ಅಜಾಡಿರಚ್ಟಾ ಇಂಡಿಕಾ A. ಜಸ್.

ಕನ್ನಡದ ಹೆಸರು : ಬೇವಿನ ಮರ
ಸಾಮಾನ್ಯ ಹೆಸರು : ನೀಮ್ ಟ್ರೀ
ಕುಟುಂಬದ ಹೆಸರು : ಮೆಲಿಯೇಸಿ
ವೈಜ್ಞಾನಿಕ ಹೆಸರು : ಅಜಾಡಿರಚ್ಟಾ ಇಂಡಿಕಾ A. ಜಸ್.
ಪ್ರಭೇದದ ಪ್ರಕಾರ: ಸ್ಥಳೀಯ
ಪ್ರಕೃತಿ ಶಾಸ್ತ್ರ : ಪತನಶೀಲ
ಸಂರಕ್ಷಣೆಯ ಸ್ಥಿತಿ : ಕನಿಷ್ಠ ಕಾಳಜಿ
ಹೂಬಿಡುವ ಅವಧಿ: ಮಾರ್ಚ್ - ಏಪ್ರಿಲ್
ಹಣ್ಣಾಗುವ ಅವಧಿ: ಜುಲೈ - ಆಗಸ್ಟ್
ಮೂಲ: ಆಫ್ರಿಕಾ, ಭಾರತೀಯ ಉಪಖಂಡ

ಉಪಯೋಗಗಳು

.ಇದು ಕೀಟಗಳು ಬಟ್ಟೆಗಳನ್ನು ತಿನ್ನುವುದನ್ನು ತಪ್ಪಿಸುವುದರಿಂದ,ಈ ಬೇವಿನ ಎಲೆಗಳನ್ನು ಒಣಗಿಸಿ ಕಪಾಟುಗಳಲ್ಲಿ ಇರಿಸಲಾಗುತ್ತದೆ. ಇದು ಆಂಟಿ- ಫೀಡೆಂಟ್ ಆಗಿದೆ , ಆಹಾರದ ಬಗ್ಗೆ ಅಸಹ್ಯ ಮೂಡುವಂತೆ ಮಾಡುತ್ತದೆ ಮತ್ತು ಕೀಟಗಳು ಗಿಡಗಳ ಮೇಲೆ ಮೊಟ್ಟೆ ಇಡುವುದರ ವಿರುದ್ಧ ಕಾರ್ಯನಿರ್ವಹಿಸುತ್ತದೆ ಮತ್ತು ಈ ರೀತಿಯಾಗಿ ಬೆಳೆ ಹಾನಿಯಾಗದಂತೆ ರಕ್ಷಿಸುತ್ತದೆ. ಪರಿಸರ ಸ್ನೇಹಿ ಹಾಗೂ ಅಗ್ಗದ ವಸ್ತುವಾಗಿರುವ ಬೇವಿನ ಎಣ್ಣೆ ಗೆದ್ದಲಿನ ದಾಳಿಯನ್ನು ತಡೆಯುತ್ತದೆ ಎಂದು ಸಾಬೀತಾಗಿದೆ.

ವಿವರಣೆ

.15-20 ಮೀ ನಷ್ಟು ಎತ್ತರವಿರುವ, ನಿತ್ಯಹರಿದ್ವರ್ಣ ಮರ . ಕಿರೀಟವು ದಟ್ಟವಾಗಿರುತ್ತದೆ ಮತ್ತು ದುಂಡಾಗಿರುತ್ತದೆ. ಎಲೆಗಳು ಕಾಂಪೌಂಡ್, ಇಂಪಾರಿಪಿನ್ನೇಟ್, ಎಲೆಯ ತಳಭಾಗ ಆಲ್ಟರ್ನೇಟ್ ,ಪುಲ್ವಿನಸ್ , ಸಾಧಾರಣದಿಂದ ಕಡು ಹಸಿರು, ಚಿಗುರೆಲೆಗಳು ಓವೇಟ್-ಲ್ಯಾನ್ಸಿಲೇಟ್ , ರೋಮರಹಿತವಾಗಿರುತ್ತವೆ, ಬುಡ ಓರೆಯಾಗಿರುತ್ತವೆ, ತುದಿ ಚೂಪಾಗಿರುತ್ತವೆ, ಅಂಚು ಗರಗಸದ ಹಲ್ಲಿನಂತಿರುತ್ತದೆ. ಪುಷ್ಪಮಂಜರಿ ಅಕ್ಷಾಕಂಕುಳಿನ ಒಂದು ಹೂಗೊಂಚಲು. ಮಧುರ ಪರಿಮಳವಿರುವ ಇದರ ಬಿಳಿ ಹೂಗಳು ದ್ವಿಲಿಂಗಿಗಳಾಗಿರುತ್ತವೆ, 8 ಮಿಮೀ ವ್ಯಾಸವನ್ನು ಹೊಂದಿರುತ್ತವೆ.ಇದು ಒಬ್ಲಾಂಗ್-ಓವಾಯಿಂಡ್, ಹಸಿರು-ಹಳದಿ ಬಣ್ಣವಿರುವ,ಒಂದು ಗೊರಟೆ ಹಣ್ಣು. ಇದರ ಒಂದೇ ಬೀಜವನ್ನು ಸಿಹಿತಿರುಳು ಸುತ್ತುವರೆದಿರುತ್ತದೆ.