಗಳಿಂದ ಸುತ್ತುವರಿದಿರುತ್ತವೆ. ಗೋಳಾಕಾರದ ಹಣ್ಣಿನ ಮೇಲೆ ಗುಬುಟುಗಳಿರುತ್ತವೆ, ಇದು ಹಳದಿಯಿಂದ ಕಿತ್ತಳೆ ಬಣ್ಣದ ತಿರುಳಿರುವ ಒಂದು ಸಂಯುಕ್ತ ಫಲವಾಗಿರುತ್ತದೆ. ಬೀಜಗಳು ಹೊಳೆಯುತ್ತವೆ.