ಅವೆರೊವಾ ಕ್ಯಾರಂಬೋಲಾ ಎಲ್.

ಕನ್ನಡದ ಹೆಸರು : ಕಪರಾಖಿ ಮರ
ಸಾಮಾನ್ಯ ಹೆಸರು : ಕ್ಯಾರಂಬೋಲಾ, ಸ್ಟಾರ್ ಫ್ರೂಟ್ ಟ್ರೀ
ಕುಟುಂಬದ ಹೆಸರು : ಆಕ್ಸಾಲಿಡೇಸಿ
ವೈಜ್ಞಾನಿಕ ಹೆಸರು : ಅವೆರೊವಾ ಕ್ಯಾರಂಬೋಲಾ ಎಲ್.
ಪ್ರಭೇದದ ಪ್ರಕಾರ: ಸ್ಥಳೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ: ಜುಲೈ - ಆಗಸ್ಟ್
ಹಣ್ಣಾಗುವ ಅವಧಿ: ಅಕ್ಟೋಬರ್ - ಜನವರಿ
ಮೂಲ: ಭಾರತ, ಇಂಡೋನೇಷ್ಯಾ, ಶ್ರೀಲಂಕಾ

ಉಪಯೋಗಗಳು

ನಾರು ಬಟ್ಟೆಯ ಮೇಲಿನ ಕಲೆಗಳನ್ನು ತೆಗೆದುಹಾಕಲು ಸ್ಟಾರ್ಫ್ರೂಟ್ ನ ರಸವನ್ನು ಬಳಸಬಹುದು. ಅದರಲ್ಲಿರುವ ಆಕ್ಸಾಲಿಕ್ ಆಮ್ಲದ ಕಾರಣದಿಂದಾಗಿ ಹಣ್ಣು ವಿರೇಚಕವಾಗಿಯೂ ಉಪಯೋಗವಾಗುತ್ತದೆ. ಸಾಂಪ್ರದಾಯಿಕ ಔಷಧಿಗಳಲ್ಲಿ ಇದನ್ನು ಚರ್ಮದ ಕಾಯಿಲೆಗಳು ಮತ್ತು ಜ್ವರಗಳಿಗೆ ಬಳಸಲಾಗುತ್ತದೆ. ಚೀನೀ ಸಮುದಾಯಗಳಲ್ಲಿ ಇದಕ್ಕೆ ಬಹಳ ಪ್ರಾಮುಖ್ಯತೆ ಇದೆ,ಏಕೆಂದರೆ ಇದು ಅಧಿಕ ರಕ್ತದೊತ್ತಡಕ್ಕೆ ತುಂಬಾ ಪರಿಣಾಮಕಾರಿ. ಜೊತೆಗೆ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಹ ಕಡಿಮೆ ಮಾಡುತ್ತದೆ ಎಂದು ಹೇಳಲಾಗುವುದರಿಂದ ಇದು ಮಧುಮೇಹಿಗಳಿಗೂ ಸಹಾಯ ಮಾಡುತ್ತದೆ. ಹೂವುಗಳನ್ನು ಕೆಮ್ಮು ನಿವಾರಿಸಲು ಬಳಸಲಾಗುತ್ತದೆ. ಎಲೆಗಳನ್ನು ಸಂಧಿವಾತದ ಚಿಕಿತ್ಸೆಗೆ ಬಳಸಲಾಗುತ್ತದೆ. ಬೀಜ ಎಮ್ಮೆನಾಗೋಗ್, ಕ್ಷೀರಚೋದಕ ಮತ್ತು ಗರ್ಭಸ್ರಾವಕವಾಗಿದೆ. ಬೀಜದ ಪುಡಿ ಅಸ್ತಮಾ, ಉದರಶೂಲೆ ಮತ್ತು ಕಾಮಾಲೆಯ ಚಿಕಿತ್ಸೆಯಲ್ಲಿ ಉತ್ತಮ ನೋವು ಶಾಮಕವಾಗಿ ಕೆಲಸ ಮಾಡುತ್ತದೆ.

ವಿವರಣೆ

. ಚಿಕ್ಕ, ನಿತ್ಯಹರಿದ್ವರ್ಣ ಮರ, ಎತ್ತರ 5-12 ಮೀ. ಎಲೆಗಳು ಕಾಂಪೌಂಡ್ (ಭಿನ್ನ ಪತ್ರಗಳು) , ಇಂಪಾರಿಪಿನ್ನೇಟ್, ಆಲ್ಟರ್ನೇಟ್ ಚಿಗುರೆಲೆಗಳು ಒವೇಟ್-ಎಲಿಪ್ಟಿಕ್ ಆಗಿದ್ದು, ಮೃದುತುಪ್ಪಳದಿಂದ ಕೂಡಿರುತ್ತವೆ, ದುಂಡಾದ ಅಥವಾ ಮೊಟಕುಗೊಂಡ ಬುಡ,ಚೂಪಾದ ತುದಿ ಇರುತ್ತದೆ. ಪುಷ್ಪಮಂಜರಿಗಳು ಕವಲು ಮೂಲೆಯಲ್ಲಿ ಅಥವಾ ರಂಬೆಯಿಂದ ಹೊರಟ ಹೂ ಗೊಂಚಲು ಅಥವಾ ಸಂಯುಕ್ತ ಪುಷ್ಪಗಳಾಗಿರುತ್ತವೆ. ನೀಲಕದಿಂದ ನೇರಳೆ ಬಣ್ಣದ, ಚಿಕ್ಕದಾದ ಹಲವಾರು ಹೂವುಗಳಿರುತ್ತವೆ. ದಳಗಳು 8-9 ಮಿಮೀ ಉದ್ದವಿರುತ್ತವೆ. ಹಣ್ಣು ಒಂದು ಬೆರ್ರಿಯಾಗಿದ್ದು, ಸ್ವಲ್ಪ ಆಯತಾಕಾರದಲ್ಲಿರುತ್ತದೆ. 5 ಏಣುಗೆರೆಗಳಿರುವ (ರಿಡ್ಜ್ಡ್) ಇದು ಮಾಗಿದಾಗ ಹಳದಿಯಾಗುತ್ತದೆ.