ಕನ್ನಡದ ಹೆಸರು : | ಎಸಳುಹುಳಿ, ವಾಟೆಹುಳಿ, ಕಂಚಿಸಿಂಬು |
ಸಾಮಾನ್ಯ ಹೆಸರು : | ಮಂಕಿ ಜ್ಯಾಕ್ ಫ್ರೂಟ್ ಟ್ರೀ |
ಕುಟುಂಬದ ಹೆಸರು : | ಮೊರೇಸಿ |
ವೈಜ್ಞಾನಿಕ ಹೆಸರು : | ಆರ್ಟೊಕಾರ್ಪಸ್ ಲಕುಚಾ ಬುಚ್.-ಹ್ಯಾಮ್ |
ಪ್ರಭೇದದ ಪ್ರಕಾರ: | ಸ್ಥಳೀಯ |
ಪ್ರಕೃತಿ ಶಾಸ್ತ್ರ : | ಪತನಶೀಲ |
ಸಂರಕ್ಷಣೆಯ ಸ್ಥಿತಿ : | ತಿಳಿದಿಲ್ಲ |
ಹೂಬಿಡುವ ಅವಧಿ: | ಫೆಬ್ರವರಿ - ಮೇ |
ಹಣ್ಣಾಗುವ ಅವಧಿ: | ಜುಲೈ - ಆಗಸ್ಟ್ |
ಮೂಲ: | ಭಾರತದ ಉಪಖಂಡ, ಆಗ್ನೇಯ ಏಷ್ಯಾ |
. ತೊಗಟೆಯ ರಸ ಮತ್ತು ರಸವನ್ನು ಕೀವುಗುಳ್ಳೆ, ಮೊಡವೆ, ಕಡಿತ ಮತ್ತು ಗಾಯಗಳ ಮೇಲೆ ಹಚ್ಚಲು ಬಳಸಲಾಗುತ್ತದೆ. ಇದರ ಬೇರು ಸ್ರಾವನಿರೋಧಕವಾಗಿದೆ ಮತ್ತು ಇದನ್ನು ವೀರೇಚಕ(ಪರ್ಗೆಟೀವ್) ವನ್ನಾಗಿ ಬಳಸಲಾಗುತ್ತದೆ.. ನೆನೆಸಿ ಮೆದು ಮಾಡಿದ ತೊಗಟೆಯನ್ನು ಚರ್ಮದ ಕಾಯಿಲೆಗಳಿಗೆ ಚಿಕಿತ್ಸೆಯಲ್ಲಿ ಪೌಲ್ಟೀಸ್ ಆಗಿ ಬಳಸಲಾಗುತ್ತದೆ.
ದೊಡ್ಡ ಪತನಶೀಲ ಮರ, ಎತ್ತರ 10-15 ಮೀ. ಎಲೆಗಳು ಸರಳವಾಗಿರುತ್ತವೆ, ಅಂಡಾಕಾರದಲ್ಲಿರುತ್ತವೆ, ಕೆಲವೊಮ್ಮೆ ಗರಿಯ ರೀತಿ ಹಾಲೆಗಳಿರುತ್ತವೆ, ಹಳದಿ ಬಿರುಗೂದಲುಗಳಿಂದ ಒತ್ತಾಗಿ ಮುಚ್ಚಲ್ಪಟ್ಟಿರುತ್ತವೆ, ತಳದ ಭಾಗ ಹೆಚ್ಚಾಗಿ ಬೆಣೆಯಾಕಾರದಲ್ಲಿರುತ್ತದೆ, ತುದಿ ಚೂಪಾಗಿದ್ದು, ಅಂಚು ಸಂಪೂರ್ಣವಾಗಿರುತ್ತದೆ. ಅಂಡಾಕಾರದ ಗಂಡು ಪುಷ್ಪ ಮಂಜರಿಗಳು ಕಿತ್ತಳೆ-ಹಳದಿ ಬಣ್ಣದಲ್ಲಿರುತ್ತವೆ. ಹೆಣ್ಣು ಪುಷ್ಪಮಂಜರಿ ಸ್ವಲ್ಪ ಉದ್ದವಾಗಿರುತ್ತದೆ. ಹಣ್ಣು 7 ಸೆಂ.ವ್ಯಾಸ, ಗೋಳಾಕಾರದ ಹಳದಿ ಬಣ್ಣದ ಹಣ್ಣು.